ಇಂಡಿ : ಅರಿವೆ ಗುರು, ಗುರುವೇ ದೈವ. ಈ ಪ್ರಪಂಚದಲ್ಲಿ ಅನೇಕ ಬದಲಾವಣೆ, ಆವಿಷ್ಕಾರಗಳು ಮತ್ತು ಸಾಹಸ, ಸಾಧನೆಗಳನ್ನು ಕಾಣುತ್ತವೆ. ಅದಕ್ಕೆ ಮೂಲ ಕಾರಣ ಶಿಕ್ಷಕ. ಇಂದು ಅತ್ಯಂತ ಗೌರವ ಸ್ಥಾನದಲ್ಲಿ ಗುರುವನ್ನು ಕಾಣುತ್ತವೆ. ಜೊತೆಗೆ ಈ ಭಾಗ ಕಟ್ಟಿ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ವಿಧಾನ ಸಭೆ ಅಂದಾಜು ಸಮಿತಿಯ ಅಧ್ಯಕ್ಷರು ಹಾಗೂ ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಮಂಗಳವಾರ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣ ಕಾರ್ಯಾಲಯದ ಗುರುಭ – ವನದಲ್ಲಿ ಆಯೋಜಿಸಿರುವ ಭಾರತರತ್ನ ಡಾ. ಎಸ್. ರಾಧಾಕೃಷ್ಣನ್ ಅವರ ಜನ್ಮ ದಿನೋತ್ಸವದ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಸಮಾಂಭದ ಅಧ್ಯಕ್ಷತೆ ವಹಿಸಿ ಉದ್ಘಾಟನೆ ನೆರೆವರಿಸಿ ಮಾತಾನಾಡಿದರು. ಈ ಸಮಾಜದ ಬದಲಾವಣೆಗೆ ಶಿಕ್ಷಣ ಅತೀ ಮುಖ್ಯ. ಆದರೆ ರಾಜ್ಯ ಶಿಕ್ಷಣ ನೀತಿ ಅಥವಾ ರಾಷ್ಟ್ರೀಯ ಶಿಕ್ಷಣ ನೀತಿ ಎನ್ನುವ ಭಿನ್ನವನ್ನು ಬಿಟ್ಟು, ನಮ್ಮ ಸರ್ವತೋಮುಖ ನೀತಿಯ ಅಡಿಯಲ್ಲಿ ಶಿಕ್ಷಣ ನೀತಿಯ ಪಾಠವನ್ನು ಹೇಳಬೇಕು.
ಅತೀ ಕ್ರೂರ ಬಡತನದ ಮಕ್ಕಳು ಸರಕಾರಿ ಶಾಲೆಗೆ ಸೇರುತ್ತಾರೆ. ಅವರ ಸೇವೆ ಮಾಡಲು ಒಳ್ಳೆಯ ಅವಕಾಶ ಸಿಕ್ಕಿದೆ. ಆದರೆ ಈ ತಾಲ್ಲೂಕಿನಲ್ಲಿ ಹೊಸದೊಂದು ಶೈಕ್ಷಣಿಕ ಬಿರುಗಾಳಿ ತರುವ ಬಗ್ಗೆ ಮಾತಾಡಿದ್ದು, ಅತೀ ಸೂಕ್ಷ್ಮವಾಗಿ ಗಮನಿಸುವೆ. ಮಾತುಗಳು ಕೃತಿಯ ರೂಪದಲ್ಲಿ ಬರಬೇಕು. ಇನ್ನೂ ಇಸ್ರೋ ವಿಜ್ಞಾನಿಗಳು ಬಹಳ ದೊಡ್ಡ ಸಾಧನೆ ಮಾಡಿದ್ದು, ಭವಿಷ್ಯದಲ್ಲಿ ನಮ್ಮ ಮಕ್ಕಳು ಆ ಸಾಧನೆ ಮಾಡುವಂತಾಗಲಿ ಎಂದು ಹೇಳಿದರು. ಒಬ್ಬ ಶಿಕ್ಷಕ ದೇಶದ ಅತ್ಯಂತ ದೊಡ್ಡ ಶ್ರೇಷ್ಠ ಸ್ಥಾನವಹಿಸಿಕೊಂಡಿದ್ದು, ಅದು ಒಬ್ಬ ಆದರ್ಶ ಶಿಕ್ಷಕ ಡಾ.ರಾಧಾಕೃಷ್ಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಶೇಷ ಆಹ್ವಾನಿತ ಉಪವಿಭಾಗದ ನೂತನ ಅಧಿಕಾರಿ ಆಬೀದ್ ಮಾತಾನಾಡಿ ಅವರು, ಶಿಕ್ಷಕರು ರಾಷ್ಟ್ರ ರಕ್ಷಕರಾಗಬೇಕು. ಇದಕ್ಕಾಗಿಯೇ ಶಿಕ್ಷಕರನ್ನು ಗುರು ಎಂದು ಕರೆಯುವುದು. ಭವ್ಯ ರಾಷ್ಟ್ರ ನಿರ್ಮಾಣ ಗುರುವಿನ ಕೈಯಲ್ಲಿದೆ.ಇಂಜಿನಿಯರ್ ತಪ್ಪು ಮಾಡಿದರೆ ಒಂದು ಬಿಲ್ಡಿಂಗ್ ನೆಲಕ್ಕುರಳಬಹುದು. ಒಬ್ಬ ವೈದ್ಯ ತಪ್ಪುಮಾಡಿದರೆ ಒಂದು ಅಥವಾ ಕೆಲವು ಜೀವಹೋಗಬಹುದು. ಆದರೆ ಶಿಕ್ಷಕ ಒಂದೇ ಒಂದು ತಪ್ಪು ಮಾಡಿದರೆ ಇಡೀ ದೇಶವೇ ವಿನಾಶದತ್ತ ಸಾಗುತ್ತದೆ. ಅದಕ್ಕಾಗಿಯೇ ಸಮಾಜ ಗುರುವನ್ನು ದೇವತೆಯ ಸ್ಥಾನದಲ್ಲಿ ಕಾಣುತ್ತದೆ. ಶಿಕ್ಷಕರೆಲ್ಲರೂ ಗುರುಗಳಾಗಿ ಸೇವೆ ಸಲ್ಲಿಸಿದರೆ, ಸಮೃದ್ಧ ಭಾರತ ನಿರ್ಮಾಣವಾಗುತ್ತದೆ. ಎಲ್ಲಾ ಶಿಕ್ಷಕರು ಗುರುಗಳಾಗಿ ಸಮಾಜ ಸೇವೆ ಮಾಡುವ ಮೂಲಕ ಭವ್ಯ ಭಾರತ ನಿರ್ಮಾಪಕರಾಗಲಿ ಎಂಬ ಕನಸು ನಮ್ಮದು. ನಮ್ಮ ಕನಸು ನನಸು ಮಾಡುವತ್ತ ಶಿಕ್ಷಕರು ಸಂಕಲ್ಪ ಮಾಡಬೇಕು.
