ಜಗತ್ತಿನಲ್ಲಿ ಉದ್ಯೋಗ ಸೃಷ್ಠಿಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ದೊಡ್ಡದಿದೆ : ಸಚಿವ ಎಮ್ ಬಿ ಪಾಟೀಲ
ವಿಜಯಪುರ: ಜಗತ್ತಿನಲ್ಲಿ ಉದ್ಯೋಗ ಸೃಷ್ಠಿಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ದೊಡ್ಡದಿದೆ. ಈ ಕ್ಷೇತ್ರದ ಬೇಡಿಕೆಗಳಿಗೆ ಸ್ಪಂದಿಸಲು ಸಣ್ಣ ಕೈಗಾರಿಕೆ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಇಂದು ಶುಕ್ರವಾರ ನಗರದ ಆಲಕುಂಟೆ ನಗರರದ ರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಉತ್ತರ ಕರ್ನಾಟಕ ಶಾಮಿಯಾನಾ ಸಪ್ಲಾಯರ್ಸ್, ಲೈಟಿಂಗ್, ಧ್ವನಿವರ್ಧಕ ಹಾಗೂ ಡೆಕೋರೇಶನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ವಿಜಯಪುರ ಜಿಲ್ಲಾ ಮಂಟಪ, ಲಾಯಿಟ್, ಮಾಯಿಕ್, ಫ್ಲಾವರ್ ಡೆಕೋರೇಶನ್ ಕೆಟರರ್ಸ್ ಮತ್ತು ಸಪ್ಲಾಯರ್ಸ್ ಮಾಲಿಕರ ಸಂಘ ಆಯೋಜಿಸಿದ್ದ ವಿಜಯಪುರ ಉತ್ಸವ- 2025 ಮತ್ತು 4ನೇ ಮಹಾ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.
ಶಾಮಿಯಾನ ಸಂಘದವರನ್ನು ಬೆಳೆಸಲು ಮತ್ತು ಅವರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸರಕಾರದ ಯೋಜನೆಗಳನ್ನು ಅವರಿಗೆ ತಲುಪಿಸಲಾಗುವುದು. ವಿಜಯಪುರ ಜಿಲ್ಲೆಯಲ್ಲಿ ಪೆಂಡಾಲ್ ಮಾಲಿಕರು, ಕಾರ್ಮಿಕರ ಜೊತೆ ಆತ್ಮೀಯ ಸಂಬಂಧವಿದೆ. ನಮ್ಮ ತಂದೆಯವರ ಕಾಲದಿಂದಲೂ ವಿಜಯಪುರ ಶಾಮಿಯಾನ ಮಾಲಿಕರು ಮತ್ತು ಸಂಘದವರು ವ್ಯಾಪಾರಕ್ಕಿಂತ ಹೆಚ್ಚಾಗಿ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಶಾಮಿಯಾನ ಮಾಲಿಕರು ಮತ್ತು ಕಾರ್ಮಿಕರು ಹಗಲು ಮತ್ತು ರಾತ್ರಿ ಒತ್ತಡಗಳ ಮಧ್ಯೆ ಕೆಲಸ ಮಾಡುತ್ತಾರೆ. ಅವರು ಶ್ರಮಜೀವಿಗಳಾಗಿದ್ದು, ಶಿಸ್ತು, ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಇಂದಿನ ಆಧುನಿಕತೆ ತಕ್ಕಂತೆ ಮಾಲಿಕರು ಮತ್ತು ಕಾರ್ಮಿಕರು ವೃತ್ತಿಕೌಶಲ್ಯವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಇದೇ ವೇಳೆ ಜಿ.ಎಸ್.ಟಿ ಸಮಸ್ಯೆ ಬಗೆಹರಿಸುವಂತೆ ಶಾಮಿಯಾನ ಸಂಘದವರು ಮಾಡಿದ ಮನವಿಗೆ ಪ್ರತಿಕ್ರಿಯೆ ನೀಡಿದ ಸಚಿವ ಎಂ. ಬಿ. ಪಾಟೀಲ ಅವರು, ಈ ಕುರಿತು ಮನವಿ ಕೊಡಿ. ಸಿಎಂ ಗಮನಕ್ಕೆ ತಂದು ಕೇಂದ್ರ ಸರಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಸ್ವಾಮೀಜಿ, ಗೊಳಸಾರದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ಶ್ರದ್ಧಾನಂದ ಸ್ವಾಮೀಜಿ, ಶಾಮಿಯಾನ ಮಾಲಿಕರ ಸಂಘದ ಅಮರೇಶ ಟಿ. ಹಿರೇಮಠ, ಶಿವಾನಂದ ಆರ್. ಮಾನಕರ, ಜಿ. ಪೂರ್ಣಚಂದ್ರ ಬಾಬಯರಾವ, ಟಿ. ನರಸಿಂಗಮೂರ್ತಿ, ಪರ್ತಾರಸಿಂಗ್ ಕೋಚರ, ಇಂದ್ರಚಂದ್ರ, ಮುಖಂಡರಾದ ಮಳುಗೌಡ ಪಾಟೀಲ, ಗೂಳಪ್ಪ ಶಟಗಾರ, ಮಹಾದೇವ ರಾಠೋಡ, ವಿ. ಸಿ. ನಾಗಠಾಣ, ಸಂಗು ಸಜ್ಜನ ಮುಂತಾದವರು ಉಪಸ್ಥಿತರಿದ್ದರು.
