ನಿವೃತ್ತ ಶಿಕ್ಷಕ ಬಿ.ಆಯ್.ಬಿರಾದಾರಗೆ ಸನ್ಮಾನ
ಇಂಡಿ: ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ.ಆಯ್. ಬಿರಾದಾರ ಇತ್ತೀಚೆಗೆ ನಿವೃತ್ತಿಯಾದ ಹಿನ್ನಲೆ ಇಲ್ಲಿನ ಶಾಲಾ ಸಿಬ್ಬಂದಿ ಎಸ್.ಡಿ.ಎಂ.ಸಿ ವತಿಯಿಂದ ಶಿಕ್ಷಕ ದಂಪತಿಗೆ ಸನ್ಮಾನಿಸಿ ಗೌರವಿಸಿ ಬಿಳ್ಕೊಡಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಿಆರ್‌ಪಿ ಎಸ್.ಬಿ. ಬಿರಾದಾರ ಭಾಗವಹಿಸಿ ಮಾತನಾಡಿ, ನಿವೃತ್ತ ಶಿಕ್ಷಕ ಬಿ.ಆಯ್. ಬಿರಾದಾರ ಅವರು ಒಬ್ಬ ಒಳ್ಳೆಯ ಕ್ರೀಡಾಪಟುವಾಗಿ, ಸಾಹಿತಿಯಾಗಿ, ಯೋಗ ಪಟುಗಳಾಗಿ ನುರಿತ ಶಿಕ್ಷಕರಾಗಿ ಮಕ್ಕಳಿಗೆ ಪರಿಣಾಮಕಾರಿಯ ಶಿಕ್ಷಣ ನೀಡಿದ್ದಾರೆ. ಇವರ ಸೇವೆ ತೃಪ್ತಿ ತಂದಿದೆ. ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ನಿವೃತ್ತ ಶಿಕ್ಷಕ ಬಿ.ಆಯ್. ಬಿರಾದಾರ ಮಾತನಾಡಿ, ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳ ಆಶಿರ್ವಾದದಿಂದ ಇದೇ ಶಾಲೆಯಲ್ಲಿ ಶಿಕ್ಷಣ ಪಡೆದು ಇದೇ ಶಾಲೆಯಲ್ಲಿ ಶಿಕ್ಷಕನಾಗಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವದು ಸಂತಸ ತೃಪ್ಪಿ ಮೂಡಿಸಿದೆ. ಇಲ್ಲಿನ ಶಾಲಾ ಸಿಬ್ಬಂದಿ ಗ್ರಾಮಸ್ಥರು ಸೇವಾ ಅವಧಿಯಲ್ಲಿ ಸಹಕಾರ ನೀಡಿರುವದನ್ನು ಸ್ಮರಿಸಿದ ಅವರು ಇಲ್ಲಿ ವಿದ್ಯೆ ಕಲಿತ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಡಿ.ಜಿ. ಬಿರಾದಾರ, ಸದಸ್ಯ ದತ್ತು ಮುಜಗೊಂಡ ಶಾಲಾ ಮುಖ್ಯೋಪಾಧ್ಯಾಯ ವೈ.ಬಿ. ಗಿರಣ ವಡ್ಡರ, ಶಿಕ್ಷಕರಾದ ಎಸ್.ಎಚ್. ಲಚ್ಯಾಣ, ಎಸ್.ಆರ್. ಬನಸೋಡೆ, ಆರ್.ಪಿ. ನಿಂಬರಗಿ, ಎನ್.ಆರ್. ವಾಲಿ, ಪಿ.ಎಸ್. ವಾಲಿ, ಎಸ್.ಎಚ್. ಬೋರಾಮಣ , ಡಿ.ಎಸ್.ಕಣಮಸ, ಎಸ್.ಎಸ್.ಹೊಸೂರೆ, ಪಿ.ಬಿ. ತಳವಾರ, ಎಸ್.ಎಂ. ಮಠಪತಿ, ಪಿ.ಎಸ್. ಕುಂಬಾರ, ಪಿ.ಬಿ. ಸುತಾರ, ಆಶಾ ಬಡಿಗೇರ, ಮಂಜುಳಾ ಕೆ. ಸುಮನ್ ಪುಡೂರ, ಅತಿಥಿ ಶಿಕ್ಷಕರಾದ ಆರ್.ಎಸ್. ಕರಮಾಳ, ಎಂ.ಎಸ್.ಕೋಷ್ಠಿ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.


















