ವಿಜಯಪುರ : ಬಸ್‌ನ ಮೇನ್ ಫಾಟಕ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಬೇವಿನ ಮರಕ್ಕೆ ಡಿಕ್ಕಿ ಹೊಡೆದಿದ್ದು 70 ಜನರಿಂದ ಬಸ್‌ನಲ್ಲಿ ಮೂವರು ಗಾಯಗೊಂಡಿರುವ ಘಟನೆ ವಿಜಯಪುರದ ನಾಗಠಾಣ ಮತ್ತು ಅಲಿಯಾಬಾದ್ ಮಧ್ಯೆ ನಡೆದಿದೆ. ಇಂಡಿಯಿಂದ ವಿಜಯಪುರಕ್ಕೆ ಹೊರಟಿದ್ದ ಇಂಡಿ ಡಿಪೋದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಆಳ ತಗ್ಗಿನಲ್ಲಿರುವ ಬೇವಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಮರ ಇರದೇ ಹೋಗಿದ್ದರೆ ಬಸ್ ನೇರವಾಗಿ ಬಾವಿಗೆ ಬೀಳುತ್ತಿತ್ತು. ಗಾಯಗೊಂಡಿರುವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.