ರಾಮನ ಭಕ್ತಿಯಲ್ಲಿ ಇಂಡಿಯ ಜನ..!
ಇಂಡಿ : ರಾಮ ಭಕ್ತಿಯ ಭಾವದಲ್ಲಿ ಮುಳಗಿದ ಲಿಂಬೆ ನಾಡಿನ ರಾಮ ಭಕ್ತರು. ಇಂದು ಅಯೋಧ್ಯದಲ್ಲಿ ಬಲರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪಟ್ಟಣದ ಹೃದಯಭಾಗದ ಬಸವೇಶ್ವರ ವೃತ್ ಸಂಪೂರ್ಣ ಕೆಸರಿಮಯವಾಗಿ ಅಲಂಕಾರಗೊಂಡಿದ್ದು, ಅದಲ್ಲದೇ ವೃತ್ ದ ಕೊನೆಯ ಅಂಚಿನಲ್ಲಿ ಬಿಲ್ಲು ಬಾಣ ಹಿಡಿದು ನಿಂತಿರುವ ರಾಮನ ಚಿತ್ರವನ್ನು ಕಾಣಿಸುತ್ತಿವೆ. ಅಲ್ಲದೇ ವೃತ್ ದಲ್ಲಿ ವೇದಿಕೆ ಸೃಷ್ಟಿಸಿ ರಾಮ ಭಾವಚಿತ್ರಕ್ಕೆ ಪೂಜೆ ಪುನಸ್ಕಾರ ಹಾಗೂ ಅತೀ ಉತ್ಸಾಹದಿಂದ ಭಜನೆಯಲ್ಲಿ ರಾಮನ ಭಕ್ತರು ಮುಳಗಿದ್ದಾರೆ.
ಹಾಗೆ ತಾಲ್ಲೂಕಿನ ವಿವಿಧ ಗ್ರಾಮ ಮತ್ತು ಬೇರೆ ಎಡಯಿಂದ ಬರುವ ಜನರಿಗೆ ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದಾರೆ. ಅನ್ನ ಪ್ರಸಾದವನ್ನು ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಅಡ್ವೆಕೆಟ್ ಎಸ್ ಜಿ ಕುಲಕರ್ಣಿ ಹಾಗೂ ಹುಚ್ಚಪ್ಪ ತಳವಾರ ಇನ್ನೂ ಅನೇಕ ಮುಖಂಡರು ಸೇರಿ ಭಕ್ತಾಧಿಗಳಿಗೆ ಪ್ರಸಾದ ಉಣಬಡಿಸುತ್ತಿದ್ದಾರೆ. ಒಟ್ಟಾರೆಯಾಗಿ ಇಂಡಿಯಲ್ಲಿ ರಾಮನಾಮ ಜಪ ಹೆಚ್ಚಾಗಿದೆ.