ಮುದ್ದೇಬಿಹಾಳ: ಘೋರತಪಸ್ವಿ ಶ್ರೀ ಶಂಕರಲಿಂಗೇಶ್ವರ ಮಹಾಸ್ವಾಮಿಗಳ 95ನೇ ಜಾತ್ರಾ ಮಹೋತ್ಸವ, ಶ್ರೀ ಸೋಮಲಿಂಗ ಮಹಾಸ್ವಾಮಿಜೀ 19ನೇ ತುಲಾಭಾರ ಹಾಗೂ ‘’ ಪ್ರಶಸ್ತಿ ಪ್ರಧಾನ ಸಮಾರಂಭ ತಾಳಿಕೋಟಿ ತಾಲ್ಲೂಕಿನ ಕೆಸರಟ್ಟಿ ಗ್ರಾಮದಲ್ಲಿ ಮೇ. 27 ಹಾಗೂ 28 ರಂದು ನಡೆಯಲಿದೆ ಎಂದು ಶಂಕರಲಿಂಗ ಗುರುಪೀಠ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಸೋಮಲಿಂಗ ಮಹಾಸ್ವಾಮೀಜಿ ತಿಳಿಸಿದರು.
ಪತ್ರಿಕೆಗೆ ಮಾತನಾಡಿದ ಅವರು, ಮೆ. 27 ರಂದು ಬಾದಾಮಿ ಅಮವಾಸ್ಯೆ ಬೆಳ್ಳಿಗ್ಗೆ 5 ರಿಂದ 7 ರ ವರೆಗೆ ಶಂಕರಲಿಂಗೇಶ್ವರ ಮಹಾಸ್ವಾಮಿ ಗದ್ದುಗೆಗೆ ಅಮೋಘಸಿದ್ದೇಶ್ವರ ಮೂರ್ತಿಯ ಪೂಜಾರತಿ ನಡೆಯುವುದು. ಸಂಜೆ 6 ಗಂಟೆಗೆ ನಾಗೂರ ತಾಂಡಾದ ನಾಮದೇವ ಚವ್ಹಾಣ, ಸಂತೋಷ ಚವ್ಹಾಣ ಕುಟುಂಭಸ್ಥರಿಂದ ಪೂಜ್ಯ ಸೋಮಲಿಂಗ ಮಹಾಸ್ವಾಮಿ 19ನೇ ತುಲಾಭಾರ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಶಂಕರಲಿಂಗ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಸ್ವಾಮೀಜಿ ರಾಜಕೀಯ ಮುಖಂಡರು, ಗಣ್ಯರು ಸೇರಿದಂತೆ ಹಲವಾರು ಪಾಲ್ಗೊಳ್ಳುವರು. ರಾತ್ರಿ 10 ಕ್ಕೆ ಡೊಳ್ಳಿನ ಹಾಡಿಕಿಗಳು ನಡೆಯಲಿದೆ.
ಮೆ.28 ರಂದು ಅಮೃತ ಘಳಿಗೆ 2 ಗಂಟೆಗೆ ಗಂಗಸ್ಥಳ ಪೂಜೆ ಪ್ರಾತಃ, 4.30 ಗಂಟೆಗೆ ಶ್ರೀ ಅಮೋಘಸಿದ್ದೇಶ್ವರ ಹೇಳಿಕೆ. ಬೆ. 7 ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾಧ್ಯ ವೈಭವದೊಂದಿಗೆ ಪಲ್ಲಕ್ಕಿ ಉತ್ಸವ ಜರುಗುವುದು.