ಮುದ್ದೇಬಿಹಾಳ : ನಮ್ಮ ಸಮಾಜದಲ್ಲಿ ಕಲ್ಲು ಒಡೆದು ಕಾಯಕವನ್ನು ನಂಬಿರುವ ಸಮಾಜ ನಮ್ಮ ಸಮಾಜದ ಮಕ್ಕಳು ಶಿಕ್ಷಣವಂತರಾಗಿ ಉನ್ನತ ಸ್ಥಾನದಲ್ಲಿ ಬೆಳೆಯಬೇಕು ಎಂದು ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ ತಾಲೂಕಾ ಘಟಕ ಉಪಾಧ್ಯಕ್ಷ ಹಣಮಂತ.ಯ.ಭೈರವಾಡಗಿ ಹೇಳಿದರು.ಅವರು ತಾಲೂಕಿನ ಢವಳಗಿ ಗ್ರಾಮದ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಢವಳಗಿ ಗ್ರಾಮದ ವಡ್ಡರ ಸಮಾಜ ಹಾಗೂ ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ ಮುದ್ದೇಬಿಹಾಳ ತಾಲೂಕಾ ಘಟಕದ ವತಿಯಿಂದ ತಾಲೂಕಾ ಮಟ್ಟದ ೨೦೨೫ ನೇ ಸಾಲಿನಲ್ಲಿ ನಮ್ಮ ಭೋವಿ (ವಡ್ಡರ) ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಮ್ಮ ಸಮಾಜದ ಅತಿ ಹೆಚ್ಚು ಅಂಕ ಪಡೆದು ಎಸ್ ಎಸ್ ಎಲ್ ಸಿ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳಾದ ಅಭಿಷೇಕ ಲೋ ಮುರಾಳ, ಸ್ವಪ್ನಾ ರಾ ಭೈರವಾಡಗಿ, ಹಣಮಂತಿ ನಾ ವಡ್ಡರ, ಅಭಿಷೇಕ ಲ ನಡವಿನಮನಿ,ವೆಂಕಟೇಶ ಗ ಗೌಂಡಿ, ಸಂಜನಾ ಪ್ರ ಗೌಂಡಿ, ಲಕ್ಷ್ಮಿ ಮ ವಡ್ಡರ, ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ನಾಗಮ್ಮ ಭೀ ಗುಜ್ಜಲ, ಅಕ್ಷತಾ ವಿ ಬಂಡಿವಡ್ಡರ ಇವರಿಗೆ ಗೌರವ ಸನ್ಮಾನಿಸಿ ಅಭಿನಂದಿಸಲಾಯಿತು ಅಧ್ಯಕ್ಷತೆಯನ್ನು ಮಾಜಿ ಗ್ರಾ ಪಂ ಸದಸ್ಯ ರವಿ ಢವಳಗಿ ವಹಿಸಿದ್ದರು.ಮುಖ್ಯ ಅಥಿತಿಗಳಾಗಿ ಪ್ರಕಾಶ ಭೈರವಾಡಗಿ, ನಾಗಪ್ಪ ಢವಳಗಿ, ರಾಜು ಭೈರವಾಡಗಿ, ಕಾಶಪ್ಪ ಭೈರವಾಡಗಿ, ಹಣಮಂತ ಮುತ್ತಗಿ, ರಾಜು ಢವಳಗಿ, ಗಿರೀಶ್ ಭೈರವಾಡಗಿ, ನಾಗರಾಜ ಭೈರವಾಡಗಿ, ರಾಮು ವಡ್ಡರ ಲಕ್ಷ್ಮಣ ಭೈರವಾಡಗಿ, ಸೋಮಪ್ಪ ಢವಳಗಿ, ಭೀಮಣ್ಣ ಢವಳಗಿ, ಬಾಬುರಾವ್ ಭೈರವಾಡಗಿ,ಪ್ರವೀಣ ಢವಳಗಿ, ರಾಜ್ಯ ಕಾರ್ಯದರ್ಶಿ ಹಣಮಂತ ಭೀ ಬೆಳಗಲ್ಲ,ಪ್ರಶಾಂತ ಭೈರವಾಡಗಿ, ಹಣಮಂತ ಢವಳಗಿ, ಬಾಬು ಭೋವಿ, ಬಸವರಾಜ ಆಲಕುಂಟಿ,ಸೇರಿದಂತೆ ಭಾಗವಹಿಸಿದ್ದರು.