ಪಿಡಿಓ ಸಿದ್ರಾಮ ಸಿನಖೇಡ ಕಾರ್ಯ ಶ್ಲಾಘನೀಯ, ಗ್ರಾಮಸ್ಥರು ಮೆಚ್ಚುಗೆ..! ಏನು ಕಾರಣ ಗೊತ್ತಾ..?
ಇಂಡಿ: ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಕಸ-ಕಡ್ಡಿಗಳಿಂದ ಚರಂಡಿಗಳು ತುಂಬಿದ್ದವು ಇದನ್ನು ಕಂಡ ತಾಲೂಕಿನ ಇಂಗಳಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ರಾಮ ಸಿನಖೇಡ ಅವರು ಮಾವಿನಹಳ್ಳಿ ಗ್ರಾಮದ ವಾರ್ಡ್ ನಂ ೪ ರ ಎಸ್.ಸಿ ಕಾಲೋನಿ ಯಲ್ಲಿ ಚರಂಡಿ ಸ್ವಚ್ಚತೆ ಮಾಡುವ ಮೂಲಕ ಗ್ರಾಮಸ್ಥರಿಗೆ ಮಾದರಿಯಾದರು.
ಚರಂಡಿ ನೀರು ರಸ್ತೆ ಮೇಲೆ ಬಂದು ಸ್ವಚ್ಛತೆ ಇಲ್ಲದೆ ಇದರಿಂದ ಡೆಂಗಿ, ಮಲೇರಿಯಾ, ಚಿಕನ್ ಗುನ್ಯಾ, ಟೈಫಾಯಿಡ್, ವಾಂತಿ-ಭೇದಿಯAತಹ ಪ್ರಕರಣಗಳು ವರದಿಯಾಗುತ್ತಿವೆ. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಯೇ ಸವಾಲಾಗಿದೆ. ತಾಲ್ಲೂಕಿನ ಪ್ರತಿಯೊಂದು ಗ್ರಾಮದಲ್ಲೂ ಸ್ವಚ್ಛತೆಯ ಸಮಸ್ಯೆ ಕಾಡುತ್ತಿದೆ. ಅದರಂತೆ ಇಂಡಿ ತಾಲ್ಲೂಕಿನ ಇಂಗಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಮಾವಿನಹಳ್ಳಿ ಗ್ರಾಮದ ಚರಂಡಿ ನೀರು ರಸ್ತೆಗೆ ಬಂದು, ಸೊಳ್ಳೆಗಳು ಹಾಗೂ ವಿಷಜಂತುಗಳು ಸೇರಿಕೊಳ್ಳುವ ಸಾಧ್ಯತೆ ಇದ್ದುದ್ದರಿಂದ ನಾನೇ ಸ್ವತ ಸ್ವಚ್ಛತೆ ಮಾಡಿದ್ದೇವೆ. ಇದು ನಮ್ಮ ಮನೆಯ ಕೆಲಸವೆಂದು ಭಾವಿಸಿ ಎಲ್ಲಾ ಗ್ರಾಮಸ್ಥರು ಸ್ವಚ್ಚತೆ ಕಡೆ ಗಮನಹರಿಸಬೇಕು ಎಂದು ಪಿಡಿಓ ಸಿದ್ರಾಮ ಸಿನಖೇಡ ತಿಳಿಸಿದ್ದಾರೆ.
ಇಂಡಿ: ಇಂಗಳಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ರಾಮ ಸಿನಖೇಡ ಅವರು ಮಾವಿನಹಳ್ಳಿ ಗ್ರಾಮದ ವಾರ್ಡ್ ನಂ ೪ ರ ಎಸ್.ಸಿ ಕಾಲೋನಿ ಯಲ್ಲಿ ಚರಂಡಿ ಸ್ವಚ್ಚತೆ ಮಾಡುವ ಮೂಲಕ ಗ್ರಾಮಸ್ಥರಿಗೆ ಮಾದರಿಯಾದರು.