ಚಲಿಸುತ್ತಿದ್ದ ಸುಟ್ಟು ಭಸ್ಮ..! ಗೊತ್ತಾ..?
ವಿಜಯಪುರ: ಚಲಿಸುತ್ತಿದ್ದ ಲಾರಿಯ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಇಡೀ ಲಾರಿಗೆ ವ್ಯಾಪಿಸಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದ ಬಳಿ ನಡೆದಿದೆ. TN 29- CW 8877 ನಂಬರಿನ ಲಾರಿ ಭಸ್ಮವಾಗಿದೆ. ಲಾರಿಗೆ ಬೆಂಕಿ ವ್ಯಾಪಿಸುತ್ತಲೇ ಕೆಳಗಿಳಿದು ಚಾಲಕ ಹಾಗೂ ಕ್ಲೀನರ್ ಜೀರ ಉಳಿಸಿಕೊಂಡಿದ್ದಾರೆ. ರಾಜಸ್ತಾನದಿಂದ ಬೆಂಗಳೂರಿಗೆ ತೆರಳುತ್ತಿದ್ದ ಲಾರಿ ಇದಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸಿದರು. ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.