ಮುದ್ದೇಬಿಹಾಳ : ಗ್ರಾಮ ಆಡಳಿತಾಧಿಕಾರಿಗಳ ಮುದ್ದೇಬಿಹಾಳ ತಾಳಿಕೋಟೆ ತಾಲ್ಲೂಕು ಸಂಘದಿಂದ ತಾಲ್ಲೂಕಾ ಆಡಳಿತ ಸೌಧದ ಮುಂಭಾಗದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ೩ ದಿನಕ್ಕೆ ಕಾಲಿಟ್ಟಿದ್ದು, ಮುಷ್ಕರ ಸ್ಥಳಕ್ಕೆ ಬುಧುವಾರ ಶಾಸಕ ಕೆಎಸ್ ಡಿ ನಿಮಮದ ಅಧ್ಯಕ್ಷ ಸಿ.ಎಸ್ ನಾಡಗೌಡ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ್ಯ ಗಂಗಾಧರ ಜೂಲಗುಡ್ಡ ಸುಮಾರು ೨೩ ಬೇಡಿಕೆಗಳನ್ನ ಇಟ್ಟಕೊಂಡು ನಾವು ಮುಷ್ಕರ ನಡೆಸುತ್ತಿದ್ದೇವೆ. ಈಗಾಗಲೇ ಒಂದು ಬಾರಿ ನಾವು ಮುಷ್ಕರ ನಡೆಸಿದಾಗ ನಮಗೆ ಯಾವುದೇ ರೀತಿಯ ಲಿಖಿತ ರೂಪದ ಭರವಸೆ ಸಿಗಲಿಲ್ಲಾ. ಆದರೆ ನಾವು ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರತಿಭಟನೆಯನ್ನ ಹಿಂಪಡೆದುಕೊಂಡಿದ್ದೇವು ಆದರೆ ನಮ್ಮ ಹಾಗೂ ನಮ್ಮ ಕುಟುಂಬದವರ ಸಲುವಾಗಿ ನಾವು ಪ್ರತಿಭಟನೆ ಮಾಡುವದು ಅವಶ್ಯವಾಗಿದೆ. ಬೇರೆ ಇಲಾಖೆಗಳಲ್ಲಿ ಇರುವಂತೆ ಕಂದಾಯ ಇಲಾಖೆಯಲ್ಲೂ ವರ್ಗಾವಣೆ ನೀತಿ ಜಾರಿಗೆ ತರಲು ಮಾರ್ಗಸೂಚಿ ರೂಪಿಸಬೇಕು. ಸುಸಜ್ಜಿತ ಕಚೇರಿ ಸೇರಿ ಮೂಲಸೌಕರ್ಯ ಒದಗಿಸಬೇಕು ಎಂದರು .
ಮನವಿ ಸ್ವೀಕರಿಸಿದ ಶಾಸಕ ಸಿ.ಎಸ್ ನಾಡಗೌಡ ಅಪ್ಪಾಜಿ ಮಾತನಾಡಿ, ‘ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗಳು ನ್ಯಾಯಸಮ್ಮತವಾಗಿದೆ. ಬಜೆಟ್ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇನೆ. ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಅಶೋಕ ನಾಡಗೌಡ ,ಚಿನ್ನು ನಾಡಗೌಡ ,ಪಿಎಸೈ ಸಂಜಯ ತಿಪ್ಪರೆಡ್ಡಿ ಹಾಗೂ ಗ್ರಾಮಾಡಳಿತಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಮನೋಜ್ ರಾಠೋಡ, ರಿಯಾಜ್ ನಾಯ್ಕೂಡಿ, ಆರ್ ಎಸ್ ಹೊಸೂರ, ಶಬ್ಬಿರ ಮುಲ್ಲಾ, ಸುನಿಲ್ ರಾಠೋಡ, ಎ.ಎಸ್ ಬಾಗವಾನ, ಶ್ರೀನಿವಾಸ ಹುನಗುಂದ,ಶಿವಶರಣ ಕುಂಬಾರ, ದೇವರಾಜ ಗುರಿಕಾರ,ಆರತಿ ಬಳವಾಟ, ಅನುಪಮ ಪೂಜಾರ, ಗಂಗಮ್ಮ ಕುಂಬಾರ, ಕಾವ್ಯ ಮುಲ್ಲಾಳ, ಶಿವಾನಂದ ಅಂಗಡಿ, ಶೈಲಶ್ರೀ ಕಂಚ್ಯಾಣಿ, ಕಿಶೋರ ಹಜೇರಿ, ಶೃತಿ ಡಂಬಳ ಮುದ್ದೇಬಿಹಾಳ ತಾಳಿಕೋಟೆ ತಾಲೂಕಿನ ಗ್ರಾಮಾಡಳಿ – ತಾಧಿಕಾರಿಗಳು ಸಹಾಯಕರು ಸೇರಿದಂತೆ ಭಾಗವಹಿಸಿದ್ದರು.