ಜಿಲ್ಲಾಡಳಿತದಿಂದ ನುಲಿಯ ಚಂದಯ್ಯ ಜಯಂತಿ ಆಚರಣೆ
ಕಾಯಕ ಶರಣರ ತತ್ವಾದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ – ಚುನಾವಣಾ ತಹಶೀಲ್ದರಾ ಪಿ.ಜಿ.ಪವಾರ
ವಿಜಯಪುರ, ಆಗಸ್ಟ್ 9 :ತಮ್ಮ ಬದುಕಿನ ಮೂಲಕವೇ ಕಾಯಕ ತತ್ವಗಳನ್ನು 12ನೇ ಶತಮಾನದಲ್ಲಿಯೇ ಜಗತ್ತಿಗೆ ಸಾರಿದ ಶರಣರು ಆದರ್ಶ ವಿಚಾರಗಳು ನಮಗೆ ದಾರದೀಪವಾಗಿದೆ ಎಂದು ಚುನಾವಣಾ ತಹಶೀಲ್ದಾರ ಪಿ.ಜಿ.ಪವಾರ ಅವರು ಹೇಳಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ,ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,ಶರಣರು ತಮ್ಮ ವಚನಗಳ ಮೂಲಕ ಈ ಸಮಾಜಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ.ಶರಣರ ವಚನಗಳ ತಿರುಳು ಅರಿತು ಅಳವಡಿಸಿಕೊಳ್ಳೋಣ ಎಂದು ಹೇಳಿದರು.
ಡಾ.ಮಾಧವ ಎಚ್.ಗುಡಿ ಅವರು ವಿಶೇಷ ಉಪನ್ಯಾಸ ನೀಡಿ,ನುಲಿಯ ಚಂದಯ್ಯ ಅವರು ತಮ್ಮವಚನಗಳ ಮೂಲಕ ಕಾಯಕ ತತ್ವ, ಸಂದೇಶಗಳನ್ನು ತಮ್ಮ ವಚನಗಳ ಮೂಲಕ ನೀಡಿದ್ದಾರೆ ಎಂದು ಅವರು ಹೇಳಿದರು.
ಸತ್ಯ, ಶುದ್ಧತೆಯಿಂದ ಮಾಡಿದ ಕಾಯಕದಿಂದ ಬಂದತಹ ಆರ್ಥಿಕತೆಯು ಶ್ರೇಷ್ಠವಾದದ್ದಾಗಿದೆ ಎಂಬುದನ್ನು ಇವರ ವಚನಗಳಲ್ಲಿ ಕಾಣಬಹುದು ಎಂದರು.ಕಾಯಕಶರಣ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದರೊಂದಿಗೆ ಶರಣರ ವಚನಗಳ ಸಂರಕ್ಷಣೆ, ದಾಸೋಹ ಪರಂಪರೆ ಮುಂದುವರೆಸಿ, ಬದುಕಿ ಬಾಳಿದವರು ನುಲಿಯ ಚಂದಯ್ಯ ಅವರು ಎಂದು ಅವರು ಹೇಳಿದರು.
ಸಮಾಜ ಮುಖಂಡ ಗೋವಿಂದ ವಾಜಂತ್ರಿ ಅವರು ಮಾತನಾಡಿದರು. ಗಿರಿಮಲ್ಲಪ್ಪ ಸತ್ಯಪ್ಪ ಬಜಂತ್ರಿ ಅವರು ಶಹನಾಯ್ ವಾದನ ಮತ್ತು ಗಾಯನ ನಡೆಸಿಕೊಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇಶಕರಾದ ಸಂತೋಷ ಭೋವಿ ಅವರು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿಗಳಾದ ಅನುಸೂಯಾ ಚಲವಾದಿ, ಕೆಕೆಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾರಾಯಣಪ್ಪ ಕುರುಬರ ಸೇರಿದಂತೆ ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.