ವಿದ್ಯಗಿಂತ ಜಗತ್ತಿನಲ್ಲಿ ಯಾವ ದೊಡ್ಡ ಆಯುಧ ಇಲ್ಲ : ಶಿರಶ್ಯಾಡ ಶ್ರೀಗಳು
ಇಂಡಿ : ಭಗೀರಥ ಮಹರ್ಷಿ ಅವರನ್ನು ಏಕೆ ಸ್ಮರಿಸಿಕೊಳ್ಳುತ್ತಾರೆ. ಪಟ್ಟಣದಲ್ಲಿ ಪ್ಲಾಟ್ ಖರದಿಸಿದ್ದಾರೆಯೇ..? ಸ್ವಿಸ್ ಬ್ಯಾಂಕ್ ನಲ್ಲಿ ಹಣ ಇಟ್ಟದ್ದಾರೆಯೇ..? ಇಲ್ಲ..! ನಿರಂತರ ಪ್ರಯತ್ನ ಮತ್ತು ಶ್ರಮದಿಂದ ಜಗತ್ತಿಗೆ ಅಮೂಲ್ಯವಾದ ವಸ್ತು ಕೊಡುಗೆ ನೀಡಿದ್ದಾರೆ. ಹಾಗಾಗಿ ಈ ಇಡೀ ನಾಡಿನಲ್ಲಿ ಸ್ಮರಿಸಿಕೊಳ್ಳುತ್ತೆವೆ ಎಂದು ಶಿರಶ್ಯಾಡದ ಅಭಿನವ ಮುರೇಘೆಂದ್ರ ಶಿವಾಚಾರ್ಯರು ಹೇಳಿದರು.
ಭಾನುವಾರ ಪಟ್ಟಣದ ತಾಲೂಕಾ ಆಡಳಿತ ಸೌಧದಲ್ಲಿ ತಾಲೂಕಾ ಆಡಳಿತ ವತಿಯಿಂದ ಹಮ್ಮಿಕೊಂಡ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಗಿರಥ ಮಹರ್ಷಿಯನ್ನು ನೆನೆಯುವುದು, ಕೊಂಡಾಡುವುದನ್ನು ಕಂಡರೆ ಸಮಾಜದಲ್ಲಿ ಜಾಗೃತಿ ಅಲೆ ಬೆಳೆದಿದೆ ಎಂದರ್ಥ. ಆದರೆ ಜಾಗೃತಿ ಅಲೆ ಕೇವಲ ಜಯಂತಿಗೆ ಸೀಮಿತವಾಗಿರದೆ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ಸಮುದಾಯದ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ, ಅವರ ಶಿಕ್ಷಣ ಭವಿಷ್ಯಕ್ಕೆ ಹೊಸ ಸ್ವರೂಪ ನೀಡುವ ಕಾರ್ಯ ನಿಮ್ಮಿಂದಾಗಬೇಕು. ವಿಧ್ಯೆ ಯಾರು ಸ್ವತ್ತು ಅಲ್ಲಾ..! ವಿದ್ಯಗಿಂತ ಜಗತ್ತಿನಲ್ಲಿ ಯಾವ ದೊಡ್ಡ ಆಯುಧ ಇಲ್ಲ. ಅದಕ್ಕಾಗಿ ಸಮುದಾಯದಲ್ಲಿರುವ ಅನಾನುಕೂಲ ಮಕ್ಕಳನ್ನು ಗುರುತಿಸಿ ಅವರ ಶಿಕ್ಷಣ ಭವಿಷ್ಯಕ್ಕೆ ಸಹಾಯ ಸಹಕಾರ ನೀಡಬೇಕು. ಅದಕ್ಕಾಗಿ ಬಿದ್ದವರನ್ನ ಬಿಳುತ್ತೀರುವವರನ್ನ ಎತ್ತಿ ಹಿಡಿದು ಸತ್ ಕೀರ್ತಿ ಕಾರ್ಯ ಮಾಡುವುದೆ ಧರ್ಮ.ವಿದ್ಯೆ ಕಲಿತರೆ ಮೇಲೂ ಕುಡತಾರೆ. ವಿದ್ಯೆ ಕಲಿತರೆ ಮೇಲೂ ಹತ್ತಿಕೊಂಡು ತಿರುಗಾಡುತ್ತಾರೆ. ಅದಕ್ಕಾಗಿ ವಿದ್ಯೆ ಕಲಿಸುವುದನ್ನು ಯಾರೂ ಮರೆಯಬೇಡಿ ಎಂದು ಕಿವಿಮಾತು ಹೇಳಿದರು.
ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ಉಪನ್ಯಾಸಕ ಶಿವಾನಂದ, ಭಗೀರಥ ಮಹರ್ಷಿ ಸಮಾಜ ಸೇವಾ ತಾಲೂಕಾ ಅಧ್ಯಕ್ಷ ಸುರೇಶ ಕರಂಡೆ, ಸಂಗಮೇಶ ಸೋನ್ನ, ಅನೀಲ ರೇಬಿನಾಳ ಮಾತನಾಡಿದರು.
ಉಪ್ಪಾರ ಸಮಾಜದ ಆರಾಧ್ಯ ದೈವ ಭಗೀರಥ ಮಹಾಸ್ವಾಮಿಗಳು ಲೋಕಕಲ್ಯಾಣಕಾಗಿ ಲೊಕಕಲ್ಯಾಣಾರ್ಥವಾಗಿ ಮನುಕುಲ ಉದ್ದಾರಕ್ಕಾಗಿ ಕಠಿಣ ತಪಸ್ಸಿನ ಮೂಲಕ ಶಿವನನ್ನು ಒಲಿಸಿಕೊಂಡು ದೇವಗಂಗೆಯನ್ನು ಧರೆಗೆ ಇಳಿಸಿ ಸಕಲ ಜೀವರಾಶಿಗಳನ್ನು ಉದ್ದರಿಸಿ ಪಾವನಗೊಳಿಸಿದ್ದಾರೆ ಹೇಳಿದರು.
ವೇದಿಕೆಯ ಮೇಲೆ ಭಗೀರಥ ಮಹರ್ಷಿ ಮಹಿಳಾ ಸಂಘದ ಅಧ್ಯಕ್ಷೆ ಅಂಬಿಕಾ ಚನಗೊಂಡ, ಗೌರವಾಧ್ಯಕ್ಷೆ ಶಾಂತಬಾಯಿ ನರಳೆ, ಸೋಮಶೇಖರ ಬ್ಯಾಳಿ, ಕಲಪ್ಪ ಕರಂಡೆ, ಸಿದ್ದರಾಮ ಉಪ್ಪಾರ, ದಯಾನಂದ ಹಬ್ಬಳ್ಳಿ, ಶಿವು ಉಪ್ಪಾರ, ಮಾಳು ದಳವಾಯಿ, ಜಟ್ಟೆಪ್ಪ ಉಪ್ಪಾರ, ವಿಠ್ಠಲ ಸೊನ್ನ, ಚಿದು ಉಪ್ಪಾರ, ಸಿದ್ರಾಮ ನರಳೆ ಸೇರಿಂತೆ ಅನೇಕರು ಇದ್ದರು.
ಇಂಡಿ: ಪಟ್ಟಣದ ತಾಲೂಕಾ ಆಡಳಿತ ಸೌಧದಲ್ಲಿ ತಾಲೂಕಾ ಆಡಳಿತ ವತಿಯಿಂದ ಹಮ್ಮಿಕೊಂಡ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಅಭಿನವ ಮುರೇಘೆಂದ್ರ ಶಿವಚಾರ್ಯರು ಮಾತನಾಡಿದರು.