ಇಂಡಿ : 12ನೇ ಶತಮಾನದಲ್ಲಿ ಹಲವಾರು ಶರಣ-ಶರಣೆಯರು ಆಗಿಹೋಗಿದ್ದಾರೆ. ಅಂತಹ ಕೆಲವೇ ಶರಣೆಯರಲ್ಲಿ ಪ್ರಥಮ ಕವಿಯಿತ್ರಿಯಾಗಿ ಹೊರ ಹೊಮ್ಮಿದವರು ಅಕ್ಕಮಹಾದೇವಿ ಮೊದಲಿಗರು ಎಂದು ಹೇಳಿದರು.
ಅವರು ಇಂಡಿ ಪಟ್ಟಣದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶರಣ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಮಹಿಳಾ ಕದಳಿ ವೇದಿಕೆ ಇವರ ಸಹಯೋಗದಲ್ಲಿ “ಮನ ಮನೆಗಳಲ್ಲಿ ಶರಣರ ಸಂದೇಶ” 9ನೇ ಕಾರ್ಯಕ್ರಮದಲ್ಲಿ ಪ್ರೊ ಐ ಬಿ ಸುರಪುರ ಇವರು ದತ್ತಿ ದಾನ ನೀಡಿದ ಲಿಂ. ಸಂಗಮ್ಮ ಬ ಸುರಪುರ ದತ್ತಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಂದೆ-ತಾಯಿಯರು ಒತ್ತಾಯದ ಮೇರೆಗೆ ಕೌಶಿಕ ರಾಜನನ್ನು ಮದುವೆಯಾಗಿ, ಅಂತರಂಗದ ಆತ್ಮ ಕರೆಯ ಒತ್ತಾಯದ ಮದುವೆಯನ್ನು ಮುರಿದುಕೊಂಡು, ಭವದ ಗಂಡನನ್ನು ತ್ಯಜಿಸಿ ತರದ ಗಂಡನಾದ ಚೆನ್ನಮಲ್ಲಿಕಾರ್ಜುನನ್ನು ಅರಸುತ್ತ ಕಲ್ಯಾಣದ ಅನುಭವ ಮಂಟಪದ ಸದಸ್ಯರು ಪ್ರಥಮ ಕವಿಯಿತ್ರಿಯಾಗಿ ಯೋಗಾಂಗ ತ್ತಿವಿಧಿ, ಮಂತ್ರಗೋಪ್ಯ ಕೃತಿಗಳನ್ನು ರಚಿಸಿದ್ದಾರೆ ಎಂದು ಹೇಳಿದರು.
ಕದಳಿ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಗಂಗಾ ಚ ಗಲಗಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ,, ಕದಳಿ ವೇದಿಕೆಯು ನಡೆದು ಬಂದ ದಾರಿಯ ಕುರಿತು ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಡಾ ಸ್ವರೂಪಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆರ್ ವಿ ಪಾಟೀಲರು ಸ್ವಾಗತಿಸಿದರು. ವೇದಿಕೆಯ ಮೇಲೆ ಪ್ರೊ ಆಯ ಬಿ ಸುರಪುರ,ಪ್ರೊ ಎಂ ಜೇ ಪಾಟೀಲ, ಸಿ ಎಂ ಬಂಡಗರ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿರ್ಮಲಾ ಹಂಜಗ,ಭವಾನಿ ಗುಳೇದಗುಡ್ಡ, ಜಯಶ್ರೀ ಬಿರಾದಾರ, ಸುಮಂಗಲಾ ನಿಂಬಾಳ, ಬಿ ಎಚ್ ಪೋಲಿಸ್ ಪಾಟೀಲ, ಸದಾನಂದ ಈರನಕೇರಿ ಶರಣಗೌಡ ಬಿರಾದಾರ ಹಾಜರಿದ್ದರು.