ಇಂಡಿಯಲ್ಲಿ ಕೊಳವೆ ಭಾವಿ ದುರಂತ : ಮಗುವಿನ ರಕ್ಷಣೆಗೆ ನಿರಂತರ 15 ಘಂಟೆಗಳ ಕಾರ್ಯಾಚರಣೆ
ಇಂಡಿ : ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಂತಹ ಕೊಳವೆ ಬಾವಿ ದುರಂತದಲ್ಲಿ ಸಾತ್ವೀಕ್ ರಕ್ಷಣೆಗೆ ಸತತ 15 ಗಂಟೆಗಳ ಕಾರ್ಯಾಚರಣೆ ಮುಂದುವರಿದಿದೆ. ನಿನ್ನೆ ಸಂಜೆ 6 ಗಂಟೆಗೆ ಕಾರ್ಯಾಚರಣೆ ಮಾಡಲಾಗುತ್ತಿದೆ. 20 ಅಡಿಗಳಷ್ಟು ಡಿಗ್ಗಿಂಗ್ ಮಾಡಿರುವ ರಕ್ಷಣಾ ತಂಡ. ಇದೀಗ್ 5 ಅಡಿಗಳಷ್ಟು ಸುರಂಗ ನಿರ್ಮಾಣ ಮಾಡ್ತಿದ್ದಾರೆ. ಈಗಾಗಲೇ ಅಡ್ಡ 5 ಅಡಿಗಳಷ್ಟು ಸುರಂಗ ನಿರ್ಮಾಣ ಮಾಡಲಾಗಿದೆ. ಕಾರ್ಯಾಚರಣೆಗೆ ಗಟ್ಟಿಯಾದ ಕಲ್ಲು ಬಂಡೆಗಳ ಅಡ್ಡಿ ಆಗ್ತಿದೆ.
ಕಲ್ಲುಗಳನ್ನ ಬ್ರೇಕ್ ಮಾಡುತ್ತ ಕಾರ್ಯಾಚರಣೆ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.
ಅಗ್ನಿಶಾಮಕ ದಳ, ಬೆಳಗಾವಿ, ಕಲಬುರ್ಗಿಯಿಂದ ಆಗಮಿಸಿರುವ ಎರಡು SDRF ತಂಡ ಕೊಳವೆ ಬಾವಿ ಕೊರೆಯುವ ನುರಿತರ ತಂಡಗಳಿಂದ ನಿರಂತರ ಕಾರ್ಯಾಚರಣೆ ಮಾಡಲಾಗುತ್ತಿದೆ. ಕಾರ್ಯಾಚರಣೆಗೆ ಎರಡು ಹಿಟ್ಯಾಚಿ, ಬ್ರೇಕರ್‌ಗಳ ಬಳಕೆ ಮಾಡಲಾಗಿದೆ. ಕಾರ್ಯಾಚರಣೆ ನೋಡಲು ಕಿಕ್ಕಿರಿದು ಸೇರಿದ ಜನರು ಸೇರಿದ್ದಾರೆ.