ಪುರಸಭೆ ಮುಖ್ಯಾಧಿಕಾರಿಗಳಿಗೆ ಬಡಾವಣೆಯ ಸದಸ್ಯರಿಗೆ ನಾಗರಿಕರು ಮನವಿ ಮಾಡಿದರು ಕ್ಯಾರೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಪಟ್ಟಣದ ಮಾರುತಿ ನಗರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಪುರಸಭೆಯ ಅಧಿಕಾರಿಗಳಿಗೆ ಮನವಿ.
ವರದಿ :ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ ; ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಸಮಸ್ಯೆಗಳಿಗೆ ಮುಖ್ಯಾಧಿಕಾರಿಗಳಾಗಲಿ ಬಡಾವಣೆಯ ಪುರಸಭೆ ಸದಸ್ಯರು ಸ್ಪಂದಿಸುತ್ತಿಲ್ಲವೆಂದು ಬಡಾವಣೆಯ ನಿವಾಸಿಗಳು ಮಂಗಳವಾರ ಪುರಸಭೆ ಕಂದಾಯ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು
ಈ ವೇಳೆ ಮಾತನಾಡಿದ ಮಾರುತಿ ನಗರ ನಿವಾಸಿ ಸಂಗನಗೌಡ ಪಾಟೀಲ್ ಮುದ್ದೇಬಿಹಾಳ ಪಟ್ಟಣದಲ್ಲಿ ಅತಿಹೆಚ್ಚು ತೆರಿಗೆಯನ್ನು ನಮ್ಮ ಬಡಾವಣೆಯಿಂದ ತುಂಬಿದರು ಅಭಿವೃದ್ಧಿ ಕುಂಠಿತವಾಗಿದೆ ಸರಿಯಾಗಿ ಕುಡಿಯುವ ನೀರು ಪೂರೈಕೆಯಿಲ್ಲಾ, ಚರಂಡಿ ಸ್ವಚ್ಚತೆ ಗಾರ್ಡನ್ ಸ್ವಚ್ಚತೆ ಇಲ್ಲ, ವಿದ್ಯುತ್ ದೀಪಗಳ ಸಮಸ್ಯೆ, ರಸ್ತೆ ಸಂಚಾರ ಸಮಸ್ಯೆ ಇದೆ ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳಿಗೆ ಬಡಾವಣೆಯ ಸದಸ್ಯರಿಗೆ ಮನವಿ ಮಾಡಿದರು ಕ್ಯಾರೆ ಮಾಡುತ್ತಿಲ್ಲ ಹೀಗಾಗಿ ಇಂದು ಬಡಾವಣೆಯ ಎಲ್ಲಾ ನಿವಾಸಿಗಳು ಲಿಖಿತವಾಗಿ ಮನವಿಯನ್ನು ನೀಡಿದ್ದೇವೆ ವಾರದಲ್ಲಿ ಸಮಸ್ಯೆ ಪರಿಹರಿಸದಿದ್ದರೆ ಪುರಸಭೆ ಮುಂದೆ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು
ಮನವಿ ಪತ್ರವನ್ನು ಪುರಸಭೆ ಕಂದಾಯ ಅಧಿಕಾರಿ ಶ್ರೀಮತಿ ಎನ್ ಎಸ್ ಪಾಟೀಲ್ ನೀಡಲಾಯಿತು ಈ ವೇಳೆ ಹುಸೇನ್ ಮುಲ್ಲಾ, ಬಸವರಾಜ ಬೂದಿಹಾಳ, ವಿರೇಶ ಢವಳಗಿ, ಶಶಿಧರ ಹಿರೇಮಠ, ಬಿ ವಿ ಮಠ, ಸಿದ್ರಾಮಪ್ಪ ಕಲ್ಯಾಣಿ, ಹಣಮಂತ ನಾವದಗಿ, ಸಿ ಎನ್ ಮಠಪತಿ, ಐಎ ಢವಳಗಿ, ಹೆಚ್ ಬಿ ದಳವಾಯಿ, ಜಿ ಟಿ ಕಾಚಾಪೂರ, ಬಸಲಿಂಗಯ್ಯ ಹಿರೇಮಠ, ವಿಲಾಸ ಪಾಟೀಲ್, ಡಿ ಬಿ ಓಲೇಕಾರ, ಸಂಗಪ್ಪ ಹೋಳಿ, ರಾಜು ಮಡಿವಾಳರು ಇತರರು ಭಾಗವಹಿಸಿದ್ದರು.