ಸಿಂದಗಿ : ಜಮೀನಿನಲ್ಲಿನ ಮೋಟಾರು ಕಳ್ಳತನಗೈದು ಪರಾರಿಯಾಗಿದ್ದ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ರವಿವಾರ ನಡೆದಿದೆ.
ಚಂದ್ರಕಾಂತ ವಾಘಮೋಡೆ, ಸುನೀಲ ಮೋರೆ, ಸಂಜಯ ಮೋರೆ ಬಂಧಿತ ಆರೋಪಿಗಳು. ಇನ್ನೂ ಬಾಬುಗೌಡ ಪಾಟೀಲ್ ಹಾಗೂ ಗುರಪ್ಪ ಕೊಲ್ಲೂರು ಎಂಬುವರ ಜಮೀನಿನಲ್ಲಿ ಮೋಟಾರು ಕಳ್ಳತನ ಆಗಿತ್ತು. ಅದಕ್ಕಾಗಿ ಆರೋಪಿಗಳ ಬಂಧನಕ್ಕೆ ಒಂದು ತಂಡ ರಚಿಸಿ ತನಿಖೆಕೊಂಡು ಆರೋಪಿಗಳ ಬಂಧಿಸಿದ್ದಾರೆ. ಅಲ್ಲದೇ, ಬಂಧಿತರಿಂದ 2.70 ಲಕ್ಷ ಮೌಲ್ಯದ 13 ಮೋಟಾರು ಹಾಗೂ ಎರಡು ಟಂಟಂ ವಾಹನಗಳು ಜಪ್ತಿಗೈದಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.