ರೇಣುಕಾಚಾರ್ಯರರ ತತ್ವಗಳು ಆಧ್ಯಾತ್ಮಕ ಪ್ರಗತಿಗೆ ಪೂರಕ
ಇಂಡಿ : ಜಗದ್ಗುರು ರೇಣುಕಾಚಾರ್ಯರರ ತತ್ವಗಳು ಇಂದು ಸಮಾಜದ ಸಮಾನತೆ ಧಾರ್ಮಿಕ ಸಮರತೆ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಆಧುನಿಕ ದಾರಿದೀಪದಂತಿವೆ ಎಂದು ಜಂಗಮ ಸಮಾಜದ ಗೌರವಾಧ್ಯಕ್ಚ ನ್ಯಾಯವಾದಿ ಶಾಂತು ನಿಂಬರಗಿಮಠ ಹೇಳಿದರು.
ಅವರು ಪಟ್ಟಣದ ಜಗದ್ಗುರು ರೇಣುಕಾಚಾರ್ಯರರ ವೃತದಲ್ಲಿ ರೇಣುಕಾಚಾರ್ಯರರ ಜಯಂತಿ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.
ಶ್ರೀ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮತ್ತು ಶೀಲವಂತ ಉಮರಾಣ ಮಾತನಾಡಿ ರೇಣೂಕಾಚಾರ್ಯರರ ಶ್ವೇತ ತತ್ವ ಶಾಸ್ತçವನ್ನು ಜನ ಸಾಮಾನ್ಯರಿಗೆ ಪರಿಚಯಿಸಿ ಅದನ್ನು ಜೀವನದ ಭಾಗವನ್ನಾಗಿ ಮಾಡಿದ ಮಹಾನ್ ಶರಣ, ಅವರ ಬದುಕು ಮತ್ತು ತತ್ವಗಳು ಕನ್ನಡ ಸಮಾಜಕ್ಕೆ ಮಾತ್ರವಲ್ಲ ವಿಶ್ವಕ್ಕೆ ಪ್ರಾಮುಖ್ಯತೆ ಹೊಂದಿವೆ ಎಂದರು.
ಸೋಮು ನಿಂಬರಗಿಮಠ, ಬಸಯ್ಯ ಪತ್ರಿಮಠ, ಎ.ಎಸ್.ಐ ರೋಹಿತ ಹಿರೇಮಠ, ಅಜೀತ ಹಿರೇಮಠ, ಸುಧೀರ ಕರಕಟ್ಟಿ, ಯಮನಾಜಿ ಸಾಳುಂಕೆ, ಸತೀಶ ಕುಂಬಾರ, ಸಂಜುದಾದಾ ಚವ್ಹಾಣ, ವಿಜು ಚವ್ಹಾಣ, ಧರ್ಮರಾಜ ವಾಲಿಕಾರ, ಮಡು ಪ್ರಧಾನಿ, ಉದಯ ಹಿರೇಮಠ, ಶಾಂತಯ್ಯಹಿರೇಮಠ, ಶ್ರೀಶೈಲ ಗಾಳಿಮಠ ಮತ್ತಿತರಿದ್ದರು.
ತಾಲೂಕಾ ಆಡಳಿತ ವತಿಯಿಂದ ಮಿನಿ ವಿಧಾನಸೌಧದಲ್ಲೂ ಶ್ರೀ ರೇಣುಕಾಚಾರ್ಯರರ ಜಯಂತಿ ಆಚರಿಸಲಾಯಿತು.
ಇಂಡಿ ಪಟ್ಟಣದ ಜಗದ್ಗುರು ರೇಣುಕಾಚಾರ್ಯರರ ವೃತ್ತದಲ್ಲಿ ಎಸ್.ಎಲ್. ನಿಂಬರಗಿಮಠ ಮಾತನಾಡಿದರು.