ಕುಡಿಯುವ ನೀರಿನ ಬಗ್ಗೆ ಎಚ್ಚರಿಕೆವಿರಲಿ..! ನೋಡಲ್ ಅಧಿಕಾರಿಗಳ ವಿರುದ್ಧ ಗರಂ; ಎಸಿ ಆಬೀದ್ ಗದ್ಯಾಳ
ಇಂಡಿ : ಮುಂಗಾರು, ಹಿಂಗಾರು ಎರಡು ಮಳೆ ಬಾರದೆ ಇರುವುದರಿಂದ ಸರಕಾರ ಬರಗಾಲ ಘೋಷಿಸಿದೆ. ಆದರೆ ಇದು ಬರೀ ಬರಗಾಲವಲ್ಲ, ಬೀಕರ ಬರಗಾಲವಾಗಿದ್ದ – ರಿಂದ ಮುನ್ನೆಚ್ಚರಿಕೆವಾಗಿ ತಾಲ್ಲೂಕಿನ ಯಾವುದೇ ಗ್ರಾಮಗಳಿಗೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಕಂದಾಯ ಉಪವಿಭಾಗ ಅಧಿಕಾರಿ ಆಬೀದ್ ಗದ್ಯಾಳ ಹೇಳಿದರು.
ಬುಧವಾರ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಏರ್ಪಡಿಸಿರುವ ಕುಡಿಯುವ ನೀರಿನ ಮುಂಜಾಗ್ರತಾ ಕ್ರಮವಾಗಿ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.
ಈಗಾಗಲೇ ಗ್ರೌಂಡ್ ಲೆವಲಲ್ಲಿ ಕೆಲಸವಾಗುತ್ತಿಲ್ಲೆಂದು ಶಾಸಕ ಯಶವಂತರಾಯಗೌಡ ಪಾಟೀಲ್ & ಜಿಲ್ಲಾ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದು, ಈ ಕೂಡಲೇ ಕುಡಿಯುವ ನೀರಿನ ಬಗ್ಗೆ ಚುರುಕು ಕೆಲಸ ಕಾರ್ಯ ಕೈಗೊಳ್ಳಲು ಜಿಲ್ಲಾ ಅಧಿಕಾರಿಗಳು ಸೂಚಿಸಿದ್ದಾರೆ.
ಇನ್ನೂ ಸೆ- 9 ರಂದು ತಾಲೂಕು ಮಟ್ಟದ ಅಧಿಕಾರಿಗಳನ್ನು ಪಂಚಾಯತ್ ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಿ ಆದೇಶಿಸಿಲಾಗಿದೆ. ಆದರೆ ಇಲ್ಲಿಯವರೆಗೆ ಯಾರೊಬ್ಬರೂ ಪಂಚಾಯತ್ ಗೆ ತೆರಳಿ ಮುಂಜಾಗ್ರತಾವಾಗಿ ಸಭೆ ನಡೆಸಿ ಸಮಸ್ಯೆ ಕಂಡುಕೊಳ್ಳುವ ಮತ್ತು ಪರಿಹಾರ ಮಾರ್ಗಗಳ ಬಗ್ಗೆ ಕಾಳಜಿವಹಿಸಿಲ್ಲ ಎಂದು ಉಪವಿಭಾಗ ಅಧಿಕಾರಿ ಆಭಿದ್ ಗದ್ಯಾಳ ಗರಂ ಆದರು. ಇನ್ನೂ ಮುಂದೆ ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ಅತೀ ತುರ್ತು ಸಭೆ ನಡೆಸಿ ಅಲ್ಲಿರುವ ಸಮಸ್ಯೆ ಮತ್ತು ಪರಿಹಾರದ ಮಾರ್ಗಗಳ ಬಗ್ಗೆ ತಾಲೂಕು ಆಡಳಿತಕ್ಕೆ ಅತೀ ಶೀಘ್ರವಾಗಿ ಮಾಹಿತಿ ತಲುಪಿಸಲು ಸೂಚಿಸಿದರು.
ಅದಲ್ಲದೇ ಕಾಲುವೆ ಮೂಲಕ ಟೆಲ್ ಎಂಡ್ ವರೆಗೆ ನೀರು ತಲುಪಿಸುವ, ಕೆರೆ ತುಂಬುವ ಮತ್ತು ಪೋಲಾಗದಂತೆ ರಕ್ಷಿಸುವ ಕ್ರಮವಹಿಸಿ, ಕುಡಿಯುವ ನೀರಿನ ಬಗ್ಗೆ ಸೂಕ್ತ ಜಾಗೃತಿ ವಹಿಸಬೇಕು. ಇನ್ನೂ ತಾಲ್ಲೂಕಿನ ಯಾವ ಗ್ರಾಮದಲ್ಲೂ ಕುಡಿಯುವ ನೀರನ ಸಮಸ್ಯೆ – ಯಾಗಬಾರದು, ಈಗಾಗಲೇ ಚವಡಿಹಾಳ ಮತ್ತು ಬಬಲೇಶ್ವರ ಅಂತಹ ಗ್ರಾಮದಿಂದ ಟ್ಯಾಂಕರ್ ಬೇಡಿಕೆ ಇದೆ ಎಂಬ ವಿಚಾರ ಕೇಳಿ ಬರುತ್ತಿದೆ. ಹಾಗಾಗಿ ಪ್ರತಿ ಗ್ರಾಮ ಪಂಚಾಯತ್ ನೋಡಲ್ ಅಧಿಕಾರಿಗಳು ತಮ್ಮ ತಂಡದ ಜೊತೆ ಸೇರಿಕೊಂಡು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಆಲಿಸಿ ಮತ್ತು ಆ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಪರಿಹಾರ ಮಾರ್ಗಗಳನ್ನು ಕಾಣಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಯಾವ ಕೆರೆಯಲ್ಲಿ ಎಷ್ಟು ನೀರಿನ ಪ್ರಮಾಣವಿದೆ ಎಂದು ತಿಳಿದುಕೊಂಡರು. ಹಂಜಗಿ ಕೆರೆಯಲ್ಲಿ 30%, ಲೋಣಿ ಕೆಡಿ ಕೆರೆಯಲ್ಲಿ 50%, ಅರ್ಜನಾಳ ಕೆರೆಯಲ್ಲಿ 35%, ತಡವಲಗಾ ಕೆರೆಯಲ್ಲಿ 10% ನೀರು ಇದ್ದ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿ ಎಇಇ ಎಸ್ ಆರ್ ರುದ್ರವಾಡಿ ಅವರು ಹೇಳಿದರು. ಒಟ್ಟಾರೆಯಾಗಿ ಹಂಜಗಿ ಕೆರೆ ಮೇಲೆ ಅತೀ ಹೆಚ್ಚು ಜವಾಬ್ದಾರಿ ನೀರು ತುಂಬಿಸಿದ್ರೆ ಸುಮಾರು 27 ಗ್ರಾಮಕ್ಕೆ ನೀರಿನ ಸಮಸ್ಯೆ ತಪ್ಪುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಬಿ.ಎಸ್ ಕಡಕಭಾವಿ, ಕೆಬಿಜೆಎನ್ಎಲ್ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ, ಹೆಸ್ಕಾಂ ಇಲಾಖೆ ಅಧಿಕಾರಿ ಎ.ಎಸ್ ಬಿರಾದಾರ, ಕೆಬಿಜೆನ್ಎಲ್ ವಿಜಯಕುಮಾರ್, ತಾ.ಪಂ ಇಒ ಬಾಬು ರಾಠೋಡ, ಸಿಪಿಐ ಎಮ್ ಎಮ್ ಡಪ್ಪಿನ, ಮಹಾದೇವಪ್ಪ ಏವೂರ, ಎಚ್.ಎಸ್. ಪಾಟೀಲ, ಬಿ.ಜೆ. ಇಂಡಿ, ಮಾಹಾಂತೇಶ ಹಂಗರಗಿ, ದಯಾನಂದ ಹಿರೇಮಠ, ಸಂತೋಷ ಮೇಡೆದಾರ, ಸಿದ್ದರಾಮ ಮುಜಗೊಂಡ, ಎಚ್.ಎಸ್. ಗುನ್ನಾಪೂರ, ಸಿದ್ದು ಅವಜಿ, ಸಂತೋಷ ಬನಗೊಂಡೆ ಸೇರಿದಂತೆ ಕೆಬಿಜೆಎನ್‍ಎಲ್
ಅಧಿಕಾರಿಗಳು ಗ್ರಾಪಂ ಅಭಿವೃಧಿ ಅಧಿಕಾರಿಗಳು ಹಾಗೂ
ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.