ದಿವ್ಯ ಸಾನಿಧ್ಯ ವಹಿಸಿರುವ ಯರನಾಳ ಸಂಸ್ಥಾನ ವಿರಕ್ತಮಠದ ಗುರು ಸಂಗನಬಸವ ಮಹಾಸ್ವಾಮಿಗಳು ಆರ್ಶೀವಚನ ನೀಡಿ ಮಾತಾನಾಡಿದ ಅವರು, ಕಾಯ ಮಾಯಾವಾಗಲಿ ಆದರೆ ಕಾಯಕ ಇತಿಹಾಸ ಪುಟದಲ್ಲಿ ಕಾಣುವಂತಾಗಬೇಕು. ಎಷ್ಟೋ ಶ್ರೇಷ್ಠ ವ್ಯಕ್ತಿಗಳನ್ನು ಜಗತ್ತು ಬಿಟ್ಟು ಹೋಗಿದ್ದಾರೆ. ಆದರೆ ಅವರು ಮಾಡಿರುವ ಕಾಯಕ ಇತಿಹಾಸ ಪುಟದಲ್ಲಿ ಎಲ್ಲರೂ ಓದುತ್ತೀರಿ ಮತ್ತು ಸ್ಮರಿಸಿಕೊಳ್ಳುತ್ತೆವೆ. ಆದರೆ ಆ ಹಿನ್ನೆಲೆಯಲ್ಲಿ ಶಿಕ್ಷಕರ ವೃತ್ತಿಯಲ್ಲಿ ಇರುವರು ನೀವು ನಿಮ್ಮ ಭೋದನೆಯಲ್ಲಿ ಸಮಾಜದಲ್ಲಿರುವ ಮೌಡ್ಯತೆಯನ್ನು ದೂರು ಮಾಡಬೇಕು. ಒಬ್ಬ ಶಿಕ್ಷಕ ಇಡೀ ಸಮಾಜವನ್ನು ಪರಿವರ್ತನೆ ಮಾಡಲು ಸಾಧ್ಯವಿದೆ ಎಂದು ಹೇಳಿದರು. ಸಮಾಜ ಒಡೆದು ಹೋಗುತ್ತಿದೆ. ಭೂಮಿ ಅಕಾಶ ಹತ್ತೀರವಾಗುತ್ತಿದೆ. ಆದರೆ ಮನುಷ್ಯ ಮನುಷ್ಯನ ಅಂತರ ಹೆಚ್ಚುತ್ತಿದೆ. ದಿಕ್ಕು ಬದಲಿಸುವ ಅವಶ್ಯಕತೆ ಇಲ್ಲ. ವಿಚಾರ ಬದಲಿಸಿದ್ರೆ ಬದುಕು ಬದಲಾಗುತ್ತೆದೆ ಎಂದು ಹೇಳಿದರು.
ಇನ್ನೂ ಪ್ರಾಸ್ತಾವಿಕವಾಗಿ ಮಾತಾನಾಡಿದ ಕ್ಷೇತ್ರ ಶಿಕ್ಷಣ ಅಧಿಕಾರಿ ಟಿ ಎಸ್ ಆಲಗೂರ ಜಗತ್ತಿನ ಕತ್ತಲೆ ಕಳೆಯಲು ಸೂರ್ಯಬೇಕು. ಪಿಂಡಾಂಡದ ಕತ್ತಲೆ ಕಳೆಯಲು ಶಿಕ್ಷಕ ಬೇಕು. ತಾಲೂಕಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವ ಮೂಲಕ ಶೈಕ್ಷಣಿಕ ಬಿರುಗಾಳಿ ಬಿಸೊಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಬಿ.ಎಸ್ ಕಡಕಭಾವಿ, ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ, ತಾಲೂಕು ಸರಕಾರ ನೌಕರ ಸಂಘದ ಅಧ್ಯಕ್ಷ ಎಸ್ ಡಿ ಪಾಟೀಲ, ದೈ.ಶಿ ಅಧಿಕಾರಿ ಎ.ಎಸ್ ಲಾಳಸೇರಿ, ಕ್ಷೇತ್ರ ಸಮಯನ್ವ ಅಧಿಕಾರಿ ಎಸ್ ಆರ್ ನಡುಗಡ್ಡಿ, ಎಂ.ಬಿ.ಡೆಂಬ್ರೆ, ಎಂ ಎಚ್ ಯರಗುದ್ರಿ, ಎಸ್ ವ್ಹಿ ಹರಳಯ್ಯ, ಎ.ಓ ಹೂಗಾರ, ಎನ್ ಎಮ್ ಕಾಳೆ, ಎಸ್ ಆರ್ ಪಾಟೀಲ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಜಾವೀದ ಮೋಮಿನ್, ಶಿವಯೋಗೆಪ್ಪ ಚನಗೊಂಡ ಇನ್ನೂ ಅನೇಕರು ಉಪಸ್ಥಿತರಿದ್ದರು.