1. Minister MBP Shamiyana Programme
ವಿಜಯಪುರ ನಗರದಲ್ಲಿ ನಡೆದ ಉತ್ತರ ಕರ್ನಾಟಕ ಶಾಮಿಯಾನಾ ಸಪ್ಲಾಯರ್ಸ್, ಲೈಟಿಂಗ್, ಧ್ವನಿವರ್ಧಕ ಹಾಗೂ ಡೆಕೋರೇಶನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ವಿಜಯಪುರ ಜಿಲ್ಲಾ ಮಂಟಪ, ಲಾಯಿಟ್, ಮಾಯಿಕ್, ಫ್ಲಾವರ್ ಡೆಕೋರೇಶನ್ ಕೆಟರರ್ಸ್ ಮತ್ತು ಸಪ್ಲಾಯರ್ಸ್ ಮಾಲಿಕರ ಸಂಘ ಆಯೋಜಿಸಿದ್ದ ವಿಜಯಪುರ ಉತ್ಸವ- 2025 ಮತ್ತು 4ನೇ ಮಹಾ ಅಧಿವೇಶನವನ್ನು ಸಚಿವ ಎಂ. ಬಿ. ಪಾಟೀಲ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಸ್ವಾಮೀಜಿ, ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ಶ್ರದ್ಧಾನಂದ ಸ್ವಾಮೀಜಿ, ಅಮರೇಶ ಟಿ. ಹಿರೇಮಠ, ಶಿವಾನಂದ ಆರ್. ಮಾನಕರ ಮುಂತಾದವರು ಉಪಸ್ಥಿತರಿದ್ದರು.
2. Minister MBP Shamiyana Programme
ವಿಜಯಪುರ ನಗರದಲ್ಲಿ ನಡೆದ ಉತ್ತರ ಕರ್ನಾಟಕ ಶಾಮಿಯಾನಾ ಸಪ್ಲಾಯರ್ಸ್, ಲೈಟಿಂಗ್, ಧ್ವನಿವರ್ಧಕ ಹಾಗೂ ಡೆಕೋರೇಶನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ವಿಜಯಪುರ ಜಿಲ್ಲಾ ಮಂಟಪ, ಲಾಯಿಟ್, ಮಾಯಿಕ್, ಫ್ಲಾವರ್ ಡೆಕೋರೇಶನ್ ಕೆಟರರ್ಸ್ ಮತ್ತು ಸಪ್ಲಾಯರ್ಸ್ ಮಾಲಿಕರ ಸಂಘ ಆಯೋಜಿಸಿದ್ದ ವಿಜಯಪುರ ಉತ್ಸವ- 2025 ಮತ್ತು 4ನೇ ಮಹಾ ಅಧಿವೇಶನವನ್ನು ಸಚಿವ ಎಂ. ಬಿ. ಪಾಟೀಲ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಸ್ವಾಮೀಜಿ, ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ಶ್ರದ್ಧಾನಂದ ಸ್ವಾಮೀಜಿ, ಅಮರೇಶ ಟಿ. ಹಿರೇಮಠ, ಶಿವಾನಂದ ಆರ್. ಮಾನಕರ ಮುಂತಾದವರು ಉಪಸ್ಥಿತರಿದ್ದರು.