ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ನುಗ್ಗಿದ ಉಗ್ರರನ್ನು ಸೇನಾ ಪಡೆ ಯೋಧರು ತಮ್ಮ ಧೈರ್ಯ, ಸಾಹಸ ಪ್ರದರ್ಶಿಸಿದರು
ವಿಜಯಪುರ : ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ನುಗ್ಗಿದ ಉಗ್ರರನ್ನು ಸೇನಾ ಪಡೆ ಯೋಧರು ತಮ್ಮ ಧೈರ್ಯ, ಸಾಹಸ ಪ್ರದರ್ಶಿಸಿ ಭಯೋತ್ಪಾದಕರನ್ನು ಸದೆಬಡೆದಿದ್ದಲ್ಲದೇ, ಒತ್ತೆಯಾಳಾಗಿರಿಸಿಕೊಂಡಿದ ೧೦ ಜನರನ್ನು ಸುರಕ್ಷಿತವಾಗಿ ರಕ್ಷಿಸಿ ಭಯೋತ್ಪಾದಕರನ್ನು ಸಂಹಾರ ಮಾಡುವ ರೋಮಾಂಚನಕಾರಿ ಸನ್ನಿವೇಶ ಕಂಡು ನೆರೆದ ಜನರು ಆಶ್ಚರ್ಯಚಕಿತರಾಗಿದ್ದಲ್ಲದೇ, ಸೇನೆಯ ಧೈರ್ಯ ಸಾಹಸವನ್ನು ಕೊಂಡಾಡಿದ್ದು, ಜನರಲ್ಲಿ ಸುರಕ್ಷತಾ ಭಾವ ಮೂಡಿಸಲು ಕೈಗೊಂಡ ಅಣುಕು ಪ್ರದರ್ಶನ ಯಶಸ್ವಿಯಾಗಿ ಜರುಗಿತು.
ಜಿಲ್ಲೆಯ ಆಲಮಟ್ಟಿ ಲಾಲಬಹಾದ್ದೂರ ಜಲಾಶಯದಲ್ಲಿ ಇಂದು ಹಮ್ಮಿಕೊಂಡ ಆಪರೇಶನ್ ಅಭ್ಯಾಸ ನಾಗರಿಕರ ರಕ್ಷಣಾ ಅಣುಕು ಪ್ರದರ್ಶನದಲ್ಲಿ ಭಯೋತ್ಪಾದಕರ ದಾಳಿಯನ್ನು ನಿಯಂತ್ರಿಸುವ ಸೇನಾ ಪಡೆಗಳ ಕಾರ್ಯಾಚರಣೆಯ ಅಣುಕು ಪ್ರದರ್ಶನ ನೆರೆದವರನ್ನು ಸ್ತಬ್ಧವಾಗಿರಿಸಿತು.
ಇಂದು ನಡೆದ ಅಣುಕು ಪ್ರದರ್ಶನದಲ್ಲಿ ಮೊದಲಿಗೆ ಜಲಾಶಯದ ಮುಖ್ಯ ಗೇಟ್ಗೆೆ ೨ ವಾಹನಗಳಲ್ಲಿ (ವಿ೧ ಮತ್ತು ವಿ೨) ಭಯೋತ್ಪಾದಕರ ಪ್ರವೇಶ ಮಾಡಿ ಟಿಕೆಟ್ ಕೌಂಟರ್-೨ ನಾಗರಿಕರ ಮೇಲೆ ದಾಳಿ ಮಾಡುತ್ತಾರೆ. ಚೆಕ್ಪಾಯಿಂಟ್ನಲ್ಲಿ ದಾಳಿ- ೨ ಭದ್ರತಾ ಸಿಬ್ಬಂದಿ (ಕೆಎಸ್ಐಎಸ್ಎಫ್) ಸಾವನ್ನಪ್ಪಿರುತ್ತಾರೆ ಮತ್ತು ಒಬ್ಬರು ಗಾಯಗೊಡಿರುತ್ತಾರೆ. ಗಾಯಗೊಂಡವರು ಕೆಎಸ್ಐಎಸ್ಎಫ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದಾಗ, ಅಣೆಕಟ್ಟಿನ ಸೈರನ್ ಮೊಳಗುತ್ತದೆ. ನಿಯಂತ್ರಣ ಕೊಠಡಿಯು ಎರಡೂ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ನಿಯಂತ್ರಣ ಕೊಠಡಿಗಳು, ಪೊಲೀಸ್ ಠಾಣೆಗಳು, ಅಗ್ನಿಶಾಮಕ, ಆಂಬ್ಯುಲೆನ್ಸ್ (ವಿಜಯಪುರ ಮತ್ತು ಬಾಗಲಕೋಟೆ), ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಮಾಹಿತಿ ದೊರೆಯುತ್ತದೆ. ಪ್ರವೇಶ ಬಿಂದುಗಳಿAದ ಅಣೆಕಟ್ಟಿನ ಸ್ಥಳಕ್ಕೆ ಪ್ರವೇಶವನ್ನು ನಿಲ್ಲಿಸಲು ಸ್ಥಳೀಯ ಪೊಲೀಸ್ ಅಧಿಕಾರಿಗೆ ಮಾಹಿತಿ ರವಾನಿಸಲಾಗುತ್ತದೆ. ಭಯೋತ್ಪಾದಕ ವಾಹನಗಳು ಅಣೆಕಟ್ಟಿನ ಕಡೆಗೆ ಚಲಿಸಿ, ಎ೧ ರಿಂದ ಎ೩ ಭಯೋತ್ಪಾದಕರು ಇಳಿದು ಬಂಡೆಯೊಳಗೆ ಪ್ರವೇಶಿಸುತ್ತಾರೆ. ಉದ್ಯಾನ – ಉದ್ಯಾನದ ಒಳಗೆ ಹೋಟೆಲ್ ಕಡೆಗೆ ತೆಳಿದ ಉಗ್ರವಾದಿಗಳು, ಸುಮಾರು ೧೦ ಸಾರ್ವಜನಿಕರನ್ನು ಒತ್ತೆಯಾಳುಗಳಾಗಿ ಮಾಡಿಕೊಳ್ಳುತ್ತಾರೆ. ಗಿ೨ ಅಣೆಕಟ್ಟು ವೃತ್ತಕ್ಕೆ ಸ್ಥಳಾಂತರಗೊAಡು, ಗೇಟ್ ೧ ನಲ್ಲಿ ಭದ್ರತಾ ಸಿಬ್ಬಂದಿ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆಯುತ್ತದೆ. ಗಿ೨ ನಿಂದ ಬಂದ ಎಲ್ಲಾ ಭಯೋತ್ಪಾದಕರನ್ನು ಕೆಎಸ್ಐಎಸ್ಎಫ್ ತಟಸ್ಥಗೊಳಿಸುತ್ತದೆ.
ಇನ್ನೊಂದು ಘಟನೆಯಲ್ಲಿ ಗಿ೧ ಆಲಮಟ್ಟಿ ಮುಖ್ಯ ಅಭಿಯಂತರರ ಕಚೇರಿಗೆ ಸ್ಥಳಾಂತರ ಮಾಡಿ, ಎಲ್ಲಾ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ಒಂದು ಕೋಣೆಯಲ್ಲಿ ಭಯೋತ್ಪಾದಕರು ಒತ್ತೆಯಾಳಾಗಿರಿಸಿಕೊಂಡಿರುವ ಮಾಹಿತಿಯನ್ನು ಓರ್ವ ಸಿಬ್ಬಂದಿ ನಿಯಂತ್ರಣ ಕೊಠಡಿಗೆ ನೀಡುತ್ತಾನೆ. ಆಗ ಎರಡು ಕ್ವಾಡ್ರನ್ ತಂಡಗಳನ್ನು ಕಮಾಂಡ್ ಸೆಂಟರ್ನಿAದ ಒತ್ತೆಯಾಳುಗಳನ್ನು ತೆಗೆದುಕೊಂಡ ಸ್ಥಳಗಳನ್ನು ಸುತ್ತುವರಿಯಲು ಕಳುಹಿಸಲಾಗುತ್ತದೆ. ಗಾಯಗೊಂಡ ಭದ್ರತಾ ಸಿಬ್ಬಂದಿಯನ್ನು ರಕ್ಷಿಸಲು ಮತ್ತು ಸಿಬ್ಬಂದಿ ಮತ್ತು ಭಯೋತ್ಪಾದಕರ ದೇಹಗಳನ್ನು ಸ್ಥಳಾಂತರಿಸಲು ಎರಡು ಅಗ್ನಿಶಾಮಕ ತಂಡಗಳು ಮತ್ತು ಎರಡು ಆಂಬ್ಯುಲೆನ್ಸ್ ತಂಡಗಳನ್ನು ಕಮಾಂಡ್ ಸೆಂಟರ್ದಿAದ ಎರಡೂ ದಾಳಿಯ ಸ್ಥಳಗಳಿಗೆ ಅಂದರೆ ಚೆಕ್ಪೋಸ್ಟ್ ಪಾಯಿಂಟ್ ಮತ್ತು ಗೇಟ್-೧ಗೆ ಕಳುಹಿಸಲಾಗುತ್ತದೆ.
