ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ತಂತ್ರಜ್ಞಾನ ಮುಖ್ಯ
ದೇಶದ ಅಭಿವೃದ್ದಿಗೆ ವಿಜ್ಞಾನದ ಕೊಡುಗೆ ಅಪಾರ
ಇಂಡಿ : ದೇಶದ ಅಭಿವೃದ್ದಿಗೆ ವಿಜ್ಞಾನದ ಕೊಡುಗೆ ಅಪಾರವಾಗಿದೆ. ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ತಂತ್ರಜ್ಞಾನ ಮುಖ್ಯ. ಸಮಾಜದಲ್ಲಿ ವಿಜ್ಞಾನದ ಪಾತ್ರ ಮತ್ತು ಉದಯೋನ್ಮುಖ ವೈಜ್ಞಾನಿಕ ವಿಷಯಗಳ ಕುರಿತು ಮಕ್ಕಳನ್ನು ತೊಡಗಿಸಿಕೊಳ್ಳುವ ಅಗತ್ಯವನ್ನು ವಿಜ್ಞಾನದಿಂದ ನಡೆಯುತ್ತಿದೆ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ ಗದ್ಯಾಳ ಹೇಳಿದರು.
ಪಟ್ಟಣದ ಹಡಪದ ಅಪ್ಪಣ್ಣ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಮತ್ತು ವಿಜ್ಞಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರೇಬೇವನೂರ ವೇದಮೂರ್ತಿ ದಯಾನಂದ ಹಿರೇಮಠ ಮಾತನಾಡಿ ವಿಜ್ಞಾನ ಮತ್ತು ನಮ್ಮ ಜೀವನದಲ್ಲಿ ಅದರ ಮಹತ್ವ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲು ವಿಜ್ಞಾನ ದಿನಾಚರಣೆ ಮುಖ್ಯ ಎಂದರು.
ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಮಾತನಾಡಿ ವಿದ್ಯಾರ್ಥಿಗಳು ವಿಜ್ಞಾನದ ಸಾಧಕಗಳ ಪ್ರಯೋಜನ ಪಡೆದುಕೊಳ್ಳಬೇಕು. ಬಾಧಕಗಳ ಬಗ್ಗೆ ವಿಚಾರ ಮಾಡಬಾರದು ಎಂದರು. ಮುಖ್ಯ ಶಿಕ್ಷಕಿ ಭವಾನಿಗೌಡ ಮತ್ತು ಜಯಶ್ರೀ ಗೌಡ ಮಾತನಾಡಿದರು.
ಸಭೆಯಲ್ಲಿ ಭೀಮರಾಯಗೌಡ ಬಿರಾದಾರ,ಶ್ರೀ ಹಡಪದ ಅಪ್ಪಣ್ಣ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಂತೋಷ ಗವಳಿ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸಿದರಾಯ ಅಪ್ತಾಗಿರಿ, ಉಪಾಧ್ಯಕ್ಷ ಶಿವಾನಂದ ನಾವಿ,ಆಡಳಿತ ಅಧಿಕಾರಿ ಪಂಡಿತ ಬಿರಾದಾರ, ಸಿದ್ದು ನಾವಿ, ನಟರಾಜ ಗವಳಿ , ಶಕುಂತಲಾ ನಾವಿ ಮತ್ತಿತರರು ವೇದಿಕೆಯ ಮೇಲೆ ಇದ್ದರು.
ಇಂಡಿ ಪಟ್ಟಣದ ಹಡಪದ ಅಪ್ಪಣ್ಣ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಮತ್ತು ವಿಜ್ಞಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಅಬೀದ ಗದ್ಯಾಳ ಮಾತನಾಡಿದರು.