ಇಂಡಿ : ಕಳ್ಳರು ಸರಣಿ ಕಳ್ಳತನಗೈದು ಹಣ ಹಾಗೂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ರವಿವಾರ ತಡರಾತ್ರಿ ನಡೆದಿದೆ. ಕರಿಯಸಿದ್ದೇಶ್ವರ ದೇವಸ್ಥಾನದಲ್ಲಿ ಬೀಗ ಮುರಿದು ಸುಮಾರು 20 ತೊಲಾ ಚಿನ್ನ ದೋಚಿದ್ದಾರೆ. ದೇವಸ್ಥಾನ ಹತ್ತಿರದ ಪರಶುರಾಮ ಬಂಗಾರಿ ಎಂಬುವವರ ಮನೆಯಲ್ಲಿದ್ದ ಹಣ ದೋಚಿದ್ದಾರೆ. ಕಬ್ಬಿನ ಬಿಲ್ ಪಡೆದು ತಂದಿಟ್ಟಿದ್ದ 80 ಸಾವಿರ ರೂಪಾಯಿ ದೋಚಿದ್ದಾರೆ. ಬೀರೇಶ್ವರ ದೇವಸ್ಥಾನದ ಬೀಗ ಮುರಿದಿದ್ದು, ಕಳ್ಳತನಕ್ಕೆ ಯತ್ನಿಸಿದ್ದಾರೆ. ಇಂಡಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.