ನಮ್ಮ ಎಕ್ಸಪರ್ಟ್ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ವೈದ್ಯರಾಗಿ ಇಂಜಿನಿಯರ್,ವೆಟನರಿ, ಉದ್ಯಮಿಗಳು ಆಗಿದ್ದಾರೆ.
ಹಿಂದಿನ ಕಾಲದಲ್ಲಿ ಶಿಕ್ಷಣ ಕಡಿಮೆ ಇತ್ತು ಆದರೆ ಸಂಸ್ಕಾರ ತುಂಬಾ ಇತ್ತು ಇಂದು ಶಿಕ್ಷಣ ಹೆಚ್ಚಾಗಿದೆ ಆದರೆ ಸಂಸ್ಕಾರ ತುಂಬಾ ಕಡಿಮೆಯಾಗಿದೆ.
ಯಾರು ಕಷ್ಟಪಟ್ಟು ಜ್ಞಾನ ಸಂಪಾದನೆ ಮಾಡುತ್ತಾರೋ ಅವರು ನಿಜವಾದ ಸಿರಿವಂತರು
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ :ಯಾರು ಕಷ್ಟಪಟ್ಟು ಜ್ಞಾನ ಸಂಪಾದನೆ ಮಾಡುತ್ತಾರೋ ಅವರು ನಿಜವಾದ ಸಿರಿವಂತರು ಹಿಂದಿನ ಕಾಲದಲ್ಲಿ ಶಿಕ್ಷಣ ಕಡಿಮೆ ಇತ್ತು ಆದರೆ ಸಂಸ್ಕಾರ ತುಂಬಾ ಇತ್ತು ಇಂದು ಶಿಕ್ಷಣ ಹೆಚ್ಚಾಗಿದೆ ಆದರೆ ಸಂಸ್ಕಾರ ತುಂಬಾ ಕಡಿಮೆಯಾಗಿದೆ ಎಂದು ಮುದ್ದೇಬಿಹಾಳ ಹೊಸಮಠದ ಶ್ರೀ ಅಮರೇಶ್ವರ ದೇವರು ಹೇಳಿದರು ಅವರು ರವಿವಾರ ತಾಲೂಕಿನ ನಾಗರಬೆಟ್ಟದ ಬಸ್ ನಿಲ್ದಾಣ ಬಳಿಯ ಆಕ್ಸಪರ್ಡ್ ಮಠ್ಸ ಸಮೂಹ ಶಿಕ್ಷಣ ಸಂಸ್ಥೆಯ ಎಕ್ಸಪರ್ಟ್ ಪಿಯು ಸೈನ್ಸ ಕಾಲೇಜಿನ ಪ್ರಥಮ ಪಿಯು ಪ್ರವೇಶಾತಿ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆಯ ಪ್ರಶಸ್ತಿ ಪ್ರಧಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಬಿ ಜಿ ಮಠ ತುಮಕೂರು ಸಿದ್ದಗಂಗಾ ಶ್ರೀಗಳ ತತ್ವ ಆದರ್ಶ ನಮಗೆ ಮಾರ್ಗದರ್ಶಕ ದೀಪವಾಗಿದೆ ಅವರ ತ್ರಿವಿಧ ದಾಸೋಹ ತತ್ವ ನಮಗೆ ಪ್ರೇರಣೆಯಾಗಿದೆ ಆ ಸೇವಾ ತಾತ್ವಿಕತೆಯನ್ನು ಸಂಸ್ಥೆಯಲ್ಲಿ ಜೀವಂತವಾಗಿಟ್ಟುಕೂಂಡಿದ್ದೇವೆ ನಮ್ಮ ಉದ್ದೇಶ ಶಿಕ್ಷಣದ ಮೂಲಕ ಬೆಳಕನ್ನು ಹರಡುವುದಾಗಿದೆ ಈ ಸ್ಪರ್ಧಾತ್ಮಕ ಪರೀಕ್ಷೆಗಳು ಕೇವಲ ಪರೀಕ್ಷೆಯಲ್ಲ ಪ್ರತಿಮೆಯ ಅನ್ವೇಷಣೆ ಪ್ರೋತ್ಸಾಹ ನೀಡುವುದಾಗಿದೆ ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ವೈದ್ಯರಾಗಿ ಇಂಜಿನಿಯರ್,ವೆಟನರಿ, ಉದ್ಯಮಿಗಳು ಆಗಿದ್ದಾರೆ ಕಳೆದ ವರ್ಷ ನಮ್ಮ ಎಕ್ಸಪರ್ಟ್ ಪಿಯು ಕಾಲೇಜು ರಾಜ್ಯಕ್ಕೆ 8ನೇ ರ‌್ಯಾಂಕ್ ಬಂದಿದೆ ಎಂದರು .
