ಕೇಂದ್ರ ಸರಕಾರದ ತೀರ್ಮಾನಕ್ಕೆ ತಕರಾರು ಇಲ್ಲ..! ಆದರೆ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಿ : ಡಿಕೆಶಿ
ವಿಜಯಪುರ: ಬಿಜೆಪಿಯ ಭೀಷ್ಮ ಖ್ಯಾತಿಯ ಎಲ್.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ನೀಡಿದಕ್ಕೆ ನಮ್ಮ ತಕರಾರು ಇಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಮೂಲ ನಂದಿ ದೇಗುಲಕ್ಕೆ ಡಿಕೆಶಿ ಭೇಟಿ ನೀಡಿ, ತದನಂತರ ಮಾತನಾಡಿದರು.
ಅಡ್ವಾಣಿಯವರು ದೇಶದಲ್ಲಿ ಹಿರಿಯ ರಾಜಕಾರಣಿ. ಭಾರತ ರತ್ನ ನೀಡಿದ್ದಕ್ಕೆ ನಮ್ಮ ತಕರಾರು ಇಲ್ಲ. ಕೇಂದ್ರ ಸರ್ಕಾರದ ತೀರ್ಮಾನಕ್ಕೆ ನಮ್ಮದೇನು ತಕರಾರು ಇಲ್ಲ. ಆದ್ರೇ, ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಿ ಎಂದಿದ್ದೇವೆ. ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ನಮ್ಮ ಸರ್ಕಾರ ಮನವಿ ಮಾಡಿತ್ತು. ಅದು ಅವರಿಗೆ ಬಿಟ್ಟ ವಿಚಾರ. ನಮ್ಮ ರಾಜ್ಯದಲ್ಲಿ ಅನ್ನದಾಸೋಹಕ್ಕೆ ಶ್ರೀಗಳು ಹೆಸರಾಗಿದ್ದರು. ಅವರಿಗೆ ಗೌರವ ಸಲ್ಲಿಸಬೇಕು ಅನ್ನೋದು ನಮ್ಮ ಒತ್ತಾಯವಿದೆ. ಬಳಿಕ ಯಾವುದೇ ಪ್ರಶ್ನಿಗಳಿಗೂ ಉತ್ತರಿಸದೆ ಡಿಕೆಶಿ ತೆರಳಿದರು.