ಆ ಪೆನ್ನನ್ನು ಮೊನಚಾದ, ನಿಷ್ಪಕ್ಷಪಾತ ಮತ್ತು ಸತ್ಯನಿಷ್ಠ ಬರವಣಿಗೆಗೆ ಬಳಸಿಕೊಂಡಾಗ ಮಾತ್ರ ಅದರ ಮೌಲ್ಯ ಹೆಚ್ಚುತ್ತದೆ. ನಿಷ್ಪಕ್ಷಪಾತ, ಎಚ್ಚರಿಸುವ ಪತ್ರಿಕೋದ್ಯಮವೇ ಸಮಾಜದ ರಕ್ಷಾಕವಚ – ಡಾ| ಶ್ರೀಗುರು ಚನ್ನವೀರ ಶಿವಾಚಾರ್ಯರು
ನಯನ ಭಾರ್ಗವ ಪಾಕ್ಷಿಕ ಪತ್ರಿಕೆಯ 9ನೇ ವಾರ್ಷಿಕೋತ್ಸವ, 2026ನೇ ಸಾಲಿನ ದಿನದರ್ಶಿಕೆ ಲೋಕಾರ್ಪಣೆ ಹಾಗೂ ವಿವಿಧ ಕ್ಷೇತ್ರದ 16 ಸಾಧಕರಿಗೆ ಪ್ರಶಸ್ತಿ ಪ್ರದಾನ.
ಮುದ್ದೇಬಿಹಾಳ: ಎಲ್ಲರನ್ನೂ ಪ್ರೀತಿಸುವ, ಸಮಾಜವನ್ನು ಎಚ್ಚರಿಸುವ ಹಾಗೂ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವದ ಪತ್ರಕರ್ತರ ಅವಶ್ಯಕತೆ ಇಂದು ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ. ಕೇವಲ ಕೈಯಲ್ಲಿ ಪೆನ್ ಹಿಡಿದರೆ ಮಾತ್ರ ನಿಜವಾದ ಪತ್ರಕರ್ತ ಎನ್ನಿಸಿಕೊಳ್ಳುವುದಿಲ್ಲ. ಆ ಪೆನ್ನನ್ನು ಮೊನಚಾದ, ನಿಷ್ಪಕ್ಷಪಾತ ಮತ್ತು ಸತ್ಯನಿಷ್ಠ ಬರವಣಿಗೆಗೆ ಬಳಸಿಕೊಂಡಾಗ ಮಾತ್ರ ಅದರ ಮೌಲ್ಯ ಹೆಚ್ಚುತ್ತದೆ ಎಂದು ಕುಂಟೋಜಿ ಭಾವೈಕ್ಯತಾ ಮಠದ ಡಾ| ಶ್ರೀಗುರು ಚನ್ನವೀರ ಶಿವಾಚಾರ್ಯರು ಹೇಳಿದರು.
ಅವರು ಇಲ್ಲಿನ ಬೆಂಗಳೂರು ಬೇಕರಿ ಸಭಾಂಗಣದಲ್ಲಿ ಅನಿಲ್ ಕುಮಾರ ತೇಲಂಗಿ, ರವಿಕುಮಾರ ತೇಲಂಗಿ ನೇತೃತ್ವದಲ್ಲಿ ನಡೆದ ನಯನ ಭಾರ್ಗವ ಪಾಕ್ಷಿಕ ಪತ್ರಿಕೆಯ 9ನೇ ವಾರ್ಷಿಕೋತ್ಸವ, 2026ನೇ ಸಾಲಿನ ದಿನದರ್ಶಿಕೆ ಲೋಕಾರ್ಪಣೆ ಹಾಗೂ ವಿವಿಧ ಕ್ಷೇತ್ರದ 16 ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.
ಪ್ರಶಸ್ತಿ ದೊಡ್ಡದಲ್ಲ, ಅದನ್ನು ನಿಭಾಯಿಸುವ ಜವಾಬ್ದಾರಿ ದೊಡ್ಡದು. ಪತ್ರಕರ್ತರು, ಸ್ವಾಮೀಜಿಗಳು ಹಾಗೂ ಸಾಹಿತಿಗಳು ರಾಜಕೀಯ ಪಕ್ಷಗಳಿಗೆ ಸೀಮಿತರಾಗುತ್ತಿರುವ ಸಂಕೀರ್ಣ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪತ್ರಕರ್ತರಲ್ಲಿ ತನಿಖಾ ಮನೋಭಾವ ಹೆಚ್ಚಬೇಕು. ಸರ್ಕಾರ ಮಾಡದ ಕೆಲಸವನ್ನು ಕಾಯಕಜೀವಿ ಮಲ್ಲಪ್ಪಣ್ಣನ ಮಕ್ಕಳಾದ ಮಹೇಶ, ಅನಿಲ್ ಮತ್ತು ರವಿ ತೇಲಂಗಿ ಮಾಡುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ಕಾಂಗ್ರೆಸ್ ಮುಖಂಡ ಹಾಗೂ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ. ಅಸ್ಕಿ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲೂ ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯ ಇರಬೇಕು. ಎಲ್ಲವೂ ತುಟ್ಟಿಯಾಗಿರುವ ಈ ದಿನಗಳಲ್ಲಿ ಪತ್ರಕರ್ತರಿಗೂ ಸರ್ಕಾರದ ಸೌಲಭ್ಯಗಳು ಸಿಗಬೇಕು. ನಿಜವಾದ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಹೆಮ್ಮೆಯ ಸಂಗತಿ. ಅಸ್ಕಿ ಫೌಂಡೇಶನ್ ಇಂತಹ ಕಾರ್ಯಗಳ ಜೊತೆಗಿರುತ್ತದೆ ಎಂದರು.
ಯುವ ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ಮಾಧ್ಯಮವು ಸಮಾಜವನ್ನು ಜೋಡಿಸುವ, ಜಾಗೃತಿ ಮೂಡಿಸುವ ಹಾಗೂ ಪ್ರೇರಣೆ ನೀಡುವ ಶಕ್ತಿಯಾಗಿದೆ. ಮಾಧ್ಯಮದವರು ಸತ್ಯ ಬರೆದರೆ ಸಮಾಜ ಉಳಿಯುತ್ತದೆ, ಕೆಟ್ಟದ್ದು ಬರೆದರೆ ಸಮಾಜ ಹಾಳಾಗುತ್ತದೆ. ಆದ್ದರಿಂದ ಉತ್ತಮ ಪತ್ರಕರ್ತರ ಅಗತ್ಯವಿದೆ ಎಂದರು.
ಐಎನ್‌ಬಿಸಿಡಬ್ಲು ಫೆಡರೇಷನ್ನಿನ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸಂಗೀತಾ ನಾಡಗೌಡರು, ಪ್ರತಿಯೊಂದು ಸಾಧನೆಯ ಹಿಂದೆ ಅಪಾರ ಶ್ರಮವಿದೆ ಎಂದು ಹೇಳಿದರು.
ಬಿ.ಬಿ. ಪಾಟೀಲ ಹಿರೇಮುರಾಳರವರು, ಸಮಾಜದಲ್ಲಿ ನಡೆಯುವ ಘಟನೆಗಳನ್ನು ಯಥಾವತ್ತಾಗಿ ಜನತೆಗೆ ತಿಳಿಸುವುದು ಪತ್ರಕರ್ತರ ಕರ್ತವ್ಯ. ಸರ್ಕಾರ ಜನಪರ ಕಾರ್ಯದಲ್ಲಿ ವಿಫಲವಾದಾಗ ಚಾಟಿ ಬೀಸುವುದು ಪತ್ರಿಕಾರಂಗದ ಜವಾಬ್ದಾರಿಯಾಗಿದೆ ಎಂದರು.
ಮೈಸೂರಿನ ಪತ್ರಕರ್ತ ರುದ್ರಗೌಡ ಮುರಾಳರವರು, ಸೋಶಿಯಲ್ ಮೀಡಿಯಾ ಹಾವಳಿಯಿಂದ ಪತ್ರಿಕೋದ್ಯಮ ದಿಕ್ಕು ದೆಸೆ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಎಂದು ಅಭಿಪ್ರಾಯಪಟ್ಟರು.
