ಕಲಬುರಗಿ: ಒಂದು ವಾರದ ಹಿಂದೆ ಅಫಜಲಪೂರ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ವರ್ಗಾವಣೆ ಆಗಿ ಹೋಗಿರುವುದರಿಂದ ಖಾಲಿಯಾದ ಕಲ್ಯಾಣಾಧಿಕಾರಿ ಹುದ್ದೆಗೆ 200 ಕಿ.ಮಿ. ದೂರದ ಚಿಂಚೋಳಿ ತಾಲೂಕಿನ ಅನುಸೂಯಾ ಚವಾಣ್ ಇವರಿಗೆ ಅಫಜಲಪೂರ ತಾಲೂಕಿಗೆ ಹೆಚ್ಚುವರಿ ಪ್ರಭಾರ ವಹಿಸಿರುತ್ತಾರೆ. ಇದರಿಂದಾಗಿ ತಾಲೂಕಿನ ಪ್ರಗತಿ ಕುಂಠಿತವಾಗುತ್ತದೆ. ಆದುದರಿಂದ, ತಕ್ಷಣವೇ ಅಫಜಲಪೂರ ತಾಲೂಕಿಗೆ ಸಮೀಪ ಇರುವ ತಾಲೂಕಿನ ಅಧಿಕಾರಿಗಳಿಗೆ ಅಥವಾ ಈ ಹಿಂದೆ ಕರ್ತವ್ಯ ನಿರ್ವಹಿಸಿರುವ ದಕ್ಷ ಅಧಿಕಾರಿಯಾದ ಶ್ರೀಮತಿ ಕರಬಸಮ್ಮ ಪೂಜಾರಿ ಇವರಿಗೆ ಅಫಜಲಪೂರ ತಾಲೂಕಿಗೆ ಹೆಚ್ಚುವರಿ ಪ್ರಭಾರ ವಹಿಸಿ ಆದೇಶಿಸಬೇಕು ಎಂದು ಅಫಜಲಪುರ ತಾಲೂಕು ದಲಿತ ಸೇನೆ, ಸಂಗೋಳ್ಳಿ ರಾಯಣ್ಣ ಯುವ ಘರ್ಜನೆ, ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ, ಹಾಗೂ ಅಫಜಲಪುರ ನಾಗರಿಕರ ವತಿಯಿಂದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಶ್ರೀ ರಮೆಶ ಜಿ. ಸಂಗಾ ಅವರಿಗೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಸೇನೆ ಯಾಲೂಕು ಅಧ್ಯಕ್ಷ ಮಾಹಾಂತೇಶ ಬಳೂಂಡಗಿ, ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ಅಧ್ಯಕ್ಷ ಗುರುದೇವ ಡಿ, ಸಂಗೋಳ್ಳಿ ರಾಯಣ್ಣ ಯುವ ಘರ್ಜನೆ ಅಧ್ಯಕ್ಷ ಯಲ್ಲಾಲಿಂಗ ಕೆ.ಪಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.