ಲಿಂಗಸೂಗೂರು: ಹಲವು ವರ್ಷದಿಂದ ಆ ಗ್ರಾಮದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗಿದ್ದವು. ಆದ್ರೇ, ಗ್ರಾಮಸ್ಥರ ಸಮಯ ಪ್ರಜ್ಞೆ ಯಿಂದ ಇಬ್ಬರು ಕಳ್ಳರು ಲಾಕ್ ಆಗಿದ್ದಾರೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಾಗರಹಾಳ ಗ್ರಾಮದಲ್ಲಿ ಮನೆ ಕಳ್ಳತನಕ್ಕೆ ಮುಂದಾಗಿದ್ದ ಖದೀಮರು ಎರಡು ಮನೆಗಳನ್ನು ಕಳ್ಳತನ ಮಾಡಿ ಮೂರನೆ ಮನೆಗೆ ಲಗ್ಗೆ ಇಟ್ಟಿದ್ದರು. ಮೂರನೆ ಮನೆ ಕಳ್ಳತನ ಮಾಡುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಇಲಕಲ್ ಮೂಲದ ಕಳ್ಳರು ಗ್ರಾಮದ ನಿಂಗಪ್ಪ ಅಗ್ನಿ, ಬಸವರಾಜಪ್ಪ ಬಿರಾದಾರ್ ಮನೆ ಕಳ್ಳತನ ಮಾಡಿ ನಾಗನಗೌಡ ಪಾಟೀಲ್ ಮನೆಗೆ ಎಂಟ್ರಿ ಕೊಟ್ಟು ಮನೆಯ ಬೀಗ ಮುರಿದು ಖದೀಮರು ಮನೆ ಒಳಗೆ ಹೋಗಿದ್ದರು. ಇದನ್ನು ಗಮನಿಸಿದ ಕುಟುಂಬಸ್ಥರು ಕಳ್ಳರನ್ನು ಒಳಗಡೆ ಕೂಡಿ ಹಾಕಿ ಲಾಕ್ ಮಾಡಿದ್ದಾರೆ. ಇನ್ನು ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ. ಮದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.