ಇಂಡಿ: ವರದಕ್ಷಿಣೆಗಾಗಿ ಪತ್ನಿಯನ್ನೆ ಪಾಪಿ ಪತಿ ಕೊಲೆಗೈದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ನಡೆದಿದೆ. 26 ವರ್ಷದ ಮಾಯಮ್ಮ ಶಿವಾನಂದ ಜೊತಗೊಂಡ ಹತ್ಯೆಯಾಗಿರುವ ದುರ್ದೈವಿ.
ಗಂಡ ಶಿವಾನಂದ ಜೊತಗೊಂಡ ಸೇರಿದಂತೆ ಕುಟುಂಬಸ್ಥರು ಹತ್ಯೆಗೈದಿದ್ದಾರೆ ಎಂದು ಮೃತಪಟ್ಟಿರುವ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
ವರದಕ್ಷಿಣೆಗಾಗಿ ಮಾಯಮ್ಮನ್ನು ಕೊಲೆಗೈದು ಬಾವಿಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.