ವಿಜಯಪುರ: ಯುರೋಪ್, ರಷ್ಯಾ, ಅಮೆರಿಕ, ಇರಾನ್ ತಾವು ಮುಂದು ಎಂದು ಕಹಲ ಹೆಚ್ಚಳವಾಗುತ್ತದೆ. ದೇಶದಲ್ಲಿ ಅಹಂಕಾರವಾಗಿ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಬಬಲಾದಿ ಮಠದ ಶ್ರೀಗಳು ಭವಿಷ್ಯವನ್ನು ನುಡಿದಿದ್ದಾರೆ. ವಿಜಯಪುರ ಜಿಲ್ಲೆಯ ಬಬಲಾದಿ ಸದಾಶಿವ ಅಜ್ಜನವರ ಜಾತ್ರೆಯಲ್ಲಿ 2022ರ ಕಾಲಜ್ಞಾನದ ಭವಿಷ್ಯವಾಗಿದೆ. ಜಗತ್ತಿನಲ್ಲಿ ಅತಿ ಕೆಟ್ಟ ಪರಿಸ್ಥಿತಿಯಾಗಿ ಪಾಪ ಹೆಚ್ಚಾಗುತ್ತದೆ. ದೇಶದಲ್ಲಿ ಶಾಂತಿ ಸೌಹಾರ್ದದ ಕೊರತೆ ಉಂಟಾಗುತ್ತದೆ. ಏಪ್ರಿಲ್‌ನಿಂದ ಅಗಸ್ಟ್ ವರೆಗೂ ಪಾಪ ಕೈ ಮೀರಿ ಹೋಗುತ್ತದೆ. ಸುನಾನಿ, ಗಾಳಿ, ಭೂಕಂಪನ ಆಗುತ್ತದೆ. ರಾಜ್ಯದಲ್ಲಿ ಮುಂಗಾರು ಮಳೆಯಾಗಿ ಬೆಳೆಗಳು ಹೆಚ್ಚಾಗುತ್ತದೆ. ಹಿಂಗಾರು ಮಳೆಯಲ್ಲಿ ಮಧ್ಯಮ ಬೆಳೆ ಇದೆ ಎಂದು ಸದಾಶಿವ ಅಜ್ಜನವರು ಭವಿಷ್ಯವಾಣಿಯನ್ನು ನುಡಿದಿದ್ದಾರೆ.