ನಮ್ಮ ದೇಶದಲ್ಲಿ ದೇವಸ್ಥಾನ, ಮಠ, ಮಂದಿರಗಳು ಸಂಸ್ಕಾರ ನೀಡುವ ಕೇಂದ್ರಗಳಾಗಿವೆ : ಷ.ಭ್ರ ಅಭಿನವ ಮುರಘೇಂದ್ರ
ಇಂಡಿ : ನಮ್ಮ ದೇಶದಲ್ಲಿ ದೇವಸ್ಥಾನ, ಮಠ, ಮಂದಿರಗಳು ಸಂಸ್ಕಾರ ನೀಡುವ ಕೇಂದ್ರಗಳಾಗಿವೆ. ಆದರೆ ದೇವಸ್ಥಾನದಲ್ಲಿ ಜಾತಿ ಮತ್ತು ರಾಜಕಾರಣ ಎರಡು ವಿಚಾರಗಳನ್ನು ತರಬಾರದು. ನಮ್ಮ ಪಾದರಕ್ಷೆ ಮನೆಯಿಂದ ಹೇಗೆ ಹೊರಗಡೆ ಬಿಡುತ್ತಿಯೋ..! ಹಾಗೇ ಜಾತಿ ಮತ್ತು ರಾಜಕಾರಣ ದೇವಸ್ಥಾನದಿಂದ ದೂರ ಬಿಟ್ಟು ಬರಬೇಕು ಎಂದು ಶಿರಶ್ಯಾಡ ಮಠದ ಷ.ಭ್ರ ಅಭಿನವ ಮುರಘೇಂದ್ರ ಶಿವಾಚಾರ್ಯರರು ತಿಳಿಸಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಬೆಳ್ಳಿ ಹಳ್ಳದ ವಸ್ತಿ ಹತ್ತೀರ ಇರುವ ಶ್ರೀ ಹಾದಿ ಜಟ್ಟಿಂಗೇಶ್ವರ 37 ನೇ ಜಾತ್ರಾ ಮಹೋತ್ಸವದಲ್ಲಿ ಕಲ್ಯಾಣ ಮಂಟಪಕ್ಕೆ ಭೂಮಿ ಪೂಜೆ ನೆರೆವರಿಸಿ ಮಾತನಾಡಿದರು.
ಇವತ್ತು ಮುಬೈಲ್ ಸೆಟ್ , ಟಿವಿ ಸೆಟ್ ನಿಂದ ಜನರ ಮೈಂಡ್ ಆಫಸೆಟ್ ಆಗುತ್ತಿದೆ. ಗ್ರಾಮೀಣ ಸೋಗಡು ಕೆಟ್ಟ ಹಾಳಾಗುತ್ತಿದೆ. ಇದು ಆತಂಕಕಾರಿಯ ಬೆಳವಣಿಗೆ. ಆದರೆ ಇಂತಹ ಜಾತ್ರ ಮಹೋತ್ಸವ ಮತ್ತೆ ಮತ್ತೇ ನಮ್ಮ ಗ್ರಾಮೀಣ ಸೋಗಡು ಹೆಚ್ಚಿಗೆ ಮಾಡುತ್ತಿವೆ. ಹಾಗಾಗಿ ಹಳ್ಳಿಗಳಲ್ಲಿ ಇಂತಹ ಸಂಸ್ಕಾರ ಮತ್ತು ಮಾನವೀಯ ಮೌಲ್ಯವನ್ನು ಹೆಚ್ಚಿಸುವ ಕಾರ್ಯಕ್ರಮ ನಡೆಯಬೇಕು.
ಸಂಸ್ಕಾರ ಎಲ್ಲಿಯೂ ಮಾರಾಟಕ್ಕೆ ಸಿಗುವುದಿಲ್ಲ, ಧರ್ಮ ಸಮಾರಂಭಗಳಲ್ಲಿ, ದೇವಸ್ಥಾನಗಳಲ್ಲಿ ಅದು ಲಭಿಸುತ್ತದೆ. ಆಧುನಿಕತೆಯ ಪರಿಣಾಮವಾಗಿ ಇಂದಿನ ದಿನಗಳಲ್ಲಿ ಹಿಂದಿನ ಕಾಲದ ಸಂಸ್ಕಾರ ಮರೆಯಾಗುತ್ತಿದೆ. ಆದ್ದರಿಂದ ತಾಯಂದಿರು ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ನಾಡಿನ ಸತ್ಪ್ರಜೆಗಳನ್ನಾಗಿ ರೂಪಿಸಬೇಕು.
ಮನುಷ್ಯ ಜನ್ಮ ತಾಳಿದ ಮೇಲೆ ತಂದೆ-ತಾಯಿ, ಭೂಮಿ, ಸಮಾಜ, ದೇಶ, ಗುರು, ದೇವರ ಋುಣ ಇರುತ್ತದೆ. ತಂದೆ-ತಾಯಿಗಳನ್ನು ಗೌರವದಿಂದ ಕಂಡಾಗ, ಸಮಾಜದ ಶ್ರೇಯಸ್ಸಿಗೆ ದುಡಿದಾಗ, ದೇಶದ ಬಗ್ಗೆ ಅಭಿಮಾನ ಹೊಂದಿದಾಗ, ಗುರುಗಳನ್ನು ಪೂಜ್ಯ ಭಾವನೆಯಿಂದ ನೋಡಿದಾಗ, ದೇವರಲ್ಲಿ ಭಕ್ತಿಯನ್ನು ಸಮರ್ಪಿಸಿದಾಗ ಈ ಎಲ್ಲ ಋುಣಗಳನ್ನು ತೀರಿಸಲು ಸಾಧ್ಯವಾಗುತ್ತದೆ. ಸ್ವಾಮಿಗಳು ಭಕ್ತರಿಗೆ ವಿದ್ಯೆ, ಬುದ್ಧಿ, ಆಚಾರ, ವಿಚಾರಗಳನ್ನು ತಿಳಿಸಿಕೊಡುತ್ತಾರೆ. ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವರನ್ನು ಪ್ರೋತ್ಸಾಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸೋಮವ್ವ ಹೊಸಮನಿ, ಬಾಬುರಾಯ ಪಾಟೀಲ, ಪರಶುರಾಮ ಹತ್ತರಕಿ, ಶಿವಯೋಗೆಪ್ಪ ಚನಗೊಂಡ, ತಮ್ಮಣ್ಣ ಪೂಜಾರಿ, ನರಸಪ್ಪ ಪೂಜಾರಿ, ಮಾಳಪ್ಪ ನಿಂಬಾಳ, ಜಟ್ಟಪ್ಪ ಎನ್ ಮರಡಿ, ಭೀಮರಾಯ ಉಪ್ಪಾರ, ರಾಮಣ್ಣ ಯಂಕಂಚಿ, ಸುರೇಶ ಉಪ್ಪಾರ, ಸುರೇಶ ಕರಂಡೆ, ಚಂದ್ರಕಾಂತ ಬಗಲಿ, ಜಟ್ಟಪ್ಪ ಸಾಲೋಟಗಿ, ಅಂಬವ್ವ ಕೋಟಗೊಂಡ, ಭೀಮರಾಯ ಜೇವೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.