ವಿಜಯಪುರ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಪ್ರಕಟಿಸಿದ ಕರ್ನಾಟಕ ಬೆಳೆ ಸಮೀಕ್ಷೆಗಾರರ ಸಂಘದ ಜಿಲ್ಲಾ ಪದಾಧಿಕಾರಿಗಳು
ವಿಜಯಪುರ : ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟದ ಬಗ್ಗೆ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಇಂದು ಭೇಟಿ ನೀಡಿ ಕರ್ನಾಟಕ ಬೆಳೆ ಸಮೀಕ್ಷೆಗಾರರ ಸಂಘದ ವಿಜಯಪುರ ಜಿಲ್ಲಾ ಪದಾಧಿಕಾರಿಗಳು ಸಂಪೂರ್ಣ ಬೆಂಬಲವನ್ನು ಪ್ರಕಟಿಸಿದ್ದಾರೆ.
ಧರಣಿ ಸ್ಥಳಕ್ಕೆ ಆಗಮಿಸಿದ ಪದಾಧಿಕಾರಿಗಳು ಸಂಘದ ಜಿಲ್ಲಾ ಅಧ್ಯಕ್ಷ ಶ್ರೀ. ನರಸಪ್ಪ ನಾವಿ ಅವರು ಮಾತನಾಡಿ, “ವೈದ್ಯಕೀಯ ಕಾಲೇಜು ಸ್ಥಾಪನೆ ಹೋರಾಟವು ನಮ್ಮ ಎಲ್ಲರ ಹೋರಾಟ. ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಕ್ಕೆ ನಾವು ಬೆಳೆ ಸಮೀಕ್ಷೆಗಾರರ ಸಂಘವಾಗಿ, ಈ ಧರಣಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ. ಅಗತ್ಯವಿದ್ದರೆ ರಾಜ್ಯವ್ಯಾಪಿ ಹೋರಾಟವನ್ನು ಕೂಡ ಮಾಡುತ್ತೇವೆ” ಎಂದು ಘೋಷಿಸಿದರು.
ಜಿಲ್ಲಾ ಕಾರ್ಯದರ್ಶಿ ಭೀಮಸೈ ತಲ್ವಾರ್ ಮಾತನಾಡಿ “ಬೆಳೆ ಸಮೀಕ್ಷೆಗಾರರು ರೈತರ ಹಕ್ಕುಗಳಿಗಾಗಿ ಹೋರಾಡುತ್ತಾರೆ. ಹಾಗೆಯೇ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೂ ಹೋರಾಡುತ್ತೇವೆ. ಈ ಎರಡೂ ಹೋರಾಟಗಳು ಒಂದೇ. ನಾವು ಧರಣಿಕಾರರೊಂದಿಗೆ ನಿಂತು, ಸರ್ಕಾರವನ್ನು ಒತ್ತಾಯ ಮಾಡುತ್ತೇವೆ ಎಂದರು.
ಕರ್ನಾಟಕ ಬೆಳೆ ಸಮೀಕ್ಷೆಗಾರರ ಸಂಘವು ರೈತರು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಯಾವಾಗಲೂ ನಿಂತಿದ್ದು, ಈ ಧರಣಿ ಯಶಸ್ವಿಯಾಗಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಬೀರಪ್ಪ ಸಾತಿಹಾಳ, ಕುಮಾರ ಮಠ, ಸಿದ್ದಲಿಂಗ ಕದರಿ, ರವಿ ಚವ್ಹಾಣ್, ಸುಧೀರ್ ಮಠ, ಗುರು ಬಡಿಗೇರ, ಸುನಿಲ್ ಅವಟಿ, ಅಮೀರ್ ಖಾನ್ ಬೈರೊಡಗಿ, ರವಿಕಿರಣ ಹೊಸಮನಿ, ಮೆಹಬೂಬ್, ರಸೂಲ್ ಅಲಮೇಲ್, ಗೋಪಾಲ್ ಹೊಸೂರು, ಶ್ರೀಶೈಲ ಮಂಗಳೂರು, ಶಿವಾನಂದ್ ಬಿರಾದಾರ್, ಅಮರ್ ಬನಸೋಡೆ, ಅಮರಸಿದ್ದ ಕೇಸರಗೋಪ್ಪ, ಚಂದನ ಕೋಳಿ, ಅರುಣ್ ಕುಮಾರ್ ತಳವಾರ ಹಾಗೂ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.



















