ವಿಜಯಪುರ: ಭೀಮಾತೀರದ ಹತ್ಯಾಕಾಂಡದಿಂದ ಜಿಲ್ಲೆಯ ಹೆಸರು ಹಾಳಾಗಿದೆ ಎಂದು ಎಸ್ಪಿ ಎಚ್ ಡಿ ಆನಂದಕುಮಾರ ವಾರ್ನಿಂಗ್ ಮಾಡಿದರು. ವಿಜಯಪುರ ಜಿಲ್ಲೆಯ ಚಡಚಣ ಪೊಲೀಸ್ ಠಾಣಾ ಆವರಣದಲ್ಲಿ ಹಮ್ಮಿಕೊಂಡಿದ್ದ ರೌಡಿಶೀಟರ್ ಪರೇಡ್‌ನಲ್ಲಿ ಭೀಮಾತೀರದ ರೌಡಿಶೀಟರ್ ಮಹಾದೇವ ಸಾಹುಕಾರ್‌ಗೆ ಎಚ್ಚರಿಕೆ ನೀಡಿದ್ದಾರೆ.
ಚಡಚಣ, ಬೈರಗೊಂಡು ದ್ವೇಷದಿಂದ ಜಿಲ್ಲೆಯ ಹೆಸರು ಹಾಳಾಗಿದೆ. ಮನೆಯಲ್ಲಿ ಅಕ್ರಮ ಗನ್ ಇಟ್ಟಿದ್ರೆ ಗ್ರಹಚಾರ ಬಿಡಸ್ತೇನಿ ಎಂದು ಸಾಹುಕಾರ್‌ಗೆ ಎಸ್ಪಿ ಖಡಕ್ ವಾರ್ನಿಂಗ್ ಕೊಟ್ಟರು. ಇನ್ಮೇಲೆ ಹತ್ಯೆ ಮಾಡುವ ಪ್ಲ್ಯಾನಿಂಗ್ ಏನಾದ್ರೂ ಮಾಡಿದ್ರೆ ನಿಮ್ಗೆ ಬ್ಯಾರೇನೆ ವ್ಯವಸ್ಥೆ ಮಾಡಲಾಗುತ್ತೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ವಾರ್ನ್ ಮಾಡಿದರು.