ಇಡೀ ದೇಶಕ್ಕೆ ಅನ್ನ ನೀಡುವ ರೈತರ ಕಾರ್ಯ ಶ್ಲಾಘನೀಯ..!
ಇಂಡಿ: ಇಡೀ ದೇಶಕ್ಕೆ ಅನ್ನ ನೀಡುವ ರೈತರ ಕಾರ್ಯ ಶ್ಲಾಘನೀಯವಾಗಿದ್ದು ಅವರ ಋಣ ಮರೆಯಲು ಸಾಧ್ಯವಿಲ್ಲ ಎಂದು ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ಹೇಳಿದರು.
ಸೋಮವಾರ ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟಿçÃಯ ರೈತರ ದಿನಾಚರಣೆ”ಕಾರ್ಯಕ್ರಮವನ್ನು ಭಾರತ ದೇಶದ ಪ್ರಧಾನಿಗಳಾದ ಚೌಧರಿಚರಣ ಸಿಂಗ್ ಅವರಜನ್ಮ ದಿನದ ನಿಮಿತ್ಯ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚೌಧರಿಚರಣ ಸಿಂಗ್ ಅನ್ನದಾತರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗಾಗಿ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆತಂದುಆಧುನಿಕ ಕೃಷಿ ತಂತ್ರಜ್ಞಾನದ ಅದರ ಬಳಕೆಗೆ ಪ್ರೋತ್ಸಾಹ ನೀಡಿದ್ದರು ಎಂದರು.
ರೈತ ಚಿಂತಕರು ಹಾಗೂ ಹತ್ತಿ ಮತ್ತು ಜೋಳ ಬೆಳೆಯ ತಜ್ಞರು, ಪುಣೆಯ ದಾದಾಲಾಡ ಮಾತನಾಡಿ, ಸಾಂಪ್ರದಾಯಿಕ ಕೃಷಿ ಬಿಟ್ಟು ತಂತ್ರಜ್ಞಾನ ಆಧಾರಿತ ವೈಜ್ಞಾನಿಕ ಕೃಷಿ ಮಾಡಲು, ರೈತರು ತಮ್ಮ ಆರ್ಥಿಕ ಗುಣಮಟ್ಟವನ್ನು ಸುಧಾರಿಸಿ ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಂಡು ಬದಲಾಗಲು ಕರೆನೀಡಿದರು.
ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಡಾ. ಶಿವಶಂಕರಮೂರ್ತಿ ಪ್ರಾಸ್ತಾವಿಕಾವಾಗಿ ಮಾತನಾಡಿದರು.
ಡಾ. ಪ್ರೇಮ್‌ಚಂದ್, ಜಿಲ್ಲಾರೈತ ಸಂಘದ ಅಧ್ಯಕ್ಷರು, ಸಿದ್ರಾಮಪ್ಪಾ ರಂಜುಣಗಿ, ನಿಂಬೆಯಲ್ಲಿ ಬಹಾರ್ ನಿರ್ವಹಣೆ ಮತ್ತು ಅರ್ಕಾ ನಿಂಬೆ ಸ್ಪೇಷಲ್ ಮಹತ್ವ ಕುರಿತು ಡಾ. ಹೀನಾ ಎಂ.ಎಸ್, ಹಿಂಗಾರು ಬೆಳೆಗಳ ಸಮಗ್ರಪೋಷಕಾಂಶಗಳ ನಿರ್ವಹಣೆ ಕುರಿತು ಡಾ. ಬಾಲಾಜಿ ನಾಯ್ಕ, ನಿಂಬೆ ಮತ್ತು ಸಿರಿಧಾನ್ಯಗಳ ಮೌಲ್ಯವರ್ಧನೆ ಕುರಿತು ಡಾ. ವೀಣಾ ಚಂದಾವರಿ, ಡಾ. ಪ್ರಸಾದ್ ಎಂ.ಜಿ ಮಾತನಾಡಿದರು.
ಪಾಂಡು ನಿಂಗಪ್ಪ ಹ್ಯಾಟಿ, ಮಲ್ಲಣ್ಣಗೌಡ ಪಾಟೀಲ, ಗುರುನಾಥ ಬಗಲಿ, ಅರ್ಜುನ ಮಂಗಳೂರಿ , ಬೀರಪ್ಪ ವಗ್ಗಿ, ಮುದ್ದುಗೌಡ ಪಾಟೀಲ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕೃಷಿಯಲ್ಲಿ ಸಾಧನೆಗೈದ ರೈತರಾದ ಕಮಲಾಬಾಯಿ, ವಿದ್ಯಾ ಮಲ್ಲೇಶಪ್ಪ ಕಲ್ಯಾಣಶೆಟ್ಟಿ, ಸಾಗರ ಕುಂಬಾರ, ಚಂದ್ರಕಾAತ ಜೆಟ್ಟಪ್ಪ, ವಿರುಪಾಕ್ಷ ಕುಂಬಾರ, ಹುಲಿಯಪ್ಪ ಪೂಜಾರಿ, ಅವಿನಾಶ ಹಾವಿನಾಳ, ಮಹೇಶ ತಳವಾರ, ಮಲ್ಲಿಕಾರ್ಜುನ ಬಿರಾದಾರ, ಪ್ರದೀಪ, ಲಾಳಸಂಗಿ ಪುಂಡಲಿಕ ಕುಂಬಾರ ಅವರಿಗೆ ಪ್ರಶಂಸಾ ಪ್ರಮಾಣ ಪತ್ರವನ್ನು ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ೧೫೦ ಕ್ಕೂ ಹೆಚ್ಚಿನ ರೈತ ಬಾಂಧವರು ಭಾಗವಹಿಸಿದ್ದರು.
ಇಂಡಿ: ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟಿçÃಯ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಸಾಧನೆಗೈದ ರೈತರಿಗೆ ಪ್ರಶಂಸಾ ಪ್ರಮಾಣ ಪತ್ರವನ್ನು ನೀಡಿ ಸನ್ಮಾನಿಸಲಾಯಿತು.



















