ಉತ್ತಮ ಶೈಕ್ಷಣಿಕ ಪ್ರಗತಿಗಾಗಿ ಸದೃಢ ಆರೋಗ್ಯ ಬಹುಮುಖ್ಯ
ಇಂಡಿ: ಆರೋಗ್ಯಕರ ಜೀವನಕ್ಕಾಗಿ ಹದಿಹರೆಯದ ಹೆಣ್ಣುಮಕ್ಕಳಲ್ಲಿ ರಕ್ತ ಹೀನತೆ ಸಾದ್ಯತೆ ಹೆಚ್ಚು. ನಿಮ್ಮ ಉತ್ತಮ ಶೈಕ್ಷಣಿಕ ಪ್ರಗತಿಗಾಗಿ ಸದೃಢ ಆರೋಗ್ಯ ಬಹುಮುಖ್ಯ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಅರ್ಚನಾ ಕುಲಕರ್ಣಿ ಹೇಳಿದರು. ಬುಧವಾರ ತಾಲೂಕಿನ ಝಳಕಿ ಗ್ರಾಮದ ಸರಕಾರಿ ಬಾಲಕ-ಬಾಲಕಿಯರ ಪದವಿ ಪೂರ್ವ ಕಾಲೇಜುನಲ್ಲಿ ಪೌಷ್ಠಿಕ
ಆಹಾರ ಸಮತೋಲನ ಆಹಾರ ಅನಿಮೀಯಾ ಮುಕ್ತ
ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಝಳಕಿಯ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಸತೀಶ್ ಪಾಟೀಲ ಮಾತನಾಡಿ, ರಕ್ತ ಹೀನತೆಯು ದೇಹದ ಅಂಗಾಗಗಳಿಗೆ ಆಮ್ಲಜನಕವನ್ನು ಸಾಗಿಸಲು ಸಾಕಷ್ಟು ಆರೋಗ್ಯಕರ ಕೆಂಪು ರಕ್ತ ಕಣಗಳು ಅಥವಾ ಹಿಮೋಗ್ಲೋಬಿನ್ ಇಲ್ಲದಿರುವ ಸಮಸ್ಯೆಯಾಗಿದೆ. ಶ್ವಾಸಕೋಶದ ಮೂಲಕ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸುವ ಕೆಲಸ ಮಾಡುತ್ತದೆ. ತಲೆನೋವು, ಸುಸ್ತು ಆಯಾಸ ಉಸಿರಾಟದ ತೊಂದರೆ, ತಲೆತಿರುಗುವಿಕೆ ಎದೆ ನೋವು ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪಾಂಶುಪಾಲರಾದ ಸಿ.ಕೆ.
ಯಳಸಂಗಿ, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ, ಡಾ. ಆಯ್.ಎಮ್. ಬಿರಾದಾರ, ಎಸ್.ಆರ್. ಗೊಟ್ಯಾಳ್, ಪ್ರಕಾಶ ಈರಗಾರ, ಸಾಗರ ಬಂಡೆನವರ್, ದಾನಮ್ಮಾ ರೆವತಗಾಂವ್, ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿ-ವಿಧ್ಯಾರ್ಥಿನಿಯೆರು ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.