ಮಸ್ಕಿ: ಪ್ರಕೃತಿ ಫೌಂಡೇಶನ್ (ರಿ) ಮಸ್ಕಿ ವತಿಯಿಂದ ಬಳಗಾನೂರಿನ ಶ್ರೀ ಮಾರುತಿ ದೇವಸ್ಥಾನದ ಹತ್ತಿರ ವಿಜಯಪುರದ ಜ್ಞಾನಯೋಗಾಶ್ರಮದ ಅನಂತ ಚೇತನ, ಶತಮಾನದ ಸಂತ, ನಡೆದಾಡುವ ದೇವರು, ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಪ್ರಕೃತಿ ಫೌಂಡೇಷನ್ ಸಂಸ್ಥಾಪಕ ಶಿವಮೂರ್ತಿ ಗದ್ಗಿಮಠ ಮಾತನಾಡಿ ಆಧ್ಯಾತ್ಮದ ಆಗಸದಲ್ಲಿ ದೇವರಾದ ಮಹಾತ್ಯಾಗಿ ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿ ಲಕ್ಷಾಂತರ ಭಕ್ತಾದಿಗಳ ಕಣ್ಣಿನಿಂದ ದೂರವಾಗಿದ್ದಾರೆ. ಆದರೆ ಶ್ರೀಗಳು ಲಕ್ಷಾಂತರ ಭಕ್ತರ ಹೃದಯದಲ್ಲಿ ಸದಾ ಶ್ರೀಗಳು ಜೀವಂತವಾಗಿದ್ದಾರೆ.
ಶ್ರೀಗಳು ತಮ್ಮ ಜೀವಿತದ 82 ವರ್ಷಗಳ ಕಾಲ ಭಕ್ತಾದಿಗಳ ಜೊತೆಯಲ್ಲಿ ನಿಷ್ಕಲ್ಮಶ ನಗುವಿನ ಮೌನಯೋಗಿಯಾಗಿ ತುಂಬು ಜೀವನ ನಡೆಸಿದ್ದಾರೆ. ಶ್ರೀಗಳ ನೆನಪಿಗಾಗಿ 82 ಸಸಿಗಳನ್ನು ಭಕ್ತರಿಗೆ ನೀಡಲಾಗುತ್ತದೆ. ಭಕ್ತರು ಈ ಸಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಿ ಬೆಳೆಸಬೇಕು ಎಂದರು.
ಈ ಸಂದರ್ಭದಲ್ಲಿ ರಂಗನಾಥ ಪೂಜಾರಿ, ಬಸವರಾಜ್ ಎಸ್, ಶರಣಪ್ಪ ಮರಡ್ಡಿ, ಸೂರ್ಯ ನರಸಿಂಹ ಬಿ, ಮೌನೇಶ್, ಮಂಜುನಾಥ್ ತಡ್ಕಲ್, ಹನುಮತ, ದೀಪಕ್ ಜೈನ್, ಪಾಂಡುರಂಗ, ಸಂದೀಪ,ಯಂಕಣ್ಣಗೌಡ,ರಾಚಪ್ಪ ಕಲ್ಲೂರ್, ಶರಣಪ್ಪ ಎಸ್, ರಮೇಶ್, ಅಂದನಪ್ಪ, ಹಾಗೂ ಭಕ್ತಾದಿಗಳು ಮತ್ತು ಪ್ರಕೃತಿ ಫೌಂಡೇಶನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.