ಒತ್ತೆಯಾಳುಗಳನ್ನು ಇರಿಸಲಾಗಿರುವ ಸ್ಥಳಗಳ ಸುತ್ತುವರಿದುವಿಕೆಯ ಘಟನೆ ಮುಂದುವರೆದು, ಭಯೋತ್ಪಾದಕ ದಾಳಿಯ ಮಾಹಿತಿಯನ್ನು ಗರುಡ ಫೋರ್ಸ್, ಎನ್ಎಸ್ಜಿ, ಪಡೆಗಳಿಗೆ ನೀಡಲಾಗುತ್ತದೆ. ಕಮಾಂಡ್ ಮತ್ತು ಕಂಟ್ರೋಲ್ ರೂಂನಲ್ಲಿ ಫೀಡ್ ಬ್ಯಾಕ್ ಪಡೆದುಕೊಳ್ಳುವುದು ಸೇರಿದಂತೆ ಭಯೋತ್ಪಾದರೊಂದಿಗಿನ ಗುಂಡಿನ ದಾಳಿ, ಭಯೋತ್ಪಾದಕರನ್ನು ಸಂಹಾರ, ಒತ್ತೆಯಾಳಾಗಿರಿಸಿಕೊಂಡಿರುವ ಜನರನ್ನು ಸುರಕ್ಷಿತವಾಗಿ ರಕ್ಷಿಸುವ ಸನ್ನಿವೇಶವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷö್ಮಣ ನಿಂಬರಗಿ ಅವರ ನೇತೃತ್ವದ ಹಮ್ಮಿಕೊಂಡ ಅಣುಕು ಪ್ರದರ್ಶನ ಯಶಸ್ವಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾತನಾಡಿ, ಇದೇ ಮಾದರಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಣುಕು ಪ್ರದರ್ಶನ ಹಮ್ಮಿಕೊಂಡು ಜಾಗೃತಿ-ತಿಳುವಳಿಕೆ ಮೂಡಿಸಲಾಗುತ್ತಿದೆ. ಆಲಮಟ್ಟಿ ಜಲಾಶಯ ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ಮಧ್ಯದಲ್ಲಿರುವ ಸೂಕ್ಷ್ಮವಾದ ಪ್ರದೇಶ ಇಂತಹ ಘಟನೆ ಸಂಭವಿಸಿದ ಸಂದರ್ಭದಲ್ಲಿ ಸಮರ್ಥವಾಗಿ ನಿಭಾಯಿಸುವ ಕುರಿತು, ತತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈ ತರಹ ಘಟನೆಗಳು ನಡೆದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಕೈಗೊಂಡಿರುವ ಸುರಕ್ಷತಾ ಕ್ರಮಗಳ ಕುರಿತು ಅಣುಕು ಪ್ರದರ್ಶನ ಮೂಲಕ ಜನರಲ್ಲಿ ಯಶಸ್ವಿಯಾಗಿ ತಿಳುವಳಿಕೆ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿ ಶ್ರೀಮತಿ ಕೆ.ಎಂ.ಜಾನಕಿ, ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


