ಹಿರಿಯ ನ್ಯಾಯವಾದಿ ಜೆ.ಎ. ಚಿನಿವಾರರವರು, ಬರವಣಿಗೆಯಲ್ಲಿ ಇತಿಹಾಸ ಮತ್ತು ಚರಿತ್ರೆಯನ್ನು ಮಿಶ್ರಗೊಳಿಸಬಾರದು. ಪ್ರಾಮಾಣಿಕತೆ ಇರಬೇಕು, ಬ್ಲ್ಯಾಕ್‌ಮೇಲ್ ಇರಬಾರದು. ಪತ್ರಕರ್ತರು ಸತ್ಯ ಮತ್ತು ಧರ್ಮದ ಪರ ನಿಲ್ಲಬೇಕು ಎಂದು ಹೇಳಿದರು.
ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರರು, ಸಮಾಜಸೇವೆಯ ತುಡಿತ ಹೊಂದಿರುವ ಅನಿಲ್ ಕುಮಾರ ತೇಲಂಗಿ ಹಾಗೂ ಸಹೋದರರಿಗೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾನಿಪ ಸಂಘದ ಅಧ್ಯಕ್ಷ ಡಿ.ಬಿ. ವಡವಡಗಿ ಮಾತನಾಡಿ, ನಿಷ್ಪಕ್ಷಪಾತ ಪತ್ರಕರ್ತನಿಗೆ ಶತ್ರುಗಳು ಹೆಚ್ಚಾದರೂ ಸಾಧನೆಗೆ ಅದು ಪ್ರೇರಣೆಯಾಗುತ್ತದೆ. ನಿಜವಾದ ಸಾಧಕರನ್ನು ಗುರುತಿಸಿ ಗೌರವಿಸಿರುವ ಅನಿಲ್ ಕುಮಾರ ಸಹೋದರರ ಕಾರ್ಯ ಮಾದರಿಯಾಗಿದೆ. ಇಂತಹ ಪ್ರಜ್ಞಾವಂತ ಬರವಣಿಗೆಕಾರರ ಸಂಖ್ಯೆ ಹೆಚ್ಚಬೇಕು ಎಂದು ಹೇಳಿದರು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಖ್ಯಾತ ಗಾಯಕ ವೀರೇಶ ವಾಲಿ, ಗುಂಡ್ಲುಪೇಟೆ ನಕ್ಸಲ್ ನಿಗ್ರಹ ಪಡೆಯ ಪಿಐಸೈ ಭೀಮಶಿ ಎಸ್.ಎಚ್., ರಾಯಚೂರು ಡಿವೈಎಸ್ಪಿ ಶಾಂತವೀರ ಈ ಅವರು ಮಾತನಾಡಿ ನಯನ ಭಾರ್ಗವ ಬಳಗದ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು.
ಲೋಟಗೇರಿಯ ಗುರುಮೂರ್ತಿದೇವರು ಸಾನಿಧ್ಯ ವಹಿಸಿ ಮಾತನಾಡಿದರು. ಅಭ್ಯುದಯ ಪಿಯು ಸೈನ್ಸ್ ಕಾಲೇಜಿನ ನಿರ್ದೇಶಕ ಕಿರಣ್ ಮದರಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಗಣ್ಯರಾದ ಅಫ್ತಾಬ್ ಮನಿಯಾರ, ರವಿ ಕಮತ, ರಾಮಣ್ಣ ಖಾನಾಪೂರ, ಗಣೇಶ ಅನ್ನಗೌನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಯನ ಭಾರ್ಗವ ಪ್ರಶಸ್ತಿ ಗೆ ಭಾಜನರಾದವರು;
ರಾಯಚೂರು ಡಿವೈಎಸ್ಪಿ ಶಾಂತವೀರ ಈ (ಶೌರ್ಯ), ಪಿಎಸೈ ಭೀಮಸಿ ಎಸ್.ಎಚ್. (ಅಪ್ರತಿಮ ಸಾಧಕ), ಸಿದ್ದಪ್ಪ ಮೇಟಿ (ಕಲಿಯುಗದ ಶ್ರವಣಕುಮಾರ), ಬಸವರಾಜ ಲಮಾಣಿ (ಆದರ್ಶ ಶಿಕ್ಷಕ), ಮೋಹನಬಾಬು ಬಿ.ಎಸ್. (ಆದರ್ಶ ಮಾದರಿ ಶಿಕ್ಷಕ), ಡಿ.ಬಿ. ವಡವಡಗಿ, ಅಂಬಾಜಿ ಘೋರ್ಪಡೆ (ಮಾಧ್ಯಮ ರತ್ನ), ಮಹಾಂತೇಶ ನೂಲಿನವರ (ಗ್ರಾಮೀಣ ಮಾಧ್ಯಮ ಸೇವಾರತ್ನ), ವೀರೇಶ ವಾಲಿ (ಗಾನ ಗಾರುಡಿಗ), ಮಹಾಂತೇಶ ಸಿದರೆಡ್ಡಿ (ಶೈಕ್ಷಣಿಕ ಪ್ರಗತಿ ಸೇವಾರತ್ನ), ವಿಠ್ಠಲ ಕಿಲಾರಹಟ್ಟಿ (ಉತ್ತಮ ಶುಶ್ರೂಷಾಧಿಕಾರಿ), ರಾಜಶ್ರೀ ಆಲಗುಂಡಿ (ಅಮೂಲ್ಯ ಜೀವ ರಕ್ಷಕಿ), ಚಂದ್ರಶೇಖರ ಜಾರೆಡ್ಡಿ (ಮಾದರಿ ಕ್ಷೇತ್ರ ಆರೋಗ್ಯಾಧಿಕಾರಿ), ಈಶ್ವರಯ್ಯ ಹಿರೇಮಠ (ಮಾದರಿ ಅರಣ್ಯ ಗಸ್ತು ಪಾಲಕ), ಮಾಜಿ ಸೈನಿಕ ಶಂಕರ ಕಾಮಟೆ (ವೀರಸೈನಿಕ), ರೇಣುಕಾ ಹಡಪದ (ಮಾದರಿ ಅಂಗನವಾಡಿ ಕಾರ್ಯಕರ್ತೆ). ಕಾರ್ಯಕ್ರಮವನ್ನು ಸಿಆರ್ಪಿ ಜಿ.ಎಚ್. ಚವ್ಹಾಣ, ರವಿಕುಮಾರ ತೇಲಂಗಿ, ಅನಿಲ್ ಕುಮಾರ ತೇಲಂಗಿ ಹಾಗೂ ಮಹೇಶ ತೇಲಂಗಿ ನಿರ್ವಹಿಸಿದರು. ಇದಕ್ಕೂ ಮುನ್ನ ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎಲ್ಲ ಕ್ಷೇತ್ರದ ಸಾಧಕರನ್ನು ಗುರುತಿಸುವ ಕಠಿಣ ಕೆಲಸವನ್ನು ಅನಿಲ್ ಕುಮಾರ ಹಾಗೂ ಅವರ ಸಹೋದರರು ಸುಲಭಗೊಳಿಸಿದ್ದಾರೆ. ನಿಜವಾದ ಸಾಧಕರಿಗೆ ಪ್ರಶಸ್ತಿ ಸಂದಿರುವುದು ಶ್ಲಾಘನೀಯ. ಪ್ರಶಸ್ತಿ ಪುರಸ್ಕೃತರು ಪ್ರಶಸ್ತಿಗೆ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳಬೇಕು.”– ಶಾಂತವೀರ ಈ., ಡಿವೈಎಸ್ಪಿ, ರಾಯಚೂರು
“ಜನಪದ ಸಂಸ್ಕೃತಿಯನ್ನು ಹಾಳುಮಾಡುವವರ ವಿರುದ್ಧ ಮಾಧ್ಯಮ ಧ್ವನಿ ಎತ್ತಬೇಕು. ಅಶ್ಲೀಲ ಹಾಡುಗಳ ವಿರುದ್ಧ ಪತ್ರಿಕೆಗಳು ಜವಾಬ್ದಾರಿ ವಹಿಸಬೇಕು. ಹಾಡುವವರಿಗಿಂತ ಕೇಳುವವರ ಜವಾಬ್ದಾರಿ ಹೆಚ್ಚು.”– ವೀರೇಶ ವಾಲಿ, ಖ್ಯಾತ ಗಾಯಕ
ಡ್ರಗ್ಸ್ ಹಾವಳಿ ಹೆಚ್ಚಾಗಿ ಯುವಜನತೆ ಬಲಿಯಾಗುತ್ತಿದೆ. ಕಲುಷಿತ ವಾತಾವರಣ ಸರಿಪಡಿಸಲು ಮಾಧ್ಯಮ ಎಚ್ಚರಿಸುವ ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.” ನೇತಾಜಿ ನಲವಡೆ,
















