ಮನಿಯಾರ ಚಾರಿಟೇಬಲ್ ಟ್ರಸ್ಟ್ ನಿಂದ ಕಳೆದ 12 ವರ್ಷಗಳಿಂದ ಉಚಿತ ನೇತ್ರ ತಪಾಸಣೆ ಹಾಗೂ ನೇತ್ರ ಶಸ್ತ್ರಚಿಕಿತ್ಸೆ ನಡೆದಿದೆ.
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ ; ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜ ಸೇವಕ ಅಯೂಬ್ ಮನಿಯಾರ ಅವರ ಮನಿಯಾರ ಚಾರಿಟೇಬಲ್ ಟ್ರಸ್ಟ್ ನಿಂದ ಕಳೆದ 12 ವರ್ಷಗಳಿಂದ ಉಚಿತ ನೇತ್ರ ತಪಾಸಣೆ ಹಾಗೂ ನೇತ್ರ ಶಸ್ತ್ರಚಿಕಿತ್ಸೆ ಮಾಡಿಕೊಂಡು ಬರಲಾಗುತ್ತಿದೆ ಈ ವರ್ಷ ರವಿವಾರ ಪಟ್ಟಣದ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಮಾಡಲಾಯಿತು.
ಈ ವೇಳೆ ಮಾತನಾಡಿದ ಸಮಾಜ ಸೇವಕ ಮನಿಯಾರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಯೂಬ್ ಮನಿಯಾರ ಅಗಲಿದ ನನ್ನ ತಂದೆತಾಯಿಗಳ ಸ್ಮರಣಾರ್ಥ ಬಡವರ ಕಣ್ಣಿನ ತಪಾಸಣೆ ಹಾಗೂ ಉಚಿತ ನೇತ್ರ ಶಸ್ತ್ರಚಿಕಿತ್ಸೆಯಲ್ಲಿ ಸಿಗುವ ತೃಪ್ತಿ ಬೇರೆಯಾವುದರಲ್ಲೂ ಇಲ್ಲಾ ಎಂದ ಅವರು ನಾ ಮಾಡುವ ಈ ಸಮಾಜಮುಖಿ ಕಾರ್ಯವನ್ನು ಎಲ್ಲಾ ಸಿರಿವಂತರು ಮಾಡಬೇಕು ಎಂದರು.
ಈ ವೇಳೆ ಮಾತನಾಡಿದ ಮೇರಿ ಕಡಿವಾಲ, ದಸ್ತಗೀರಸಾಬ ಮೋಮಿನ, ಬಸಪ್ಲ ಹೂಳ್ಳಿ, ಅಬ್ದುಲ್ ಖಾದರ ಮನಿಯಾರ ಅವರು12 ವರ್ಷಗಳಿಂದ ತಂದೆ ತಾಯಿ ಸ್ಮರಣಾರ್ಥ ಪುಣ್ಯ ಕಾರ್ಯ, ಮಾಡುತ್ತಿದ್ದಾರೆ ಇದರಿಂದ ಅನೇಕ ಬಡವರಿಗೆ ಸಹಾಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೇತ್ರ ತಪಾಸಣೆ ಶಿಬಿರದಲ್ಲಿ ತಾಳಿಕೋಟಿ ಲೋಟಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಚಿತ ಬಿಪಿ ಶುಗರ್ ತಪಾಸಣೆ ಹೆಸರು ನೋಂದಣಿ ಕಾರ್ಯ ಮಾಡಿದರು.
ತಾಳಿಕೋಟಿ ತಾಲೂಕಿನಲ್ಲಿ 254 ಜನರ ನೇತ್ರ ತಪಾಸಣೆಯಲ್ಲಿ 103 ಜನ ಕಣ್ಣಿನ ಶಸ್ತ್ರಚಿಕಿತ್ಸೆ ಗೆ ಆಯ್ಕೆಯಾಗಿದ್ದಾರೆ ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದ ನೇತ್ರ ತಪಾಸಣೆಯಲ್ಲಿ 250 ತಪಾಸಣೆ ಮಾಡಿಕೊಂಡಿದ್ದು ಇದರಲ್ಲಿ 102 ಜನರು ಕಣ್ಣಿನ ಶಸ್ತ್ರಚಿಕಿತ್ಸೆ ಗೆ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ದಾದಾ ಎತ್ತಿನಮನಿ, ಆಪ್ತಾಪ್ ಮನಿಯಾರ ,ಬಾಬಾ ಎಕೀನ, ಯೂಸುಫ್ ಸಾತಿಹಾಳ,ರಜಾಕ ಹುನಕುಂಟಿ,ಮಹಿಬೂಬ ಚೌದರಿ ಶಿಬಿರ ಸೇವಾ ಕಾರ್ಯ ನಿರ್ವಹಿಸಿದರು.