ಮುದ್ದೇಬಿಹಾಳ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಜೊತೆಗೆ ಶಿಕ್ಷಣ, ಆರೋಗ್ಯ ಸುಧಾರಣೆಗೆ ವಿಶೇಷ ಯೋಜನೆಗಳನ್ನು ರೂಪಿಸುವ ಮೂಲಕ ಉತ್ತಮ ಜನಪರ ಆಡಳಿತ ನೀಡುತ್ತಿದೆ ಎಂದು ಕೆಎಸ್ ಡಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್ .ನಾಡಗೌಡ(ಆಪ್ಪಾಜಿ) ಹೇಳಿದರು.
ಇಲ್ಲಿನ ಹಡಲಗೇರಿ ರಸ್ತೆ ಹತ್ತಿರ ಬರುವ ತಾಲೂಕು ಆಸತ್ರೆ ನವೀಕರಣ ಹಾಗೂ ದುರಸ್ತಿ ಕಾಮಗಾರಿಗೆ ಭೂಮಿಪೂಜೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನಹೊಂದಿದ ಪ್ರಯೋಗಾಲಯ ಘಟಕವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದ,ಮತಕ್ಷೇತ್ರದಲ್ಲಿ ರಸ್ತೆ, ಚರಂಡಿ, ನಿರಾವರಿ ಯೋಜನೆ, ಶಾಲಾ ಕಟ್ಟಡಗಳ ದುರಸ್ತಿ ಹಲವು ರೀತಿಯಲ್ಲಿ ಅಭಿವೃದ್ಧಿ ಪೂರಕ ಕಾಮಗಾರಿಗಳು ಪ್ರಗತಿಯಲ್ಲಿ ಸಾಗಿವೆ. ಜನಸಾಮಾನ್ಯರ ಹಿತ ಕಾಪಾಡುವುದು ಸರ್ಕಾರದ ಪ್ರಥಮ ಕರ್ತವ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಸದ್ಯ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಜನರ ಬೇಡಿಕೆಯಂತೆಅತ್ಯಾಧುನಿಕ ಯಂತ್ರೋಪಕರಣಗಳನ್ನು ಹೊಂದಿದ ಪ್ರಯೋಗಾಲಯ ನಿರ್ಮಿಸಲಾಗಿದೆ. ಅದರಂತೆ ಆಸ್ಪತ್ರೆಯಲ್ಲಿ ಕೆಲ ಕೊಠಡಿಗಳ ದುರಸ್ತಿ ಹಾಗೂ ನವೀಕರಣಗೊಳಿಸಲು ತಿರ್ಮಾನಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು. ಸಾರ್ವಜನಿಕರು ಅಭಿವೃದ್ಧಿ ಪೂರಕ ಕಾಮಗಾರಿಗಳಿಗೆ ಸಹಕಾರ ಅತ್ಯ ಗತ್ಯವಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಮತ್ತು ತುರ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಇನ್ನೂ ಸೌಲಭ್ಯಗಳನ್ನು ಹೊಂದಿದ ತುರ್ತು ಆರೋ ಗ್ಯ ಸೇವೆ ಒದಗಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯ ತಿಸಲಾಗುವುದು,ಕಾರಣ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮೈಹಿಬೂಬ ಗೊಳಸಂಗಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು. ತಾರನಾಳ,ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅನೀಲಕುಮಾರ ಶೇಗುಣಸಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸದಸ್ಯರಾದ ಸಂಗಮ್ಮ ದೇವರಳ್ಳಿ, ಭಾರತಿ ಪಾಟೀಲ, ಮುಖಂಡರಾದ ಸಂಗನಗೌಡ ಬಿರಾದಾರ(ಜಿಟಿಸಿ) ಗಣೇಶ ಅನ್ನಗೋನಿ, ಆನಂದಗೌಡ ಬಿರಾದಾರ, ಕೆಯುಸಿಬ್ಯಾಂಕಿಅಧ್ಯಕ್ಷಸಿ ಎಲ್‌ಬಿರಾದಾರ,ಶೋಭಾ ತಳ್ಳಗಿ,ಅನೇಕರು ಭಾಗವಹಿಸಿದ್ದರು.