ಜಿರಿಯಾಟ್ರಿಕ್ ಕಾನ್ಸೆಪ್ಟ್ (Geriatric Concepts)ಪುಸ್ತಕದ ಎರಡನೇ ಆವೃತ್ತಿಯನ್ನು ಬಿಡುಗಡೆ : ವಿವಿ ಕುಲಾಧಿಪತಿ ಡಾ. ವೈ. ಎಂ. ಜಯರಾಜ
ವಿಜಯಪುರ: ನಗರ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಜೆರಿಯಾಟ್ರಿಕ್ಸ್ ವಿಭಾಗದ ವತಿಯಿಂದ ಸಂಪಾದಿಸಲಾದ ಜಿರಿಯಾಟ್ರಿಕ್ ಕಾನ್ಸೆಪ್ಟ್ (Geriatric Concepts)ಪುಸ್ತಕದ ಎರಡನೇ ಆವೃತ್ತಿಯನ್ನು ವಿವಿ ಸಮ ಕುಲಾಧಿಪತಿ ಡಾ. ವೈ. ಎಂ. ಜಯರಾಜ ಸೋಮವಾರ ಬಿಡುಗಡೆ ಮಾಡಿದರು.
ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಪುಸ್ತಕವು ವೈದ್ಯಕೀಯ, ನರ್ಸಿಂಗ್, ಫಾರ್ಮಾ ಮತ್ತು ಭೌತಚಿಕಿತ್ಸೆ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದೆ ಎಂದು ತಿಳಿಸಿದರು.
ಈ ಪುಸ್ತಕವನ್ನು ನಾಡೋಜ ಡಾ. ಪಿ. ಎಸ್. ಶಂಕರ ಮತ್ತು ಡಾ. ಎ. ಪಿ. ಅಂಬಲಿ ಸಂಪಾದಿಸಿದ್ದು, ಬಿ.ಎಲ್.ಡಿ.ಇ. ಡೀಮ್ಡ್ ವಿವಿಯಿಂದ ಪ್ರಕಟಿಸಲಾಗಿದೆ.
ಈ ಸಂದರ್ಭದಲ್ಲಿ ವಿವಿ ಕುಲಪತಿ, ಡಾ. ಅರುಣ ಚಂ.ಇನಾಮದಾರ, ಕುಲಸಚಿವ ಡಾ. ಆರ್. ವಿ. ಕುಲಕರ್ಣಿ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ವೈದ್ಯಕೀಯ ವಿಭಾಗದ ಡೀನ ಡಾ. ತೇಜಸ್ವಿನಿ ವಲ್ಲಭ, ಪರೀಕ್ಷೆ ನಿಯಂತ್ರಣಾಧಿಕಾರಿ ಡಾ. ಎಸ್. ಎಸ್. ದೇವರಮನಿ, ವೈದ್ಯಕೀಯ ಅಧೀಕ್ಷಕ, ಡಾ. ಆರ್. ಎಂ. ಹೊನ್ನುಟಗಿ, ವೈದ್ಯಕೀಯ ನಿರ್ದೇಶಕ, ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ ಉಪಸ್ಥಿತರಿದ್ದರು.