ಇಂಡಿ: ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಗೂ ನೂರು ವರ್ಷ ಪೂರೈಸಿದ ಶತಮಾನ ಸಂಭ್ರಮದಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಕಟ್ಟಡದ ಉದ್ಘಾಟನೆಯ ಹಾಗೂ ತಾಲೂಕಾ ಶೈಕ್ಷಣಿಕದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪೂರ್ವಭಾವಿ ಸಭೆಯಲ್ಲಿ ರಾಜ್ಯದ ಮಾನ್ಯ ಶಿಕ್ಷಣ ಸಚಿವರು ಹಾಗೂ ಸಹಕಾರ ಸಚಿವರು ಆಗಮಿಸುತ್ತಿರುವ ಕಾರಣ ಈಗಾಗಲೇ ವಿವಿಧ ಕಾರ್ಯಗಳನ್ನು ನಿರ್ವಹಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಈ ಸಮಿತಿಯಲ್ಲಿರುವ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ತಮಗೆ ಒಪ್ಪಿಸಿದ ಕಾರ್ಯನಿಷ್ಠೆಯಿಂದ ಮಾಡಬೇಕೆಂದು ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಟಿ ಎಸ್ ಆಲಗೂರ ಅವರು ಹೇಳಿದರು.
ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕ ಶೈಕ್ಷಣಿಕ ಕಾರ್ಯಕ್ರಮ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಗೂ ನೂರು ವರ್ಷ ಪೂರೈಸಿದ ಸಂಭ್ರಮದಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಕಾರಿ ಪತ್ತಿನ ಸಂಘದ ಕಟ್ಟಡಗಳು ಅತ್ಯಂತ ಸುಂದರವಾಗಿ ನಿರ್ಮಾಣವಾಗಿದ್ದು ಒಂದೇ ಸೂರಿನಡಿಯಲ್ಲಿ ನಿರ್ಮಿತವಾಗಿದ್ದು ಸಂತೋಷ ರಾಜ್ಯದಲ್ಲೆ ಉತ್ತಮವಾದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಟ್ಟಡ ಸಹಕಾರಿ ಸಂಘದ ಕಟ್ಟಡ ಹಾಗೂ ಗುರುಭವನ ನಮ್ಮ ತಾಲೂಕಿನಲ್ಲಿರುವುದು ನಮ್ಮ ಹೆಮ್ಮೆ ಸಂತಸದ ವಿಚಾರವಾಗಿದೆ ರಾಜ್ಯದ ಶಿಕ್ಷಣ ಸಚಿವರು ಸಹಕಾರ ಸಚಿವರು ಆಗಮಿಸಿ ಉದ್ಘಾಟಿಸಲಿದ್ದು ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಅಧ್ಯಕ್ಷತೆ ಹಾಗೂ ಹಾಗೂ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರುವುದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಆಗಮಿಸಿ ಎಲ್ಲಾ ಶಿಕ್ಷಕರು ಜಾಗೃತಿಯಿಂದ ಕಾರ್ಯನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್ ವಿ ಹರಳಯ್ಯ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಸ್ ಆರ್ ನಡುಗಡ್ಡಿ, ಪತ್ತಿನ ಸಂಘದ ಅಧ್ಯಕ್ಷರಾದ ಪಬ್ಬು ಚಾಂದಕವಟೆ, ಜಿಓಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಅಲ್ಲಾಬಕ್ಸ್ ವಾಲಿಕಾರ್, ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಎಂ ಎಂ ವಾಲಿಕಾರ ದೈಹಿಕ ಶಿಕ್ಷಣಾಧಿಕಾರಿಗಳಾದ ಎಲ್ ಎಸ್ ಲಾಳಸೆರಿ, ಕಾರ್ಯದರ್ಶಿ ಎಂ ಎಂ ನೇದಲಗಿ, ವೈ ಟಿ ಪಾಟೀಲ್ ,ಎಂ ಟಿ ಮಾಶಾಳ,,ಟಿ.ಕೆ ಜಂಬಗಿ,ಪಿ ಎ ಯಲಗಾರ್, ಬಿ ಎಂ ವಠಾರ, ಎಸ್ ಸಿ ಗೌಡರ್, ಕೆ ಎಂ ಇಂಡಿ, ಎ ಎಸ್ ಬಡಿಗೇರ್, ಆನಂದ ಕೆಂಭಾವಿ ಜಯರಾಮ್ ಚೌಹಾಣ್ ಎಂಕೆ ಅಲಬಗೊಂಡ, ಪ್ರಕಾಶ ಐರೋಡಗಿ,ತುಕಾರಾಮ ಹೊಸಮನಿ,ಡಿ ಆರ್ ಕೋರೆ ,ಎಸ್ ಬಿ ಕಲ್ಲೋಳ್ಳಿ ಪಿ ಜಿ ಕಲ್ಮನಿ,ಸುರೇಶ್ ಚೌಹಾಣ್ ,ಅಂಬರೀಶ್ ರಾಥೋಡ್ , ಮೋಹನ ಕಟಕದೊಂಡ, ಶ್ರೀಶೈಲ ನಾವಿ, ಎಂ ಬಿ ಟೆಂಗಳೆ, ಎಂ ಡಿ ಕಂಠಿಕರ್
ಬಿ ಎನ್ ಜಮಾದಾರ್, ಬೆಳವಾರ್, ಜೆ.ಎಚ್ ತೆಲಗ, ಎಸ್ ಸಿ ಗಿರಣಿ,ಅನಿತಾ ರಾಥೋಡ್ ಶ್ರೀದೇವಿ ಮುಗಳಿ , ಆರತಿ ಚೌಹಾಣ್ , ಶೈಲಾ ಬಿರಾದಾರ್ ,ಸಂಜೀವ ಪರಗೊಂಡ, ಎಸ್ ಸಿ ಗಿಡಗಂಟಿ ಅಲ್ಲದೆ ಅನೇಕ ಶಿಕ್ಷಕರು ಉಪಸ್ಥಿತರಿದ್ದರು. ವೈ ಟಿ ಪಾಟೀಲ ನಿರೂಪಿಸಿ ನೇದಲಗಿ ವಂದಿಸಿದರು.