ನಿಯಮಗಳ ಅಡಿಯಲ್ಲಿ ಅಧ್ಯಕ್ಷ ಕುಲಕರ್ಣಿ ಯವರ ಆಯ್ಕೆ
ಇಂಡಿ : ಪಟ್ಟಣದ ಪ್ರತಿಷ್ಠಿತ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿ.ಎಸ್.ಕುಲಕಣ ðಯವರ ಆಯ್ಕೆ ಸಂಸ್ಥೆಯ ನಿಯಮಾವಳಿ ಪ್ರಕಾರ ಆಗಿದೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ ತಿಳಿಸಿದ್ದಾರೆ.
ಜಿ.ಎಸ್.ಕುಲಕರ್ಣಿ ಯವರ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸ್ಥೆ ಕಾನೂನು ಬದ್ಧವಾಗಿ ಜಿಲ್ಲಾ ಸಂಘಗಳ ನೊಂದಣಾಧಿಕಾರಿಗಳು ಹಾಗೂ ಸಹಕಾರ ಸಂಸ್ಥೆಗಳ ಉಪನಿಬಂಧಕರು ವಿಜಯಪುರ ಇವರ ಬಾಯಲಾ ಪ್ರಕಾರ ಕಾರ್ಯ ನಿರ್ವಹಿಸುತ್ತಿದೆ. ಮತ್ತು ೨೬.೬. ೨೦೨೪ ರಂದು ಜಿಲ್ಲಾ ಸಂಘಗಳ ನೋಂದಣಾಧಿಕಾರಿಗಳು ಹಾಗೂ ಸಹಕಾರಿ ಸಂಘಗಳ ಉಪನಿಬಂಧಕರು ವಿಜಯಪುರ ಇವರ ನಿಯಮದಂತೆ ಸಭೆ ನಡೆದಿದೆ.
೨೦.೧. ೨೦೨೫ ರಂದು ಸಂಸ್ಥೆಯ ಆಡಳಿತ ಮಂಡಳಿಯ ಸಭೆ ನಡೆದಾಗ ಕೆಲವು ಜನರು ಬಂದು ಅನಾವಶ್ಯಕ ಗೊಂದಲ ದಿಂದಾಗಿ ಸಭೆಯನ್ನು ಮುಂದುಡಿ ನಂತರ ಸಭೆ ನಡೆಸಿ ದೀಪಕ ದೋಶಿ ಇವರಿಂದ ತೆರವಾದ ಸ್ಥಾನಕ್ಕೆ ಜಿ.ಎಸ್.ಕುಲಕರ್ಣಿ ಇವರನ್ನು ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಕೆಲವು ವ್ಯಕ್ತಿಗಳು ಸಂಸ್ಥೆಗೆ ಕೆಟ್ಟ ಹೆಸರು ತರಲು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು ಅದು ಸತ್ಯಕ್ಕೆ ದೂರಾಗಿದೆ ಎಂದು ಬಗಲಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನೂತನ ಅಧ್ಯಕ್ಷ ಜಿ.ಎಸ್.ಕುಲಕರ್ಣಿ, ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ, ಖಜಾಂಚಿ ಸಿದ್ದಪ್ಪ ತಾಂಬೆ, ಭೀಮನಗೌಡ ಪಾಟೀಲ, ಸಾತು ತೆನೆಹಳ್ಳಿ ಮತ್ತಿತರಿದ್ದರು.
ಇಂಡಿಯ ಕುಲಕರ್ಣಿ ಇವರ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿ
