ಶಾಲೆ ಮಕ್ಕಳಿಗೆ ಥಳಿಸಿದ್ದ ಶಿಕ್ಷಕಿ ಅಮಾನತು..!
ಹುಬ್ಬಳ್ಳಿ: ಕಲಘಟಗಿ ತಾಲ್ಲೂಕಿನ ಜುಂಜನ ಬೈಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಥಳಿಸಿದ್ದ ಶಿಕ್ಷಕಿ ಸುಜಾತ ಸುಣಗಾರ ಅವರನ್ನು ಫೆ.23 ರಂದು ಶಿಕ್ಷಣ ಇಲಾಖೆ ಅಮಾನತು ಮಾಡಿ ಆದೇಶ ಹೊರಡಿಸಿದೆ ಎಂದು ಬಿಇಒ ಉಮಾದೇವಿ ಬಸಾಪುರ ತಿಳಿಸಿದ್ದಾರೆ. ಫೆ.19 ರಂದು ಶಾಲೆ ಮಕ್ಕಳು ಮಧ್ಯಾಹ್ನದ ಬಿಸಿ ಊಟ ತಮಗೆ ತಂದು ಕೊಡದಿದ್ದಕ್ಕೆ ಮಕ್ಕಳಿಗೆ ಮನಸೋ ಇಚ್ಛೆ ಬಾಸುಂಡೆ ಮೂಡುವ ಹಾಗೆ ಥಳಿಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಶಿಕ್ಷಕಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಫೆ.20 ರಂದು ಊಟ ತಂದು ಕೊಡದಿದ್ದಕ್ಕೆ ಮಕ್ಕಳಿಗೆ ಥಳಿತ ಕುರಿತು ವರದಿಯಾಗಿತ್ತು.