ಜಮಖಂಡಿ : ಈಗಾಗಲೇ ತಳವಾರ ಸಮುದಾಯದ ಮುಖಂಡರು ಹಲವಾರು ಬಾರಿ ರಾಜ್ಯ ಮಟ್ಟದ ಜನಪ್ರತಿನಿಧಿಗಳಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ನೀಡಬೇಕೆಂದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತ ಸಮದಾಯದ ಮುಖಂಡರು ಧರಣಿಗಳ ಮೇಲೆ ಧರಣಿ ನಡೆಸಿದರೂ ಸರ್ಕಾರ ಮಾತ್ರ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಮೀನಾಮೇಶ ಮಾಡುತ್ತಿದೆ ಎಂದು ಅಖಿಲ ಕರ್ನಾಟಕ ನಾಯಕ ತಳವಾರ ಹಿತರಕ್ಷಣಾ ಸಮಿತಿ ಜಮಖಂಡಿ ತಾಲ್ಲೂಕು ಘಟಕದ ಕಾರ್ಯಕರ್ತರು ಬೃಹತ್ ಮಟ್ಟದಲ್ಲಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸರಕಾರದ ವಿರುದ್ಧ ಘೋಷಣೆ ಕೂಗತ್ತಾ ನಗರದ ಕುಡಚಿ ರಸ್ತೆಯಲ್ಲಿರುವ ತಾಲ್ಲೂಕು ಆಡಳಿತ ಸೌಧಕ್ಕೆ ತಲುಪಿ, ತದನಂತರ ಉಪವಿಭಾಗ ಅಧಿಕಾರಿ ಡಾ.ಸಿದ್ದು ಹುಲ್ಲೊಳ್ಳಿ ಅವರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮೀತಿಯ ಅಧ್ಯಕ್ಷ ಈಶ್ವರ ಸನದಿ ಮಾತಾನಾಡಿದ ಅವರು, ಲಕ್ಷಾಂತರ ಮಕ್ಕಳ ಶಿಕ್ಷಣ ಭವಿಷ್ಯಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ವಿತರಿಸದೇ ಅಧಿಕಾರಿ ವರ್ಗ ಮುಳ್ಳಾಗಿ ನಿಂತಿದೆ. ಮಕ್ಕಳ, ಮಹಿಳೆಯರ, ನಿರುದ್ಯೋಗಿ ಯುವಕರ, ಶೋಷಿತ ಬಡ ರೈತ ಜನರ ಮಾನವ ಹಕ್ಕುಗಳನ್ನು ರಕ್ಷಣೆ ಮಾಡುವ ಅಧಿಕಾರಿ ವರ್ಗ ಎಲ್ಲವೂ ಮರೆತಂತ್ತೆ ಕಾಣುತ್ತದೆ.
ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶದಂತೆ ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ವಿತರಿಸಿ ಸಾಂವಿಧಾನಿಕ ಸಾಮಾಜಿಕ ನ್ಯಾಯದ ಹಕ್ಕು ರಕ್ಷಣೆ ಮಾಡಬೇಕಾಗಿತ್ತು. ಆದರೆ ಏಕೋ ಅಧಿಕಾರಿ ವರ್ಗ ಎಲ್ಲವೂ ಗಾಳಿಗೆ ತೋರಿದೆ ಎಂದು ಅಕ್ರೋಷ ಹೊರಹಾಕಿದ್ದರು.
ರಾಜ್ಯದಲ್ಲಿರುವ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಕೇಂದ್ರ ಸರಕಾರ 20-03-2020 ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿ ಗೆಜಟ್ ಹೊರಡಿಸಿದೆ. ಅದರಂತೆ ರಾಜ್ಯ ಸರಕಾರವೂ ಕೂಡಾ 28-05-2020 ರಂದು ರಾಜ್ಯ ಪತ್ರ ಹೊರಡಿಸಿ ಈ ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ವಿತರಿಸಲು ಸರಕಾರ ಸೂಚಿಸಿದೆ. ಆದರೆ ಅಧಿಕಾರಿ ವರ್ಗ ಮಾತ್ರ ಪಲಾಯನ ಮಂತ್ರ ಜಪಿಸುತ್ತ ಸುಳ್ಳಿನ ಕಂತೆ ಕಟ್ಟುತ್ತಾರೆ . ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸುತ್ತೊಲೆ ಗೊಂದಲವಿದೆ. ಸ್ವಷ್ಟಿಕರಣಕ್ಕಾಗಿ ಜಿಲ್ಲಾ ಅಧಿಕಾರಿಗಳಿಗೆ ಪತ್ರ ಬರೆದಿದ್ದೆವೆ ಎಂದು ಹೇಳತ್ತಾ ಶೋಷಿತ ಜನರ ಶ್ರಮ ಸಮಯ ಹಣ ಎಲ್ಲವೂ ಹಾಳು ಮಾಡುತ್ತಾ ನಮ್ಮ ಸಮುದಾಯದ ಜನರಿಗೆ ಶೋಷಣೆ ಮಾಡುತ್ತಾರೆ ಎಂದು ಆರೋಪ ಮಾಡಿದರು.
ಇನ್ನೂ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶಾಲಾ ದಾಖಲಾತಿ, ಸ್ಥಳ ಪರಿಶೀಲನೆ ಮತ್ತು ಸರಕಾರ ಸುತ್ತೊಲೆ, ಗೆಜಟ್ ಪಾಲಿಸದೇ ಕಛೇರಿಯಲ್ಲಿ ಕುಳಿತುಕೊಂಡು ಸಕಾರಣ ನೀಡದೆ ಅರ್ಜಿಗಳನ್ನು ತಿರಸ್ಕರಿಸುತ್ತಾರೆ. ಇದೊಂದು ದುರದ್ದೇಶಪೂರ್ವಕ, ಬೇಜವಾಬ್ದಾರಿಯುತವಾಗಿ ಕಾನೂನಿನ ವಿರುದ್ದವಾಗಿ ನಡೆದುಕೊಳ್ಳುದರ ಜೊತೆಗೆ ಶೋಷಿತ ಸಮುದಾಯದ ಮೇಲೆ ದೃಷ್ಯ ಕೃತ್ಯ ಎಸಗಿದಂತಾಗುತ್ತೆದೆ ಎಂದರು. ಈ ಕಾರಣಕ್ಕಾಗಿ ದಯಾಳುಗಳು ಸಂವಿಧಾನ ಬದ್ದವಾಗಿ ಬಂದ ಹಕ್ಕನ್ನು ನಮ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಒದಗಿಸಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಈಶ್ವರ ತಳವಾರ, ಡಿ.ಎಸ್.ತಳವಾರ, ಬಸವರಾಜ ಕೋಳಿ, ಪ್ರಕಾಶ ತಳವಾರ, ಭಾಗಪ್ಪ ತಳವಾರ, ಕಲ್ಲಪ್ಪ ಹನಗಂಡಿ, ಶಂಕರ್ ಕುರಣಿ, ಅಮಸಿದ್ದ ತಳವಾರ, ಯಂಕಪ್ಪ, ಕುಮಾರ್, ಕಾಸಪ್ಪ, ಭೀಮಪ್ಪ,ಕಲ್ಲಪ್ಪ ಇನ್ನೂ ಅನೇಕರು ಉಪಸ್ಥಿತರು.