ಅಫಜಲಪುರ: ಸಂವಿಧಾನ ಶಿಲ್ಪಿ ಡಾ.ಬಾಬ ಸಾಹೇಬ ಅಂಬೇಡ್ಕರ್ ಅವರ ವಿಚಾರ ಸಿದ್ದಾಂತಗಳು ನಮ್ಮ ದಿನ ನಿತ್ಯ ಜೀವನಕ್ಕೆ ಬಹಳ ಅಗತ್ಯವಾಗಿವೆ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿ ಕೊಟ್ಟ ಹಾದಿಯಲ್ಲಿ ಸಾಗಬೇಕು ಎಂದು ಜಿಪಂ ಮಾಜಿ ಸದಸ್ಯ ಅರುಣಕುಮಾರ ಪಾಟೀಲ ಹೇಳಿದರು.
ಅವರು ತಾಲೂಕಿನ ಮಲ್ಲಾಬಾದ ಗ್ರಾಮದಲ್ಲಿ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಡಾ ಬಿ ಆರ್ ಅಂಬೇಡ್ಕರ ಅವರ 131 ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂವಿಧಾನದದಲ್ಲಿ ಅಂಬೇಡ್ಕರ್ ಅವರು ಪ್ರತಿಯೊಬ್ಬರಿಗೂ ನ್ಯಾಯಯುತ ಹಕ್ಕುಗಳು ನೀಡಿದ್ದಾರೆ. ಸಮ ಸಮಾಜವನ್ನು ಕಟ್ಟುವ ಸಂದೇಶ ಸಾರಿದ್ದಾರೆ ಅವರೊಬ್ಬರು ಮಹಾನ ವ್ಯಕ್ತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆ.ಡಿ ಎಸ್ ಮುಖಂಡರಾದ ಶಿವಕುಮಾರ ನಾಟೀಕಾರ ಗ್ರಾ ಪಂ ಅಧ್ಯಕ್ಷ ಚಿದಾನಂದ ಬಸರಿಗಿಡ. ಲಚ್ಚಪ್ಪ ಜಮಾದಾರ ನಾಗೇಶ ಕೊಳ್ಳಿ, ಬೀರಣ್ಣ ಕಲ್ಲೂರ, ರಾಜು ಆರೇಕಾರ ಮಹಾಂತೇಶ ಕವಲಗಿ, ಯಲ್ಲಾಲಿಂಗ ದೊಡ್ಮನಿ, ದೇವಿಂದ್ರ ಕಲಬಂಡಿ ಸಾಯಬಣ್ಣ ಪೂಜಾರಿ, ಮಲ್ಲಿಕಾರ್ಜುನ ಸಿಂಗೆ, ಅಪ್ಪಾಸಾಬ ಪಾಟೀಲ ಶಿವು ಸಿಂಗೆ, ಆನೂರ, ಬಾಗಣ್ಣ ಕೊಳ್ಳಿ, ಗುರಣಗೌಡ ಮಲ್ಲಾಬಾದ ಶ್ರೀಶೈಲ ಸಿಂಗೆ, ಮಹಾಂತ ಬಳ್ಳೂಂಡಗಿ, ಲಕ್ಕಪ್ಪ ಪೂಜಾರಿ, ಸಂತೋಷ ರಂಡಲ್, ಮಡಿವಾಳ ಕಟ್ಟಿಮನಿ ಯಲ್ಲು ಮ್ಯಾಕೇರಿ, ಸಾಗರ ಮ್ಯಾಕೇರಿ ಸೇರಿದಂತೆ ಇತರರಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.