ಲಾರಿ ಪಲ್ಟಿ ಸ್ಥಳದಲ್ಲೇ ಚಾಲಕನ ಸಾವು..!
ಹನೂರು ಕೊಳ್ಳೇಗಾಲ ಮುಖ್ಯರಸ್ತೆಯಲ್ಲಿ ಘಟನೆ…!
ಹನೂರು : ತಮಿಳುನಾಡು ಕಡೆಯಿಂದ ಸಿಮೆಂಟ್ ಲೋಡ್ ತುಂಬಿಕೊಂಡು ಕೊಳ್ಳೇಗಾಲದ ಕಡೆಗೆ ತೆರಳುವ ವೇಳೆಯಲ್ಲಿ ತಾಲೂಕಿನ ಹುಲುಸುಗುಡ್ಡೆಯ ಹತ್ತಿರ ಲಾರಿಯೊಂದು ಪಲ್ಟಿ ಒಡೆದು ಅಪಘಾತಕ್ಕಿಡಾದ ಪರಿಣಾಮ ಬಂಡಳ್ಳಿ ಗ್ರಾಮದ ಲಾರಿಯ ಚಾಲಕ ಆದಿಲ್ (ಬಾಬು) (45) ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ತಮಿಳುನಾಡು ಕಡೆಯಿಂದ ಕೊಳ್ಳೇಗಾಲ ಕಡೆಗೆ ಸಿಮೆಂಟ್ ಲೋಡ್ ತುಂಬಿಕೊಂಡು ತೆರಳುತ್ತಿದ್ದ ವಾಹನವು ತಾಲೂಕಿನ ಬಂಡಳ್ಳಿ ಗ್ರಾಮದ ಬಾಬು ರವರು ಮಾಲೀಕರಾಗಿದ್ದು ಸ್ವತಹ ಅವರೇ ಚಾಲನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಸುತ್ತ ಮುತ್ತಲ ಗ್ರಾಮಗಳ ಸಂಬಂಧಿಕರು ಸ್ಥಳಕ್ಕೆ ಆಗಮಿಸಿದ್ದಾರೆ. ಚಾಲಕ ಬಾಬು ಅವರಿಗೆ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದು ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯ ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಲಾರಿಯ ಕೆಳಕ್ಕೆ ಸಿಲುಕಿದ್ದ ದೇಹವನ್ನು ಕ್ರೇನ್ ಮೂಲಕ ಹೊರ ತೆಗೆಯಲು ಹರ ಸಾಹಸ ಪಟ್ಟು ಶವವನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಬಗ್ಗೆ ಹನೂರು ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ: ಚೇತನ್ ಕುಮಾರ್ ಎಲ್ ,ಹನೂರು ತಾಲ್ಲೂಕು, ಚಾಮರಾಜನಗರಜಿಲ್ಲೆ