ಈ ವೇಳೆ ಅತಿಥಿಗಳಾದ ವಿ ಎಸ್ ಮಳಗಿ, ಎಸ್ ಬಿ ಶೆಟ್ಟರ್ ಮಾತನಾಡಿ ರ‌್ಯಾಂಕ್ ಎಂದರೆ ದಕ್ಷಿಣ ಕರ್ನಾಟಕದ ವಿದ್ಯಾರ್ಥಿಗಳು ಎನ್ನುತ್ತಿದ್ದರು ಉ.ಕ ಮಕ್ಕಳು ಸಹ ರ‌್ಯಾಂಕ್ ಬರುತ್ತಾರೆ ಬಿ ಜಿ ಮಠ ಗುರುಗಳು ತಮ್ಮ ಸಂಸ್ಥೆಯ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.
ಎಕ್ಸಪರ್ಟ್ ಟ್ಯಾಲೆಂಟ್ ಅವಾರ್ಡ್ ವಿಜೇತರು
ಪ್ರಥಮ ನಗದು ಬಹುಮಾನ 25 ಸಾವಿರ ರೂ ಹಾಗೂ ಆಕರ್ಷಕ ಟ್ರೋಫಿ ಪಡೆದ ವಿದ್ಯಾರ್ಥಿ ರೇವಣಸಿದ್ದಪ್ಪ ಹಾಲ್ಯಾಳ ದ್ವೀತಿಯ ನಗದು 20 ಸಾವಿರ ಬಹುಮಾನ ರಚನಾ ಮೀಸೆ ತೃತೀಯ 15 ಸಾವಿರ ನಗದು ಬಹುಮಾನ ಕಾರ್ತಿಕ ಹಿರೇಗೌಡರ, ನಾಲ್ಕನೇ ನಗದು ಬಹುಮಾನ 10 ಸಾವಿರ ರೂ ಕಾರ್ತೀಕ ಕನಕರೆಡ್ಡಿ ಐದನೇ ನಗದು 5 ಸಾವಿರ ಸಚೀನ ಸಜ್ಜನ ಪಡೆದಿದ್ದಾರೆ ರ‌್ಯಾಂಕ್ ಬಂದ ಈ ಐದು ವಿದ್ಯಾರ್ಥಿಗಳಿಗೆ 2 ಲಕ್ಷ 25 ಸಾವಿರ ಶಿಷ್ಯವೇತನದೂಂದಿಗೆ 2 ವರ್ಷ ಉಚಿತ ಶಿಕ್ಷಣವನ್ನು ನೀಡಲಾಗುತ್ತದೆ ಕಾರ್ಯಕ್ರಮದಲ್ಲಿ ಮೆಡಿಕಲ್ ವಿಭಾಗಕ್ಕೆ ಆಯ್ಕೆಯಾದ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಸವಪ್ರಭು ಮಹಾಸ್ವಾಮಿಗಳು, ಪುರವಂತರಾದ ಬಸಯ್ಯ ಹಿರೇಮಠ, ಪಿಡಿಒ ಆನಂದ ಹಿರೇಮಠ, ಕಲಾಂ ಸಹಕಾರಿ ಸಂಘದ ಅಧ್ಯಕ್ಷ ಅಕ್ಷರ ಮುಲ್ಲಾ, ಆಡಳಿತ ಅಧಿಕಾರಿ ಪ್ರಜ್ವಲ ಮಠ ವೇದಿಕೆಯಲ್ಲಿದ್ದರು.
ಕಾಶಿನಾಥ ಕುಲಕರ್ಣಿ ಪ್ರಾರ್ಥಿಸಿದರು ಪ್ರಾಚಾರ್ಯ ಇರ್ಪಾನ್ ಬಾಗವಾನ ಪ್ರಾಸ್ತಾವಿಕ ನುಡಿಗಳನ್ನಾಡಿದರು ಹೀರೂ ನಾಯಕ ಸ್ವಾಗತಿಸಿದರು,ಮಲ್ಲು ಕಾಂಬಳೆ, ಶಿವಯ್ಯ ಹಿರೇಮಠ ನಿರೂಪಿಸಿದರು ಅಶೋಕ ಗಡ್ಡಿ ವಂದಿಸಿದರು.