ಚಡಚಣ : ಟಿವಿ, ನಗದು, ಚಿನ್ನ ದೊಚಿಕೊಂಡು ಪರಾರಿಯಾದ ಕಳ್ಳರು. ಬೆಸಿಗೆ ಹಿನ್ನೆಲೆ ಮನೆಯವರು ಮನೆಯ ಮಾಳಿಗಿಯ ಮೇಲೆ ಮಲಗಿದ್ದ ವೇಳೆಯಲ್ಲಿ ಕಳ್ಳರು ಕೈ ಚಳಕ ತೋರಿದ್ದ ಘಟನೆ ನೂತನ ಚಡಚಣ ತಾಲ್ಲೂಕಿನ ಬರಡೋಲ ಗ್ರಾಮದಲ್ಲಿ ನಡೆದಿದೆ. ನಾಗಪ್ಪ ಕಾಪ್ಸೆ ಎಂಬುವರ ಮನೆಯಲ್ಲಿ 1.5 ಗ್ರಾಮ ಚಿನ್ನಾಭರಣ ಹಾಗೂ 35 ಸಾವಿರ ರೂಪಾಯಿ ನಗದು ಕಳ್ಳತನಗೈದಿದ್ದಾರೆ. ಇನ್ನೂ ಎಲ್ಲವ್ವ ಕಟ್ಟಿಮನಿ ಅವರ ಮನೆಯಲ್ಲಿ ಹೊಮ್ ಥಿಯೇಟರ್, ಟಿವಿ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಚಡಚಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.