ಶಿಕ್ಷಕ ಜೀವನ ರೂಪಿಸುವ ಶಿಲ್ಪಿ ; ನ್ಯಾಯವಾದಿ ಎಸ್ ಬಿ ಕಂಬೋಗಿ..
ಇಂಡಿ : ಗುರು ಎಂದರೆ ಜ್ಞಾನ, ಗುರು ಎಂದರೆ ಬೆಳಕು, ಗುರು ಎಂದರೆ ಜೀವನ ರೂಪಿಸುವ ಶಿಲ್ಪಿ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ನ್ಯಾಯವಾದಿ ಎಸ್ ಬಿ ಕೆಂಬೋಗಿ ಮಂಗಳವಾರ ಹೇಳಿದರು.
ಪಟ್ಟಣದ ಪ್ರತಿಷ್ಠಿತ ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಆಂಗ್ಲ ಮಾದ್ಯಮ ಎಕ್ಸಲೆಂಟ್ ಕಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಭಾರತ ರತ್ನ ಡಾ.ರಾಧಾಕೃಷ್ಣನ್ ಅವರ ಜನ್ಮ ದಿನದ ಪ್ರಯುಕ್ತ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.
ಶಿಕ್ಷಕರು ರಾಷ್ಟ್ರ ರಕ್ಷಕರಾಗಬೇಕು. ಇದಕ್ಕಾಗಿಯೇ ಶಿಕ್ಷಕರನ್ನು ಗುರು ಎಂದು ಕರೆಯುವುದು. ಭವ್ಯ ರಾಷ್ಟ್ರ ನಿರ್ಮಾಣ ಗುರುವಿನ ಕೈಯಲ್ಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಪ್ಯಾರಾಮೆಡಿಕಲ್ ಪ್ರಾಚಾರ್ಯ ಸೌಮ್ಯ ರೂಗಿ, ಪ್ರಾಥಮಿಕ ಶಾಲಾ ಮುಖ್ಯ ಗುರು ಶ್ರೀಶೈಲ್ ಹೂಗಾರ, ಶಶೀಧರ್ ವಾಲಿ, ಮಹಾಂತೇಶ ಪಾಟೀಲ, ಪುಷ್ಪಾ ಪೊದ್ದಾರ,
ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರು ಶೃತಿ ವಾಲಿಕಾರ, ಅಲ್ಮಾಸ್ ಬೇನೂರ, ಶೋಭಾ ಸಾರವಾಡ, ಶೊಭಾ ಬಡಿಗೇರ, ನುಸ್ರತ್ ಹವಾಲ್ದಾರ್, ಶ್ವೇತಾ ಮಲ್ನಾಡಿ, ಶ್ವೇತಾ ದೊತ್ರೆ, ಶಿಲ್ಪಾ ಕೋಲಾರ, ಪೂಜಾ ನಿವರಗಿ, ರೂಪಾ ಸಿಂಗೆ, ಚಂದ್ರಕಲಾ, ರೂಪಾ ಬಿರಾದಾರ ಪ್ಯಾರಾ ಮೆಡಿಕಲ್ ಹಾಗೂ ಪ್ರಾಥಮಿಕ ಶಾಲಾ ವಿಧ್ಯಾರ್ಥಿಗಳು ಭಾಗಿಯಾಗಿದ್ದರು.