ರಾಜ್ಯದಲ್ಲಿಯೇ ಅತೀ ಹೆಚ್ಚು ಬಬಲೇಶ್ವರ ಮತಕ್ಷೇತ್ರಕ್ಕೆ ಅನುದಾನ : ಸಚಿವ ಎಮ್ ಬಿ ಪಾಟೀಲ
ವಿಜಯಪುರ: ರಾಜ್ಯದಲ್ಲಿಯೇ ಅತೀ ಹೆಚ್ಚು ಬಬಲೇಶ್ವರ ಮತಕ್ಷೇತ್ರಕ್ಕೆ ಅನುದಾನ ತಂದು ನೀರು, ರಸ್ತೆ, ವಿದ್ಯುತ್, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಿದ್ದೇನೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಶನಿವಾರ ರಾತ್ರಿ ಬಬಲೇಶ್ವರ ತಾಲೂಕಿನ ಕಂಬಾಗಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರಾಜ್ಯ ಹೆದ್ದಾರಿ ನವೀಕರಣ ಯೋಜನೆಯಡಿ ರೂ. 980 ಲಕ್ಷ ವೆಚ್ಚದ ಯರಗಟ್ಟಿ- ಬಬಲೇಶ್ವರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 15ರಲ್ಲಿ ಬರುವ 88.90 ಕಿ. ಮೀ. ಯಿಂದ 11.82 ಕಿ. ಮೀ. ವರೆಗೆ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬಬಲೇಶ್ವರ ಮತಕ್ಷೇತ್ರದಲ್ಲಿ ಅಂದಾಜು ಪ್ರತಿ ಒಂಬತ್ತು ಕಿ. ಮೀ. ಒಂದರಂತೆ 110 ಕೆ. ವಿ. ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರಿಂದಾಗಿ ಬಬಲೇಶ್ವರ ಮತ್ತು ತಿಕೋಟಾ ಎರಡೂ ತಾಲೂಕುಗಳಲ್ಲಿ ತಲಾ ಒಂಬತ್ತರಂತೆ ಒಟ್ಟು 18 ಸ್ಥಳಗಳಲ್ಲಿ 110 ಕೆ. ವಿ. ಸಾಮರ್ಥ್ಯದ ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ, ತಿಕೋಟಾ ಮತ್ತು ಬಬಲೇಶ್ವರ ಎರಡೂ ತಾಲೂಕುಗಳಲ್ಲಿ ತಲಾ ಒಂದು 220 ಕೆ. ವಿ. ವಿದ್ಯುತ್ ಕೇಂದ್ರಗಳು ಮಂಜೂರಾಗಿವೆ. ಇದರ ಜೊತೆ, ವಿಜಯಪುರ ತಾಲೂಕಿನ ಹಡಗಲಿ ಬಳಿ ರೂ. 1000 ಕೋ. ವೆಚ್ಚದ 400 ಕೆ. ವಿ ವಿದ್ಯುತ್ ಕೇಂದ್ರ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ಈಗಾಗಲೇ ಕಂಬಾಗಿ- ದೇವಾಪುರ, ಕಂಬಾಗಿ- ನಂದ್ಯಾಳಿ-ಬೋಳಚಿಕ್ಕಲಕಿ, ಕಂಬಾಗಿ- ದೇವರ ಗೆಣ್ಣೂರ ರಸ್ತೆ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗ ಗ್ರಾಮೀಣ ಸಂಪರ್ಕ ಸುಧಾರಣೆಯ ಹೊಸ ಅಧ್ಯಾಯ ಪ್ರಾರಂಭವಾಗಿದ್ದು, ಒಳರಸ್ತೆಗಳ ಸುಧಾರಣೆಗೂ ಆದ್ಯತೆ ನೀಡಲಾಗುವದು. ಈ ಯೋಜನೆಯಿಂದ ಸುಗಮ ಸಂಚಾರಕ್ಕೆ ಮಾರ್ಗ ತೆರೆಯಲಿದ್ದು, ಗ್ರಾಮೀಣ ಪ್ರದೇಶದ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ ಸಂಪರ್ಕ ವ್ಯವಸ್ಥೆ ಸುಧಾರಣೆಗೊಳ್ಳಲಿದೆ. ಅಲ್ಲದೇ, ಸಾರ್ವಜನಿಕರ ಜೀವನಮಟ್ಟದಲ್ಲೂ ಬದಲಾವಣೆ ಉಂಟಾಗಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಚನ್ನಪ್ಪ ಕೊಪ್ಪದ, ಸಚಿವರು ಬಬಲೇಶ್ವರವನ್ನು ಮಾದರಿ ಮತಕ್ಷೇತ್ರವಾಗಲು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಜಲಸಂಪನ್ಮೂಲ ಸಚಿವರಾಗಿ ಈ ಭಾಗದಲ್ಲಿ ನೀರಾವರಿ ಕ್ರಾಂತಿ ಮಾಡಿದ್ದರಿಂದ ಈ ಭಾಗದಲ್ಲಿ ಅಭಿವೃದ್ಧಿ ಪರ್ವವಾಗಿದೆ. ಅಂದು ಬತ್ತಿ ಹೋಗಿದ್ದ ತೆರೆದ ಭಾವಿಗಳು, ನೀರು ಬಾರದಿದ್ದ ಕೊಳವೆ ಭಾವಿಗಳಲ್ಲಿ ಈಗ ಅಂತರ್ಜಲ ಹೆಚ್ಚಾಗಿ ಗಂಗೆ ಭೂಮಿಗೆ ನೀರುಣಿಸುತ್ತಿದ್ದಾಳೆ. ಕೆಲವು ಕಡೆಗಳಲ್ಲಿ ಕೊಳವೆ ಭಾವಿಯಿಂದ ನೀರು ತಂತಾನೆ ಹೊರ ಬರುತ್ತಿದೆ. ತೆರೆದ ಭಾವಿಗಳಲ್ಲಿ ನೆಲಮಟ್ಟದ ವರೆಗೆ ನೀರು ಬಂದಿದೆ. ಸಚಿವರು ಈಗ ಬಬಲೇಶ್ವರ ಮತಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿ, ಉದ್ಯೋಗ ಕ್ರಾಂತಿ ಮಾಡುವ ಮೂಲಕ ಮತಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು
ಕಮರಿಮಠದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಸಚಿವ ಎಂ. ಬಿ. ಪಾಟೀಲ ಅವರು ಕೆಲಸದ ಒತ್ತಡದ ನಡುವೆಯೂ ಮತಕ್ಷೇತ್ರಕ್ಕೆ ನಿರೀಕ್ಷೆಗೂ ಮೀರಿ ಸ್ಪಂದಿಸುತ್ತಿದ್ದಾರೆ ದೊಡ್ಡ ಖಾತೆಯ ಒತ್ತಡದಲ್ಲಿಯೂ ಮತಕ್ಷೇತ್ರದ ಅಭಿವೃದ್ಧಿಗೆ ಅವರು ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ಅವರು ಎಲ್ಲ ಕ್ಷೇತ್ರಗಳಲ್ಲಿಯೂ ಅವರು ಪರಿಣಿತಿ ಹೊಂದಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಶಿರಬೂರ ಗ್ರಾಮದ ಮುಖಂಡ ಗಿರೀಶ ಪಾಟೀಲ ಅವರು, ತಮ್ಮ ಊರಿಗೆ ರಸ್ತೆ ಸುಧಾರಣೆ ಮಾಡಿದ ಸಚಿವ ಎಂ. ಬಿ. ಪಾಟೀಲ ಅವರನ್ನು ಅಭಿನಂದಿಸಿದರು. ಅಲ್ಲದೇ, ಸರಕಾರಿ ಶಾಲೆಗಳಿಗೆ ವಿತರಿಸಲು ತಮ್ಮ ಜೊತೆ ತಂದಿದ್ದ ನೋಟ್ ಬುಕ್ ಗಳನ್ನು ಸಚಿವರಿಗೆ ನೀಡಿದರು.
