ರಂಗಭೂಮಿಯ ಕಲೆಯನ್ನು ಮತ್ತು ಕಲಾವಿದರನ್ನು ಉಳಿಸಲು ರಂಗ ಕಲೆಗೆ ಪ್ರೋತ್ಸಾಹಿಸಬೇಕು
ಗ್ರಾಮದೇವತೆ ಜಾತ್ರೆಯ ಪ್ರಯುಕ್ತ ಪಟ್ಟಣದಲ್ಲಿ ಇದೆ ಮೊದಲ ಬಾರಿಗೆ ನಾಟಕ ಪ್ರದರ್ಶನ
ವರದಿ : ಬಸವರಾಜ ಕುಂಬಾರ,
ಮುದ್ದೇಬಿಹಾಳ ;ರಂಗಭೂಮಿಯ ಕಲೆಯನ್ನು ಮತ್ತು ಕಲಾವಿದರನ್ನು ಉಳಿಸಲು ರಂಗ ಕಲೆಗೆ ಪ್ರೋತ್ಸಾಹಿಸಬೇಕು ಪ್ರತಿಯೊಬ್ಬರು ನಾಟಕಗಳನ್ನು ನೋಡಬೇಕೆಂದು ಗದಗ ಜಿಲ್ಲೆಯ ಶ್ರೀ ಮಲ್ಲಿಕಾರ್ಜುನ ನಾಟ್ಯ ಸಂಘ ಕೆಲ್ಲೂರ ನಾಟಕ ಕಂಪನಿಯ ಮಾಲೀಕ ಕಲಾವಿದ ಮಂಟೇಶ ದಂಡಿನ ಕೆಲ್ಲೂರ ಹೇಳಿದರು ಬುಧುವಾರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಗ್ರಾಮದೇವತೆ ಜಾತ್ರೆಯ ಪ್ರಯುಕ್ತ ಮುದ್ದೇಬಿಹಾಳ ಪಟ್ಟಣದಲ್ಲಿ ಇದೆ ಮೊದಲ ಬಾರಿ ನಮ್ಮ ನಾಟಕ ಕಂಪನಿ ನಾಟಕ ಪ್ರದರ್ಶನ ಮಾಡುತ್ತಿದೆ ಪಟ್ಟಣದ ಲಕ್ಷ್ಮೀ ಚಿತ್ರಮಂದಿರ ಹಿಂಭಾಗದ ಶ್ರೀ ಅಂಬಾ ಭವಾನಿ ಮಂದಿರ ಪಕ್ಕದ ಜಾಗೆಯಲ್ಲಿ ರಂಗಸಜ್ಜಿಕೆ ಹಾಕಲಾಗಿದೆ ಪ್ರತಿ ದಿನ ಎರಡು ಪ್ರದರ್ಶನ ಮಧ್ಯಾಹ್ನ 2:30 ಕ್ಕೆ ಹಾಗೂ ಸಾಯಂಕಾಲ 6:30 ಕ್ಕೆ ಇರುತ್ತದೆ
ಈ ವೇಳೆ ಜ್ಯೂನಿಯರ್ ಶಿವರಾಜಕುಮಾರ್ ಚಂದ್ರು ಅಂಬಲಿ, ವಿ ಐ ಹಿರೇಮಠ, ಶಿವಪ್ಪ ಚಿನಿವಾರ ಉಪಸ್ಥಿತರಿದ್ದರು