ಹತ್ತನೇ ತರಗತಿ ವ್ಯಾಸಂಗ ವಿದಾರ್ಥಿ ಜೀವನದ ಬಹುಮುಖ್ಯ ಘಟ್ಟವಾಗಿದೆ: ರಿಷಿ ಆನಂದ
ವಿಜಯಪುರ : ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳಾದ ರಿಷಿ ಆನಂದ ಅವರು ನಗರದ ಕಾಳಿದಾಸ ಪ್ರೌಢ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಶಾಲೆಯ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ವಿಷಯಗಳ ಕುರಿತು ಬೋಧನೆ ಮಾಡಿದರು.
ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪ್ರತಿ ವಿಷಯಗಳಲ್ಲಿ ಶಿಕ್ಷಕರ ಬೋಧನಾ ಶೈಲಿ, ಬಿಸಿಯೂಟದ ವ್ಯವಸ್ಥೆ ಕುರಿತು ಮಾಹಿತಿ ಪಡೆದುಕೊಂಡರು. ಹತ್ತನೇ ತರಗತಿ ವ್ಯಾಸಂಗ ವಿದಾರ್ಥಿ ಜೀವನದ ಬಹುಮುಖ್ಯ ಘಟ್ಟವಾಗಿದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ಪ್ರತಿ ವಿಷಯ ಶಿಕ್ಷಕರು ಬೊಧಿಸುವ ದೈನಂದಿನ ಪಾಠದಲ್ಲಿ ಉತ್ಸಾಹದಿಂದ ಶ್ರವಣ ಮಾಡಿ ಮನನ ಮಾಡುವ ಮೂಲಕ ವಿಷಯಗಳನ್ನು ಕರಗತ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಶಿಕ್ಷಕರು ನೀಡುವ ವಿಷಯ ಸಂಬAಧಿ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಅಧ್ಯಯನಶೀಲತೆ ರೂಢಿಸಿಕೊಳ್ಳಬೇಕು. ಕಳೆದ ಸಾಲಿನ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿಕೊAಡು, ಅಧ್ಯಯನ ಮಾಡಬೇಕು. ಅರ್ಥವಾಗದ ವಿಷಯಗಳಲ್ಲಿ ಸಂಬAಧಿಸಿದ ವಿಷಯ ಶಿಕ್ಷಕರಿಂದ ಪರಿಹರಿಸಿಕೊಳ್ಳಬೇಕು. ವಿಷಯಗಳ ಜ್ಞಾನ ಹೊಂದಬೇಕು. ಉನ್ನತ ಗುರಿಯೊಂದಿಗೆ ಮುನ್ನಡೆದು ಯಶಸ್ಸು ಸಾಧಿಸಬೇಕು.ಸಾಧನೆ ಸಾಧಕನ ಸೊತ್ತಾಗಿದೆ. ಈ ಹಂತದಲ್ಲಿ ಚೆನ್ನಾಗಿ ಓದಿ, ಉತ್ತಮ ಫಲಿತಾಂಶ ಪಡೆದು, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಮ್ಮನ್ನು ನೀವು ಅಣಿಗೊಳಿಸಿಕೊಳ್ಳಬೇಕು. ಉನ್ನತ ಹುದ್ದೆಗಳನ್ನು ಪಡೆಯುವ ಗುರಿ ಹೊಂದಿ, ಆ ಗುರಿಯಡೆಗೆ ಸಾಗಲು ಸತತ ಪ್ರಯತ್ನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನು ಹೇಳಿದರು.
ಹಾಜರಾತಿ ಪರಿಶೀಲಿಸಿದ ಅವರು, ಶಿಕ್ಷಕ ಸಿಬ್ಬಂದಿ ಸಮಯಪಾಲನೆಗೆ ಒತ್ತು ನೀಡಬೇಕು. ಸಮರ್ಪಕ ಹಾಜರಾತಿ ನಿರ್ವಹಣೆ ಮಾಡಬೇಕು.ವಿದ್ಯಾಥಿಗಳು ಶಾಲೆಯಿಂದ ಹೊರಗುಳಿಯದಂತೆ ನಿಗಾವಹಿಸಬೇಕು. ಮಕ್ಕಳು ಗೈರಾಗದಂತೆ ನೋಡಿಕೊಳ್ಳಲು ಅವರ ಪೋಷಕರಿಗೆ ತಿಳಿಹೇಳಬೆಕು. ಶಾಲೆಯಲ್ಲಿ ಸ್ವಚ್ಛತೆ ಕುರಿತು ಗಮ£ ಹರಿಸಬೇಕು. ಪ್ರತಿನಿತ್ಯ ಶಾಲೆಯ ಎಲ್ಲಾ ಕೊಠಡಿಗಳು, ಒಳಾಂಗಣ ಹಾಗೂ ಹೊರಾಂಗಣ ಆವರಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಬಿಸಿಯೂಟದ ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕುಡಿಯುವ ನೀರು, ಶೌಚಾಲಯ, ಗಾಳಿ, ಬೆಳಕು ವ್ಯವಸ್ಥೆಗಳನ್ನು ಇರುವಂತೆ ನೋಡಿಕೊಳ್ಳಬೇಕು.
ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಳಕ್ಕೆ ಈಗಿನಿಂದಲೇ ಯೋಜನಾಬದ್ಧ ಕಾರ್ಯಸೂಚಿ ಹಾಕಿಕೊಂಡು ನಿರ್ವಹಿಸಿ, ಈ ಕುರಿತು ಶಾಲಾ ಮುಖ್ಯ ಶಿಕ್ಷಕರು ಹಾಗೂ ಎಲ್ಲ ವಿಷಯಗಳ ಬೋಧಕರು ವಿಶೇಷ ಗಮನಹರಿಸಿ ಕಾರ್ಯ ನಿರ್ವಹಿಸಬೇಕು. ಆಗಾಗ್ಗೆ ಆಂತರಿಕ ಪರೀಕ್ಷೆಗಳನ್ನು ಏರ್ಪಡಿಸಿ, ಪ್ರತಿಶತ ಫಲಿತಾಂಶಕ್ಕೆ ಶ್ರಮಿಸಿಬೇಕು ಎಂದು ಶಾಲಾ ಮುಖ್ಯ ಶಿಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಎಸ್. ಪಿ. ಬಿರಾದಾರ, ಶಿಕ್ಷಕರಾದ ಎಸ್. ಎಮ್ ಬೋಸ್ಲೆ, ಎಸ್. ಪಿ. ಭಜಂತ್ರಿ ಸೇರಿದಂತೆ ಬೊಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.