ಸಮಾಜದ ಅಗತ್ಯಗಳನ್ನು ಗುರುತಿಸಿ ಕಾರ್ಯರೂಪಕ್ಕೆ ತರವಲ್ಲಿ ಯುವಕರ ಪಾತ್ರ ಮುಖ್ಯ :ಉಪನ್ಯಾಸಕ ಈರನಕೇರಿ
ಇಂಡಿ : ಸಮಾಜದ ಅಗತ್ಯಗಳನ್ನು ಗುರುತಿಸಿ ಕಾರ್ಯರೂಪಕ್ಕೆ ತರವಲ್ಲಿ ಇಂದಿನ ಯುವಕರ ಪಾತ್ರ ಮುಖ್ಯವಾಗಿದೆ. ಎನ್ಎಸ್ಎಸ್ ಶಿಬಿರದ ಮುಖ್ಯ ಉದ್ದೇಶ ಯುವಕರಲ್ಲಿ ದೇಶಾಭಿಮಾನ ಹಾಗೂ ಶ್ರಮ ಜೀವನದ ಕುರಿತು ಅರಿವು ಮೂಡಿಸುವುದಾಗಿದೆ ಎಂದು ಮುಖ್ಯ ಅತಿಥಿ, ಉಪನ್ಯಾಸ ಸದಾನಂದ ಈರನಕೇರಿ ಮಾತನಾಡಿದರು.
ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು ಹಾಗೂ ಬಿ ಎಲ್ ಡಿ ಇ ಸಂಸ್ಥೆಯ ಸಿದ್ದೇಶ್ವರ ಶಿಕ್ಷಕರ ತರಬೇತಿ ಕೇಂದ್ರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಏಳು ದಿನಗಳ ವಿಶೇಷ ಶಿಬಿರದ ಉದ್ಘಾಟನೆಯನ್ನು ಕಾಲೇಜಿನ ಪ್ರಾಚಾರ್ಯ ಎಸ್ಎಂ ಶೆಟ್ಟೆಣ್ಣವರ್ ಹಾಗೂ ರಮೇಶ್ ದಾಯಗೋಡೆ ಪಿಕೆಪಿಎಸ್ ಸದಸ್ಯರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಎಸ್ ಎಸ್ ಈರನಕೇರಿ, ಉಪನ್ಯಾಸಕ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಧೇಯ ಉದ್ದೇಶಗಳನ್ನು ಕುರಿತು ಮಾತನಾಡುತ್ತಾ, ಎನ್ಎಸ್ಎಸ್ ಯೋಜನೆಯೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ಶತಮಾನೋತ್ಸವದ ನಿಮಿತ್ಯವಾಗಿ 1969 ಸಪ್ಟಂಬರ್ 24ರಂದು ಈ ಯೋಜನೆಯು ಜಾರಿಗೆ ಬಂದಿತು.
ಮುಖ್ಯ ಧ್ಯೇಯ ವಾಕ್ಯ ನನಗಲ್ಲ ನಿನಗೆ. ನಾವೆಲ್ಲ ಸಮಾಜ ಗೋಸ್ಕರ ಕೆಲಸ ಮಾಡಬೇಕು ಹಾಗೂ ಸಮಾಜದಲ್ಲಿರುವ ಮೂಢನಂಬಿಕೆ ಅಂಧಕಾರ ಭ್ರಷ್ಟಾಚಾರಗಳನ್ನು ನಾವೆಲ್ಲರೂ ಅದನ್ನ ನಿರ್ಮೂಲನೆ ಮಾಡಬೇಕು. ಹಾಗೂ ನಾವೆಲ್ಲರೂ ಸಂವಿಧಾನ ಬದ್ಧವಾಗಿ, ಪ್ರಮಾಣಿಕತೆಯಿಂದ ದೇಶಾಭಿಮಾನವನ್ನು ಬೆಳೆಸಿಕೊಳ್ಳುವ ಜೊತೆಗೆ ದೇಶಕ್ಕಾಗಿ ತ್ಯಾಗ ಮಾಡುವ ಗುಣ ಹೊಂದಿರಬೇಕು ಎಂಬ ಆಶಯ ಈ ಶಿಬಿರದ್ದಾಗಿದೆ. ಈ ಶಿಬಿರದ ಲಾಂಛನವು ಮೂರು ಬಣ್ಣಗಳಿಂದ ಕೂಡಿದೆ. ಕೆಂಪು ತ್ಯಾಗದ ಸಂಕೇತ. ನೀಲಿ ಸಮೃದ್ಧಿಯ ಸಂಕೇತ ಬಿಳಿ ಸರಳತೆ ಮತ್ತು ಶುಭ್ರತೆಯ ಸಂಕೇತ. ದೇಶ ನನಗೇನು ಮಾಡಿತು, ಅನ್ನೋದಕ್ಕಿಂತ ದೇಶಕ್ಕಾಗಿ ನಾನೇನು ಮಾಡಬೇಕು ಎಂಬ ಚಿಂತೆ ನಮ್ಮದಾಗಬೇಕು. ಎನ್ಎಸ್ಎಸ್ ಶಿಬಿರದಿಂದ ವಿದ್ಯಾರ್ಥಿಯ ವ್ಯಕ್ತಿತ್ವ ನಿರ್ಮಾಣ ಹೊಂದುತ್ತದೆ ಅದರ ಜೊತೆಗೆ ಬದುಕುವ ಕಲೆ, ನಾಯಕತ್ವದ ಗುಣಗಳು, ಗುರುಹಿರಿಯರನ್ನ ಗೌರವಿಸುವುದು, ಮುಖ್ಯವಾಗಿ ಅವನಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ.
ಪ್ರತಿಯೊಬ್ಬ ವಿದ್ಯಾರ್ಥಿಯು ಕೂಡಾ ಎನ್ಎಸ್ಎಸ್ ನ ಸದಸ್ಯನಾಗಬೇಕು ಎಂದು ತಮ್ಮ ಉಪನ್ಯಾಸದಲ್ಲಿ ಹೇಳಿದರು. ಇದೇ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಪರಿಸರ ಕಾಳಜಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿದರು. ಕಾಲೇಜಿನ ಪ್ರಾಚಾರ್ಯರು ಕಾರ್ಯಕ್ರಮದ ಸಮಾರೋಪ ಭಾಷಣವನ್ನು ಮಾಡಿ ವಿದ್ಯಾರ್ಥಿಗಳೆಲ್ಲರೂ ಎನ್ಎಸ್ಎಸ್ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮ ಡಾ. ಎಂ ಬಿ .ದಿಲ್ ಶಾದ್ ರಚಿಸಿದ ರಾಷ್ಟ್ರೀಯ ಸೇವಾ ಯೋಜನೆಗೀತೆಯನ್ನು ವಿದ್ಯಾರ್ಥಿನಿಯರು ಹಾಡಿದರು.
ವೇದಿಕೆಯ ಮೇಲೆ ಶಿಭಿರಾಧಿಕಾರಿಗಳಾದ , ಎಸ್ ಬಿ ಡಾಂಗೆ. ಬಿ ಎಸ್ ದೊಡ್ಡಿ ಹಾಗೂ ಉಪಾಧ್ಯಕ್ಷ ಕಾಶಿನಾಥ್ ಅವಜಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಕಾಲೇಜಿನ ಶಿಬಿರಾರ್ಥಿಗಳು ಹಾಜರಿದ್ದರು.