ಭಾರತೀಯ ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದ್ದು
ಶ್ರೀ ವಿಶ್ವಕರ್ಮರ ಭಾವಚಿತ್ರವನ್ನು ಭವ್ಯ ಮೆರವಣಿಗೆ ಜಯಂತಿ ಆಚರಣೆ.
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ ; ಭಾರತೀಯ ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದ್ದು, ಅನೇಕ ಗುಡಿ, ದೇವಸ್ಥಾನ, ಪ್ರಾಚೀನ ಸ್ಮಾರಕಗಳ ನಿರ್ಮಾಣದಿಂದಾಗಿ ಸಮುದಾಯದ ಕಲೆ, ಸಂಸ್ಕೃತಿ ಪ್ರಸಿದ್ಧಿ ಪಡೆದಿವೆ’ಎಂದು ಮುರನಾಳ ಮಳೆರಾಜೇಂದ್ರಸ್ವಾಮಿಮಠದ ಶ್ರೀ ಜಗನ್ನಾಥ ಮಹಾಸ್ವಾಮಿಗಳು ಹೇಳಿದರು ಅವರು ಬುಧವಾರ ಪಟ್ಟಣದ ಶಿರವಾಳ ಬಡಾವಣೆಯಲ್ಲಿ ವಿಶ್ವಕರ್ಮ ಸಮಾಜದಿಂದ ಆಯೋಜಿಸಲಾಗಿದ್ದ ಶ್ರೀ ವಿಶ್ವಕರ್ಮ ಜಯಂತೋತ್ಸವದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಗಣಿ ಆರ್ ಸಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಭೀಮರಾವ ಬಡಿಗೇರ ಜಗತ್ತನ್ನು ಸೃಷ್ಟಿಮಾಡಿದ ವಿಶ್ವಕರ್ಮ ಪರಬ್ರಹ್ಮನ ವಂಶಸ್ಥರು ನಾವು ಗಳು ದೇವರನ್ನು ಸೃಷ್ಟಿಸಿದ ವಿಶ್ವಕರ್ಮ ಕುರಿತು 81 ಮತ್ತು 82 ನೇ ಸೂಕ್ತದಲ್ಲಿರುವ ಕುರಿತು ವಿಶ್ವಕರ್ಮನ ಹತ್ತನೆ ಮಂಡಲದಲ್ಲಿ ಉಲ್ಲೇಖವಿದೆ.
ಪೌರಾಣಿಕ ಐತಿಹಾಸಿಕ ಹಿನ್ನೆಲೆಯಲ್ಲಿ ರಾಮಸೇತು ನಿರ್ಮಾಣ ಮಾಡಿದ ನಳ ನಮ್ಮ ವಂಶದವನು, ಇವತ್ತಿನ ಕಾಲಘಟ್ಟದಲ್ಲಿ ನಮ್ಮ ಕಲೆ ಕಲಾಕೃತಿಗಳನ್ನು ನಾವು ವಿದೇಶಕ್ಕೆ ರಫ್ತು ಮಾಡಬೇಕು ಅದಕ್ಕೆ ಸೂಕ್ತವಾದ ಮಾರುಕಟ್ಟೆ ನಿರ್ಮಿಸಿಕೂಳ್ಳಲು ಶಿಕ್ಷಣವಂತರನ್ನಾಗಿಸಬೇಕು
ಸ್ವತಂತ್ರ ಉದ್ಯಮ ಆರಂಭಿಸಬೇಕು ಎಲ್ಲರೂ ಸರಕಾರಿ ನೌಕರಿ ಮಾಡಲು ಸಾಧ್ಯವಿಲ್ಲ, ಗುಡಿ ಕೈಗಾರಿಕೆ ಮೂಲಕ ಉದ್ಯಮ ಆರಂಭಿಸಿ ಮಹತ್ತರ ಸಾಧನೆ ಮಾಡಬೇಕು ಮತ್ತು ರಾಜಕೀಯ ಮೀಸಲಾತಿ ಪಡೆಯಲು ಒಂದಾಗಬೇಕು ಎಂದರು.