ಈ ಸಂದರ್ಭದಲ್ಲಿ ಜಿ. ಪಂ. ಮಾಜಿ ಅಧ್ಯಕ್ಷರಾದ ಬಸವರಾಜ ದೇಸಾಯಿ, ವಿ. ಎಸ್. ಪಾಟೀಲ, ನಂದಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಆನಂದಕುಮಾರ ಸಿ. ದೇಸಾಯಿ, ಬಬಲೇಶ್ವರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲು ದಳವಾಯಿ, ಮುಖಂಡರಾದ ಉಮೇಶ ಮಲ್ಲಣ್ಣವರ, ಸಂದೀಪ ಬಿದರಿ ಗುಣದಾಳ, ಡಾ. ಕೆ. ಎಚ್. ಮುಂಬಾರಡ್ಡಿ, ಅಪ್ಪುಗೌಡ ಪಾಟೀಲ ಶೇಗುಣಸಿ, ಮುತ್ತಪ್ಪ ಶಿವಣ್ಣವರ, ಬಸವರಾಜ ಪಾಟೀಲ ಹೊಸೂರ, ಟಿ. ಆರ್. ಪಚ್ಚನ್ನವರ ಶಿರಬೂರ, ಶಿವನಗೌಡ ಬಿರಾದಾರ, ರಮೇಶ ಬಡ್ರಿ, ಹಣಮಂತ ಸೊನ್ನದ, ಸಿದ್ದನಗೌಡ ಪಾಟೀಲ ಲಿಂಗದಳ್ಳಿ, ಎಚ್. ಬಿ. ಹರನಟ್ಟಿ, ಶಂಕರಗೌಡ ಪಾಟೀಲ, ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಸಿ. ಎಸ್. ಪೊಲೀಸಪಾಟೀಲ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.
ಇದೇ ವೇಳೆ ಸಚಿವ ಎಂ. ಬಿ. ಪಾಟೀಲ ಅವರು ಅಭಿವೃದ್ಧಿಕಾರ್ಯಗಳಿಗೆ ಮನಸೋತು ನಾನಾ ಪಕ್ಷಗಳ 25 ಯುವಕರು ಕಾಂಗ್ರೆಸ್ಸಿಗೆ ಸೇರ್ಪಡೆಯಾದರು.
1 Minister MBP Kambagi Road Bhumipuje
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಂಬಾಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಲೋಕೋಪಯೋಗಿ ಇಲಾಖೆ ವತಿಯಿಂದ ರಾಜ್ಯ ಹೆದ್ದಾರಿ ನವೀಕರಣ ಯೋಜನೆಯಡಿ ರೂ. 980 ಲಕ್ಷ ವೆಚ್ಚದ ಯರಗಟ್ಟಿ- ಬಬಲೇಶ್ವರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 15ರಲ್ಲಿ ಬರುವ 88.90 ಕಿ. ಮೀ. ಯಿಂದ 11.82 ಕಿ. ಮೀ. ವರೆಗೆ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕಮರಿಮಠದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.
2 Minister MBP Kambagi Road Bhumipuje
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಂಬಾಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಲೋಕೋಪಯೋಗಿ ಇಲಾಖೆ ವತಿಯಿಂದ ರಾಜ್ಯ ಹೆದ್ದಾರಿ ನವೀಕರಣ ಯೋಜನೆಯಡಿ ರೂ. 980 ಲಕ್ಷ ವೆಚ್ಚದ ಯರಗಟ್ಟಿ- ಬಬಲೇಶ್ವರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 15ರಲ್ಲಿ ಬರುವ 88.90 ಕಿ. ಮೀ. ಯಿಂದ 11.82 ಕಿ. ಮೀ. ವರೆಗೆ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕಮರಿಮಠದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಬಸವರಾಜ ದೇಸಾಯಿ, ಆನಂದಕುಮಾರ ಸಿ. ದೇಸಾಯಿ, ಚನ್ನಪ್ಪ ಕೊಪ್ಪದ, ವಿ. ಎಸ್. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.