ವಿಶ್ವಕರ್ಮ ಮಹಾಸಭಾದ ತಾಲೂಕು ಅಧ್ಯಕ್ಷ ಮಲ್ಲಣ್ಣ ಪತ್ತಾರ (ತಾರನಾಳ) ಶಿಕ್ಷಕಿ ಗೀತಾ ವಿ ಶಿರವಾಳ ಪ್ರಾಸ್ತಾವಿಕ ಮಾತನಾಡಿ ಭಾರತೀಯ ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದ್ದು, ಅನೇಕ ಗುಡಿ, ದೇವಸ್ಥಾನ, ಪ್ರಾಚೀನ ಸ್ಮಾರಕಗಳ ನಿರ್ಮಾಣದಿಂದಾಗಿ ಸಮುದಾಯದ ಕಲೆ, ಸಂಸ್ಕೃತಿ ಪ್ರಸಿದ್ಧಿ ಪಡೆದಿವೆ’ಎಂದು ಹೇಳಿದರು.
ಇದಕ್ಕೂ ಮುನ್ನ ತಹಶಿಲ್ದಾರ ಕಚೇರಿಯಲ್ಲಿ ತಾಲೂಕ ಆಡಳಿತದಿಂದ ವಿಶ್ವಕರ್ಮ ಜಯಂತಿ ಆಚರಿಸಲಾಯಿತು ನಂತರ ಪಟ್ಟಣದ ಶ್ರೀ ಕಾಳಿಕಾದೇವಿ ಮಂದಿರದಿಂದ ಶಿರವಾಳ ಬಡವಾಣೆಯವರಗೆ ಶ್ರೀ ವಿಶ್ವಕರ್ಮರ ಭಾವಚಿತ್ರದ ಭವ್ಯ ಮೆರವಣಿಗೆ ಸಕಲ ಮಂಗಲವಾಧ್ಯಗಳೂಂದಿಗೆ ಮಾಡಲಾಯಿತು .
ಕಾರ್ಯಕ್ರಮದ ವೇದಿಕೆಯಲ್ಲಿ ನಾಲತವಾಡ ಬ್ರಹ್ಮಾಂಡ ಭೇರಿಮಠದ ಶ್ರೀ ಪಂಪಾಪತಿ ಮಹಾಸ್ವಾಮಿಗಳು, ಕಾಳಿಕಾದೇವಿ ಮಂದಿರದ ಅರ್ಚಕ ಸುರೇಶ ಹೇಮಾದ್ರಿ , ತಾಲೂಕ ಅಧ್ಯಕ್ಷ ಮಲ್ಲಣ್ಣ ಪತ್ತಾರ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಚಂದ್ರಶೇಖರ ಪತ್ತಾರ, ಕರಣೇಶ ಪತ್ತಾರ, ವಿಜಯಕುಮಾರ್ ಬಡಿಗೇರ, ಮೌನೇಶ ಪತ್ತಾರ ( ಬಳಬಟ್ಟಿ) ಕಾಳಪ್ಪ ಬಡಿಗೇರ ( ಹಳ್ಳೂರ) ವಿರೂಪಾಕ್ಷಿ ಪತ್ತಾರ,ನಾರಾಯಣ ದೂಟಿಹಾಳ, ಕಾಶಿಪತಿ ಪತ್ತಾರ,ಕಾಶಿನಾಥ ಬಡಿಗೇರ, ಸುರೇಶ ಪತ್ತಾರ, ಮೌನೇಶ ಮಡಿಕೇಶ್ವರ, ಗಂಗಾಧರ ಬಾಗಲಕೋಟ, ಶಿವಾನಂದ ನಂದರಗಿ,ಮೌನೇಶ ಪತ್ತಾರ ಇಟಗಿ, ಮಳೆಯಪ್ಪ ಪತ್ತಾರ, ಮಾನಪ್ಪ ಪತ್ತಾರ ( ತಮದಡ್ಡಿ) ಪುರಸಭೆ ಸದಸ್ಯೆ ಸಹನಾ ಬಡಿಗೇರ ಸೇರಿದಂತೆ ಸಮಾಜದ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾಳಮ್ಮ ಪತ್ತಾರ, ಮೀನಾಕ್ಷಿ ಪತ್ತಾರ ಸಹೋದರಿಯರು ಪ್ರಾರ್ಥಸಿದರು ಬಾಲಕಿ ಲಕ್ಷ್ಮೀ ಬಡಿಗೇರ ಭರತನಾಟ್ಯ ಮಾಡಿದಳು ,ಬಸವರಾಜ ಬಡಿಗೇರ ಸ್ವಾಗತಿಸಿದರು ,ದೇವೇಂದ್ರ ಪತ್ತಾರ ನಿರೂಪಿಸಿದರು ಪ್ರಕಾಶ ಪತ್ತಾರ ವಂದಿಸಿದರು.